ಹೃದ್ರೋಗ, ಕ್ಯಾನ್ಸರ್‌ನಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವವರಿಗೆ ಇನ್ನು ಅಮೆರಿಕ ವೀಸಾ ಕಷ್ಟ!



(ನ್ಯೂಸ್ಕಡಬ) newskadaba.com,  ನ.08 ವಾಷಿಂಗ್ಟನ್‌: ವಿದೇಶಿಗರು ಅಮೆರಿಕಕ್ಕೆ ಬರುವುದನ್ನು ತಡೆಯಲು ಹಲವು ನೆಪಗಳನ್ನು ನೀಡಿ ನಿರ್ಬಂಧಗಳನ್ನು ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ, ಇದೀಗ ಬೊಜ್ಜು, ಹೃದ್ರೋಗ, ಕ್ಯಾನ್ಸರ್‌ನಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವವರಿಗೆ ವೀಸಾ ನೀಡದಂತೆ ಮಾರ್ಗಸೂಚಿ ಹೊರಡಿಸಿದೆ.







ಸರ್ಕಾರದ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ






ಅಮೆರಿಕದಲ್ಲಿ ಗ್ರೀನ್‌ಕಾರ್ಡ್‌ ಹೊಂದಿರುವವರಿಗೆ ಸರ್ಕಾರದ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯಿದೆ. ವಲಸಿಗರ ಮೇಲೆ ಇಂತಹ ಖರ್ಚು ಮಾಡುವುದನ್ನು ತಪ್ಪಿಸಲು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವೀಸಾ ಕೊಡದೇ ಇರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಮೂಲಕ, ಹೃದ್ರೋಗ, ಉಸಿರಾಟದ ಸಮಸ್ಯೆ, ಕ್ಯಾನ್ಸರ್‌, ಮಧುಮೇಹ, ಚಯಾಪಚಯ ಕಾಯಿಲೆಗಳು, ನರವೈಜ್ಞಾನಿಕ ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿರುವವರಿಗೆ ವೀಸಾ ಸಿಗುವುದು ಕಷ್ಟವಾಗಲಿದೆ. ಅಂತೆಯೇ, ಬೊಜ್ಜಿರುವವರಲ್ಲಿ ಆಸ್ತಮಾ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಉದ್ಭವಿಸುವ ಸಂಭವವಿರುವುದರಿಂದ ಅವರಿಗೂ ಈ ನಿರ್ಬಂಧ ಅನ್ವಯವಾಗಲಿದೆ.

 

error: Content is protected !!
Scroll to Top