ಸುಬ್ರಾಯ ಚೊಕ್ಕಾಡಿಯವರಿಗೆ ಪ್ರತಿಷ್ಠಿತ ‘ಡಾ. ದ. ರಾ. ಬೇಂದ್ರೆ ಕಾವ್ಯ ಪ್ರಶಸ್ತಿ’ ಗೌರವ

(ನ್ಯೂಸ್‌ ಕಡಬ) newskadaba.com,  ಮಾ.27: ಖ್ಯಾತ ಕವಿ ಹಾಗೂ ಸುಳ್ಯ ತಾಲೂಕಿನ ಚೊಕ್ಕಾಡಿ ನಿವಾಸಿಯಾದ ಸುಬ್ರಾಯ ಚೊಕ್ಕಾಡಿಯವರಿಗೆ ಶಿವಮೊಗ್ಗದ ಕರ್ನಾಟಕ ಸಂಘವು ನೀಡುವ ಪ್ರತಿಷ್ಠಿತ “ಡಾ. ದ. ರಾ. ಬೇಂದ್ರೆ ಕಾವ್ಯ ಪ್ರಶಸ್ತಿ” ಜೀವಮಾನ ಸಾಧನೆಗಾಗಿ ಘೋಷಿಸಲಾಗಿದೆ.

ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರ ದೀರ್ಘಕಾಲದ ಸೇವೆ ಮತ್ತು ಕಾವ್ಯಸಾಧನೆಗೆ ಈ ಗೌರವ ನೀಡಲಾಗಿದೆ ಎಂದು ಸಂಘ ತಿಳಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶೀಘ್ರದಲ್ಲೇ ಆಯೋಜಿಸಲಾಗುವುದು ಎಂದು ಕರ್ನಾಟಕ ಸಂಘ ಪ್ರಕಟಣೆ ನೀಡಿದೆ…

Scroll to Top