(ನ್ಯೂಸ್ ಕಡಬ) newskadaba.com, ನ.12 ನವದೆಹಲಿ: ಪ್ರಯಾಣಿಕರ ಬೇಡಿಕೆಯ ಮೇರೆಗೆ ಭಾರತೀಯ ರೈಲ್ವೆಯು ಮಕ್ಕಳ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆಯನ್ನು ಮಾಡಿದೆ. ಇದು ರೈಲು ಪ್ರಯಾಣ ಮಾಡಬಯಸುವ ಪೋಷಕರು ತಿಳಿದುಕೊಳ್ಳಬೇಕಾದ ಪ್ರಮುಖ ನಿಯಮಗಳಲ್ಲಿ ಒಂದಾಗಿದೆ.ಇನ್ನು ಮುಂದೆ ಐದು ವರ್ಷದ ಒಳಗಿನ ಮಕ್ಕಳಿಗೆ ರೈಲು ಟಿಕೆಟ್ ಪಡೆಯಲು ಕೆಲವು ನಿಯಮಗಳು ಅನ್ವಯವಾಗುತ್ತದೆ. ಇದು ಬುಕ್ಕಿಂಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ ಇನ್ನು ಮುಂದೆ 5 ವರ್ಷದೊಳಗಿನ ಮಗುವಿಗೆ ಬರ್ತ್ ಬುಕ್ ಮಾಡುವ ಆಯ್ಕೆ ಇದೆ.
ಮಕ್ಕಳಿಗಾಗಿ ಪ್ರತ್ಯೇಕ ಬರ್ತ್ ಬುಕ್ಕಿಂಗ್ ಮಾಡಬಹುದಾಗಿದೆ. ಒಂದು ವೇಳೆ ಅವರು ಪ್ರತ್ಯೇಕ ಬರ್ತ್ ಬಯಸದೇ ಇದ್ದರೆ ಅದು ಹಿಂದಿನಂತೆ ಉಚಿತವಾಗಿರುತ್ತದೆ.ಮುಂದಿನ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜಾದಿನಗಳಿಗೆ ಭಾರತೀಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದು, ಈ ವೇಳೆ ಭಾರತೀಯ ರೈಲ್ವೆಯು ಈ ಹೊಸ ನಿಯಮವನ್ನು ಘೋಷಣೆ ಮಾಡಿದೆ.
ಮಕ್ಕಳಿಗಾಗಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವಾಗ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ಆದರೆ ಪ್ರತ್ಯೇಕ ಬರ್ತ್ ಬೇಕಿದ್ದರೆ ಟಿಕೆಟ್ ಖರೀದಿ ಮಾಡಬೇಕಾಗುತ್ತದೆ. ಇದಕ್ಕಾಗಿ ನಿರ್ದಿಷ್ಟ ಶುಲ್ಕ ಪಾವತಿ ಮಾಡಬೇಕು. ವಯಸ್ಸಿನ ಮಿತಿಯನ್ನು ಆಧರಿಸಿ ಭಾರತೀಯ ರೈಲ್ವೆ ಮಕ್ಕಳ ಟಿಕೆಟ್ ಶುಲ್ಕವನ್ನು ನಿಗದಿಪಡಿಸಿದೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರತ್ಯೇಕ ಬರ್ತ್ ಅಗತ್ಯವಿಲ್ಲದೆ ಇದ್ದರೆ ಉಚಿತವಾಗಿ ಪ್ರಯಾಣಿಸಬಹುದು. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬರ್ತ್ ಬೇಕಿದ್ದರೆ ಪೂರ್ಣ ವಯಸ್ಕ ದರವನ್ನು ವಿಧಿಸಲಾಗುತ್ತದೆ. 5 ರಿಂದ 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಕ್ಕಳ ಶುಲ್ಕ ವಿಧಿಸಲಾಗುತ್ತದೆ. 12 ವರ್ಷ ಮೇಲ್ಪಟ್ಟವರಿಗೆ ಪೂರ್ಣ ವಯಸ್ಕರ ದರವನ್ನು ವಿಧಿಸಲಾಗುತ್ತದೆ.
ಹನ್ನೆರಡು ವರ್ಷ ತುಂಬಿದ ಬಳಿಕ ಮಕ್ಕಳಿಗೆ ಪೋಷಕರೊಂದಿಗೆ ಸೀಟು ನೀಡಲಾಗುವುದಿಲ್ಲ. ಅವರಿಗಾಗಿ ಟಿಕೆಟ್ ಕಾಯ್ದಿರಸಲೇಬೇಕು. ಈ ನಿಯಮವನ್ನು 2020ರ ಮಾರ್ಚ್ ತಿಂಗಳಲ್ಲೇ ಭಾರತೀಯ ರೈಲ್ವೆಯ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ










