ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬರು ಸಾವು – News Kadaba

ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಭಾರತೀಯ ವಿದ್ಯಾರ್ಥಿನಿಯೊಬ್ಬರು ಸಾವು

(ನ್ಯೂಸ್‌ ಕಡಬ) newskadaba.com,  ನ.10 : ಅಮೆರಿಕಾದ ಉನ್ನತ ವ್ಯಾಸಂಗಕ್ಕೆಂದು ತೆರಳಿದ ಭಾರತದ ವಿದ್ಯಾರ್ಥಿನಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ. ಆಂಧ್ರಪ್ರದೇಶ ಮೂಲದ ರಾಜ್ಯಲಕ್ಷ್ಮಿ ಯರ್ಲಗಡ್ಡ ಸಾವನ್ನಪ್ಪಿದ ವಿದ್ಯಾರ್ಥಿನಿ. ನವೆಂಬರ್ 7 ರಂದು ಈಕೆ ಸಾವನ್ನಪ್ಪಿದ್ದು ಈಕೆಯ ಶವವನ್ನು ಈಗ ಭಾರತಕ್ಕೆ ತರುವುದಕ್ಕೆ ಕುಟುಂಬದವರು ಕೇಂದ್ರ ವಿದೇಶಾಂಗ ಇಲಾಖೆಯ ನೆರವು ಕೋರಿದ್ದಾರೆ. ಕೃಷಿ ಕುಟುಂಬದಿಂದ ಬಂದ ರಾಜ್ಯಲಕ್ಷ್ಮಿ ಯರ್ಲಗುಡ್ಡ ಅಮೆರಿಕಾದಲ್ಲಿ ನಿದ್ರೆಯಲ್ಲಿದ್ದಾಗಲೇ ಸಾವನ್ನಪ್ಪಿದ್ದಾರೆ.

ಅಮೆರಿಕಾದಲ್ಲೇ ಪದವಿ ಪಡೆದು ಕೆಲಸ ಹುಡುಕುತ್ತಿದ್ದ ವಿದ್ಯಾರ್ಥಿನಿ

ರಾಜ್ಯಲಕ್ಷ್ಮಿ ಟೆಕ್ಸಾಸ್‌ ಎ & ಎಂ ವಿಶ್ವವಿದ್ಯಾಲಯ ಕಾರ್ಪಸ್ ಕ್ರಿಸ್ಟಿಯಿಂದ ಇತ್ತೀಚೆಗೆ ಪದವೀಧರೆಯಾಗಿದ್ದು, ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಅಲ್ಲೇ ಉದ್ಯೋಗವನ್ನು ಹುಡುಕುತ್ತಿದ್ದರು. ಆಕೆಯ ಸಾವಿಗೂ ಮೂರು ದಿನಕ್ಕೆ ಮೊದಲು ಆಕೆ ತೀವ್ರವಾದ ಕಫ ಹಾಗೂ ಎದೆನೋವಿನಿಂದ ಬಳಲುತ್ತಿದ್ದರು ಆದರೆ ನವಂಬರ್ 7 ರಂದು ಅವರು ಹಠಾತ್ ಆಗಿ ಸಾವನ್ನಪ್ಪಿದ್ದಾರೆ. ಆಕೆ ಇಟ್ಟಿದ್ದ ಅಲಾರಾಂ ಅದಾಗೇ ಆಫ್ ಆದರೂ ಆಕೆ ಮಾತ್ರ ಮೇಲೆದಿಲ್ಲ. ನಂತರ ಆಕೆಯ ಸ್ನೇಹಿತರು ಬಂದು ನೋಡಿದಾಗ ಆಕೆ ನಿದ್ದೆಯಲ್ಲಿಯೇ ಸಾವನ್ನಪ್ಪಿರುವುದು ತಿಳಿದು ಬಂದಿದೆ.

ರಾಜ್ಯಲಕ್ಷ್ಮಿ ಆಂಧ್ರಪ್ರದೇಶದ ಬಾಪಟ್ಲಾದ ಕರ್ಮೆಚೇಡು ಎಂಬಲ್ಲಿನ ನಿವಾಸಿಯಾಗಿದ್ದಾರೆ. ಈ ಊರಿನಲ್ಲಿ ಸಣ್ಣ ಕೃಷಿಭೂಮಿಯನ್ನೇ ಅವಲಂಬಿಸಿರುವ ತನ್ನ ಕುಟುಂಬಕ್ಕೆ ಉತ್ತಮ ಭವಿಷ್ಯವನ್ನು ನಿರ್ಮಿಸುವ ಕನಸಿನೊಂದಿಗೆ ರಾಜಿ ಅಮೆರಿಕಕ್ಕೆ ಬಂದಿದ್ದರು ಎಂದು ವರದಿಯಾಗಿದೆ. ರಾಜ್ಯಲಕ್ಷ್ಮಿ ಅವರ ಹಠಾತ್ ಸಾವನಿಂದಾಗಿ ಅವರ ಕುಟುಂಬ ಆಘಾತಕ್ಕೀಡಾಗಿದೆ. ಆಕೆಯ ಕುಟುಂಬಕ್ಕೆ ನೆರವು ನೀಡುವುದಕ್ಕೆ ಚೈತನ್ಯ ಎಂಬುವವರು ಗೋಫಂಡ್ ಅಭಿಯಾನ ನಡೆಸಿದ್ದು, ಪ್ರತಿಭಾವಂತ ವಿದ್ಯಾರ್ಥಿಯಾಗಿ ಆಕೆ ಭರವಸೆಯನ್ನು ಹೊಂದಿದ್ದ ಆತ್ಮವಾಗಿದ್ದಳು. ತನ್ನ ಹೆತ್ತವರು ತಮ್ಮ ಕೃಷಿ ಪ್ರಯಾಣವನ್ನು ಮುಂದುವರಿಸಲು ಸಹಾಯ ಮಾಡುವ ಕನಸು ಕಂಡಿದ್ದಳು ಎಂದು ಚೈತನ್ಯ ಬರೆದಿದ್ದಾರೆ.

Scroll to Top