ಕಡಬದಲ್ಲಿ ನೂತನ ‘ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್’ ಕಛೇರಿ ಉದ್ಘಾಟನೆ

(ನ್ಯೂಸ್‌ ಕಡಬ) newskadaba.com,  ನ.08: ಕಡಬ: ಕಡಬ ತಾಲೂಕು ಕೇಂದ್ರಿತವಾಗಿ ನೂತನವಾಗಿ ಪ್ರಾರಂಭಿಸಲಾದ ಕಡಬ ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್‌ನ ಕಛೇರಿಯು ಎ.ಬಿ. ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ (ದಿನಾಂಕ 31-10-2025) ರಂದು ಶುಭಾರಂಭಗೊಂಡಿತು.

​ಕ್ಲಬ್‌ನ ನೂತನ ಕಛೇರಿಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಆಶೀರ್ವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಛೇರಿ ಇರುವ ಎ.ಬಿ. ಕಾಂಪ್ಲೆಕ್ಸ್‌ನ ಮಾಲೀಕರಾದ ಶ್ರೀ. ಮಾಥ್ಯು ಜೋಸೆಫ್ ಮತ್ತು ಅವರ ಧರ್ಮಪತ್ನಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

​ನಂತರ, ಸೈಂಟ್ ಮೇರಿಸ್ ಓರ್ಥೋಡಕ್ಸ್ ಚರ್ಚಿನ ಧರ್ಮಗುರುಗಳಾದ ವಂ.ಫಾ. ಪೌಲ್ ಕೆ. ಬೆನ್ನಿ ಅವರು ಕಛೇರಿಯನ್ನು ಆಶೀರ್ವದಿಸಿ, ಕ್ಲಬ್‌ನ ಭವಿಷ್ಯದ ಕಾರ್ಯಗಳಿಗೆ ಶುಭಹಾರೈಸಿದರು.

​ಕಾರ್ಯಕ್ರಮದಲ್ಲಿ ಕ್ಲಬ್‌ನ ಅಧ್ಯಕ್ಷರಾದ ಶ್ರೀ. ಮನೋಜ್ ಅವರು ಉಪಸ್ಥಿತರಿದ್ದ ಎಲ್ಲರನ್ನೂ ಸ್ವಾಗತಿಸಿದರು. ಕ್ಲಬ್‌ನ ಕಾರ್ಯದರ್ಶಿಯಾದ ಶ್ರೀ. ಶಾಂಡೋ. ಕೆ.ಪಿ. ಅವರು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

​ಈ ಸಂದರ್ಭದಲ್ಲಿಅಡ್ವ. ಜೋಸೆಫ್ ಪೀಟರ್, ಬಿಜು ಮಾಥ್ಯು,  ಕ್ಲಬ್‌ನ ಎಲ್ಲಾ ಸದಸ್ಯರು ಮತ್ತು ಇತರ ಆಸಕ್ತರು ಹಾಜರಿದ್ದು, ನೂತನ ಕಛೇರಿ ಪ್ರಾರಂಭಕ್ಕೆ ಸಹಕಾರ ನೀಡಿದರು. ಕಡಬ ತಾಲೂಕಿನಲ್ಲಿ ಸಾಮಾಜಿಕ ಮತ್ತು ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದೊಂದಿಗೆ ಈ ಕ್ಲಬ್ ಪ್ರಾರಂಭಗೊಂಡಿದೆ

Scroll to Top