(ನ್ಯೂಸ್ ಕಡಬ) newskadaba.com, ನ.08: ಕಡಬ: ಕಡಬ ತಾಲೂಕು ಕೇಂದ್ರಿತವಾಗಿ ನೂತನವಾಗಿ ಪ್ರಾರಂಭಿಸಲಾದ ಕಡಬ ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್ನ ಕಛೇರಿಯು ಎ.ಬಿ. ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ (ದಿನಾಂಕ 31-10-2025) ರಂದು ಶುಭಾರಂಭಗೊಂಡಿತು.
ಕ್ಲಬ್ನ ನೂತನ ಕಛೇರಿಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಆಶೀರ್ವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಛೇರಿ ಇರುವ ಎ.ಬಿ. ಕಾಂಪ್ಲೆಕ್ಸ್ನ ಮಾಲೀಕರಾದ ಶ್ರೀ. ಮಾಥ್ಯು ಜೋಸೆಫ್ ಮತ್ತು ಅವರ ಧರ್ಮಪತ್ನಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ, ಸೈಂಟ್ ಮೇರಿಸ್ ಓರ್ಥೋಡಕ್ಸ್ ಚರ್ಚಿನ ಧರ್ಮಗುರುಗಳಾದ ವಂ.ಫಾ. ಪೌಲ್ ಕೆ. ಬೆನ್ನಿ ಅವರು ಕಛೇರಿಯನ್ನು ಆಶೀರ್ವದಿಸಿ, ಕ್ಲಬ್ನ ಭವಿಷ್ಯದ ಕಾರ್ಯಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ನ ಅಧ್ಯಕ್ಷರಾದ ಶ್ರೀ. ಮನೋಜ್ ಅವರು ಉಪಸ್ಥಿತರಿದ್ದ ಎಲ್ಲರನ್ನೂ ಸ್ವಾಗತಿಸಿದರು. ಕ್ಲಬ್ನ ಕಾರ್ಯದರ್ಶಿಯಾದ ಶ್ರೀ. ಶಾಂಡೋ. ಕೆ.ಪಿ. ಅವರು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿಅಡ್ವ. ಜೋಸೆಫ್ ಪೀಟರ್, ಬಿಜು ಮಾಥ್ಯು, ಕ್ಲಬ್ನ ಎಲ್ಲಾ ಸದಸ್ಯರು ಮತ್ತು ಇತರ ಆಸಕ್ತರು ಹಾಜರಿದ್ದು, ನೂತನ ಕಛೇರಿ ಪ್ರಾರಂಭಕ್ಕೆ ಸಹಕಾರ ನೀಡಿದರು. ಕಡಬ ತಾಲೂಕಿನಲ್ಲಿ ಸಾಮಾಜಿಕ ಮತ್ತು ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದೊಂದಿಗೆ ಈ ಕ್ಲಬ್ ಪ್ರಾರಂಭಗೊಂಡಿದೆ








