ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮುಂಬೈನಲ್ಲಿ ಭಾರತದ ಮೊದಲ ಮ್ಯೂಸಿಕಲ್ ರಸ್ತೆ ಉದ್ಘಾಟನೆ – News Kadaba

ಮುಂಬೈನಲ್ಲಿ ಭಾರತದ ಮೊದಲ ಮ್ಯೂಸಿಕಲ್ ರಸ್ತೆ ಉದ್ಘಾಟನೆ

(ನ್ಯೂಸ್‌ ಕಡಬ) newskadaba.com,  ಫೆ.12 ​  ಮುಂಬೈನಲ್ಲಿ ದೇಶದ ಮೊದಲ ಮ್ಯೂಸಿಕಲ್ ರಸ್ತೆ ನಿರ್ಮಿಸಲಾಗಿದ್ದು, ಈ ರಸ್ತೆ ಮೇಲೆ ವಾಹನಗಳು ಚಲಿಸಿದಾಗ ‘ಜೈ ಹೋ’ ಹಾಡು ಕೇಳಿಸುತ್ತದೆ. ಮುಂಬೈ ಕರಾವಳಿ ರಸ್ತೆಯಲ್ಲಿ ಸ್ಥಾಪಿತವಾದ ಈ ವಿಶೇಷ ರಸ್ತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಉಪಸ್ಥಿತರಿದ್ದರು. ಈ ಕಲ್ಪನೆಯನ್ನು ಮೊದಲು ಮಾಜಿ ಸಂಸದ ರಾಹುಲ್ ಶೇವಾಲೆ ಪ್ರಸ್ತಾಪಿಸಿದ್ದರು.

ವಾಹನಗಳು ನಿಗದಿತ ವೇಗದಲ್ಲಿ ಸಾಗುವಾಗ ಮಾತ್ರ ಈ ಹಾಡು ಕೇಳಿಸಲಿದೆ. ನಾರಿಮನ್ ಪಾಯಿಂಟ್‌ನಿಂದ ವರ್ಲಿಗೆ ಹೋಗುವ ಲೇನ್‌ನಲ್ಲಿ ನಿರ್ಮಿಸಲಾದ ಈ ರಸ್ತೆಯಲ್ಲಿ, ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ವಾಹನ ಚಲಿಸಿದಾಗ ಟೈರ್‌ಗಳು ಮತ್ತು ರಸ್ತೆಯ ನಡುವೆ ಉಂಟಾಗುವ ಘರ್ಷಣೆಯಿಂದ ಶಬ್ದ ತರಂಗಗಳು ಸೃಷ್ಟಿಯಾಗುತ್ತವೆ. ಚಾಲಕರಿಗೆ ಈ ಸಂಗತಿಯನ್ನು ಮುಂಚಿತವಾಗಿ ತಿಳಿಸಲು 500 ಮೀಟರ್, 100 ಮೀಟರ್ ಮತ್ತು 60 ಮೀಟರ್ ದೂರದಲ್ಲಿ ಫಲಕಗಳನ್ನು ಅಳವಡಿಸಲಾಗಿದೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮಾಹಿತಿ ನೀಡಿದ್ದು, ಈ ರಸ್ತೆ ದೇಶದಲ್ಲಿ ಮೊದಲ ಮ್ಯೂಸಿಕಲ್ ರಸ್ತೆ ಆಗಿದ್ದು, ನಗರ ನಿವಾಸಿಗಳಿಗೆ ವಿಶೇಷ ಅನುಭವ ನೀಡುತ್ತದೆ ಮತ್ತು ಸರಿಯಾದ ವೇಗದಲ್ಲಿ ವಾಹನ ಸಾಗಿಸುವ ಪ್ರೇರಣೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಈ ರಸ್ತೆಗೆ ಧೈರ್ಯಶಾಲಿ ಮತ್ತು ಸ್ವಾಭಿಮಾನಿ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಹೆಸರನ್ನು ನೀಡಲಾಗಿದೆ.ಜಾಗತಿಕ ದೃಷ್ಟಿಕೋಣದಲ್ಲಿ, ಮ್ಯೂಸಿಕಲ್ ರಸ್ತೆ ಕಲ್ಪನೆ ಮೊದಲು 2007 ರಲ್ಲಿ ಜಪಾನ್‌ನಲ್ಲಿ ಪ್ರಾರಂಭವಾಯಿತು. ಮುಂಬೈ, ಭಾರತದಲ್ಲಿ ಮೊದಲ ಮ್ಯೂಸಿಕಲ್ ರಸ್ತೆ ನಿರ್ಮಿಸುವ ನಗರವಾಗಿ ದಾಖಲೆಯಾಗಿದೆ.

Scroll to Top