ಪದವೀಧರರಿಗೆ ಗುಡ್‌ನ್ಯೂಸ್‌ ಬ್ಯಾಂಕ್‌ ಆಫ್‌ ಬರೋಡ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com,  ಫೆ.12 ​  ಬೆಂಗಳೂರು, ಫೆ. 12: ಬ್ಯಾಂಕ್‌ ಆಫ್‌ ಬರೋಡ ಖಾಲಿ ಇರುವ ವಿವಿಧ ಹುದ್ದಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ ..ಸೀನಿಯರ್‌ ಮ್ಯಾನೇಜರ್‌, ಸೀನಿಯರ್‌ ಮ್ಯಾನೇಜರ್‌ ಕ್ರಡಿಟ್‌ ಅನಾಲಿಸ್ಟ್‌ ಸೇರಿದಂತೆ ಒಟ್ಟು 166 ಹುದ್ದೆಗಳಿವೆ. ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆ ತಿಳಿಸಿದೆ.ಕೊನೆಯ ದಿನ ಫೆಬ್ರವರಿ 26.

ಸೀನಿಯರ್‌ ಮ್ಯಾನೇಜರ್‌ ಎಂಎಸ್‌ಎಂಇ ರಿಲೇಷನ್‌ಶಿಪ್‌-113, ಸೀನಿಯರ್‌ ಮ್ಯಾನೇಜರ್‌ ಕ್ರೆಡಿಟ್‌ ಅನಾಲಿಸ್ಟ್‌-19 ಮತ್ತು ಮ್ಯಾನೇಜರ್‌ ಕ್ರೆಡಿಟ್‌ ಅನಾಲಿಸ್ಟ್‌-34 ಹುದ್ದೆಳಿವೆ. ದೇಶದ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ಸೀನಿಯರ್‌ ಮ್ಯಾನೇಜರ್‌ ಎಂಎಸ್‌ಎಂಇ ರಿಲೃಷನ್‌ ಶಿಪ್‌ ಹುದ್ದೆಗೆ ಕನಿಷ್ಠ ವಯಸ್ಸು 30, ಗರಿಷ್ಠ ವಯಸ್ಸು 40 ವರ್ಷ, ಸೀನಿಯರ್‌ ಮ್ಯಾನೇಜರ್‌ ಕ್ರೆಡಿಟ್‌ ಅನಾಲಿಸ್ಟ್‌ ಹುದ್ದೆಗೆ ಕನಿಷ್ಠ ವಯಸ್ಸು 24, ಗರಿಷ್ಠ ವಯಸ್ಸು 34 ವರ್ಷ ಮತ್ತು ಮ್ಯಾನೇಜರ್‌ ಕ್ರೆಡಿಟ್‌ ಅನಾಲಿಸ್ಟ್‌ ಹುದ್ದಗೆ ಕನಿಷ್ಠ ವಯಸ್ಸು 25, ಗರಿಷ್ಠ ವಯಸ್ಸು 34 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳ ರಿಯಾಯಿತಿ ಇದೆ.

Scroll to Top