(ನ್ಯೂಸ್ ಕಡಬ) newskadaba.com ಕಡಬ, ಜೂ. 08. 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯು ಮತಯಂತ್ರದ ಮೂಲಕ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಗುರುಗಳಾದ ಶ್ರೀ ವಸಂತ ಕೆ. ಇವರು ವಿದ್ಯಾರ್ಥಿಗಳಿಗೆ ಮತದಾನ ಮತ್ತು ಮತಯಂತ್ರದ ಬಗ್ಗೆ ವಿವರಿಸಿದರು. ಶಾಲಾ ನಾಯಕನ ಸ್ಥಾನಕ್ಕೆ ಎರಡು ಅಭ್ಯರ್ಥಿಗಳು ಮತ್ತು ಉಪನಾಯಕನ ಸ್ಥಾನಕ್ಕೆ 4 ಅಭ್ಯರ್ಥಿಗಳು ಕಣದಲ್ಲಿದ್ದರು.
ಅದರಲ್ಲಿ ನಂತರ ನಡೆದ ಮತ ಎಣಿಕೆಯಲ್ಲಿ ಶಾಲಾ ನಾಯಕನಾಗಿ ಚಂದ್ರಮೌಳಿ ಬಿ. (10ನೇ ತರಗತಿ) ಮತ್ತು ಉಪನಾಯಕಿಯಾಗಿ ಜಿ. ಶಾರ್ವರಿ ಬನ್ನಿಂತ್ತಾಯ (9ನೇ ತರಗತಿ) ಇವರು ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ಸಂಸ್ಥೆಯ ಸಹಶಿಕ್ಷಕಿ ಶ್ರೀಮತಿ ಸುಮಂಗಲಾ ಎ. ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸತೀಶ್ಚಂದ್ರ ಕೆ. ಇವರು ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ಹಾಗೂ ಶಾಲಾ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.









