
(ನ್ಯೂಸ್ ಕಡಬ) newskadaba.com, ನ .04 .ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಪರಿಷ್ಕೃತಗೊಂಡಿದ್ದು, ಇಂದೇ ಮಧ್ಯರಾತ್ರಿಯಿಂದ ನೂತನ ದರ ಜಾರಿಗೆ ಬರಲಿದೆ.
ದೂರದ ಉಪನಗರಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಗರಿಷ್ಠ ರೂ. 9 ರವರೆಗೆ ಟಿಕೆಟ್ ದರ ಹೆಚ್ಚಳವಾಗಲಿದೆ. ಕಡಿಮೆ ದೂರದ ಪ್ರಯಾಣಿಕರಿಗೆ ಕನಿಷ್ಠ ಪ್ರಮಾಣದಲ್ಲಿ ದರ ಏರಿಕೆಯಾಗಲಿದೆ.
ಸಾರಿಗೆ ನಿಗಮಗಳ ನಿರ್ವಹಣಾ ವೆಚ್ಚ, ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ ರೂ. 10.47 ರಷ್ಟು ಏರಿಕೆ (ವಾರ್ಷಿಕ ರೂ. 500 ಕೋಟಿ ಹೊರೆ) ಹಾಗೂ ನೌಕರರ ವೇತನ ಹೆಚ್ಚಳದಿಂದಾಗಿ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ರಾಜ್ಯದ 4 ನಿಗಮಗಳಲ್ಲಿ ಒಟ್ಟು 26,125 ಬಸ್ಗಳು ಕಾರ್ಯಾಚರಣೆ ನಡೆಸುತ್ತಿವೆ.ಪ್ರತಿದಿನ ಸುಮಾರು 1.24 ಕೋಟಿ ಪ್ರಯಾಣಿಕರು ಸಾರಿಗೆ ಸೇವೆ ಪಡೆಯುತ್ತಿದ್ದಾರೆ.ನಿಗಮಗಳ ಮೇಲೆ ಒಟ್ಟು ರೂ. 2,192 ಕೋಟಿ ಸಾಲದ ಹೊರೆಯಿದೆ.ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಯಿಂದ ನಿಗಮಗಳಿಗೆ ನಷ್ಟವಾಗುತ್ತಿಲ್ಲ ಎಂದ ಸಚಿವರು, ಸರ್ಕಾರವು ಟಿಕೆಟ್ ಮೊತ್ತವನ್ನು ಹಂತ ಹಂತವಾಗಿ ಮರುಪಾವತಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.




