(ನ್ಯೂಸ್ ಕಡಬ) newskadaba.com, ಎ.08 ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದ ಕದನ ವಿರಾಮದ ಗಡುವು ನಾಳೆಗೆ (ಗುರುವಾರ) ಅಂತ್ಯಗೊಳ್ಳಲಿರುವ ಬೆನ್ನಲ್ಲೇ, ಇರಾನ್‌ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಭಾರತೀಯ ರಾಯಭಾರ ಕಚೇರಿಯು “ತುರ್ತು ಎಚ್ಚರಿಕೆ” ನೀಡಿದೆ. ಸಂಭಾವ್ಯ ಸಂಘರ್ಷ ಅಥವಾ ದಾಳಿಯ ಭೀತಿಯಿಂದಾಗಿ ಪ್ರಜೆಗಳ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ರಾಯಭಾರ ಕಚೇರಿಯ ಪ್ರಮುಖ ಸೂಚನೆಗಳು:
48 ಗಂಟೆಗಳ ಕಾಲ ಮನೆಯಲ್ಲೇ ಇರಿ: ಮುಂದಿನ ಎರಡು ದಿನಗಳ ಕಾಲ ಅತ್ಯಂತ ನಿರ್ಣಾಯಕವಾಗಿದ್ದು, ಭಾರತೀಯ ಪ್ರಜೆಗಳು ಅನಗತ್ಯವಾಗಿ ಮನೆಯಿಂದ ಹೊರಬರಬಾರದು ಮತ್ತು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು.
ಮೇಲಿನ ಅಂತಸ್ತುಗಳನ್ನು ತಪ್ಪಿಸಿ: ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವವರು ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದ ಮೇಲಿನ ಅಂತಸ್ತುಗಳಲ್ಲಿ ಇರಬಾರದು ಎಂದು ಸೂಚಿಸಲಾಗಿದೆ. ಕೆಳ ಅಂತಸ್ತು ಅಥವಾ ಸುರಕ್ಷಿತ ಬಂಕರ್‌ಗಳಲ್ಲಿ ಇರುವುದು ಹಿತಕರ.ನಿರಂತರ ಸಂಪರ್ಕದಲ್ಲಿರಿ: ರಾಯಭಾರ ಕಚೇರಿಯ ಸಿಬ್ಬಂದಿಯೊಂದಿಗೆ ಮತ್ತು ಸ್ಥಳೀಯ ಭಾರತೀಯ ಸಮುದಾಯದೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ನಿರ್ದೇಶನ ನೀಡಲಾಗಿದೆ.
ಸಹಾಯವಾಣಿ ಸಂಖ್ಯೆಗಳು:
ಯಾವುದೇ ತುರ್ತು ಸಂದರ್ಭದಲ್ಲಿ ನೆರವು ಪಡೆಯಲು ರಾಯಭಾರ ಕಚೇರಿಯು ನಾಲ್ಕು ವಿಶೇಷ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಪ್ರಜೆಗಳು ಈ ಸಂಖ್ಯೆಗಳನ್ನು ತುರ್ತು ಸಂಪರ್ಕಕ್ಕಾಗಿ ಬಳಸಿಕೊಳ್ಳಬಹುದು.





