ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಸಾರ್ವಕಾಲಿಕ ದಾಖಲೆ ಬರೆದ ಚಿನ್ನ, ಬೆಳ್ಳಿ..! – News Kadaba

ಸಾರ್ವಕಾಲಿಕ ದಾಖಲೆ ಬರೆದ ಚಿನ್ನ, ಬೆಳ್ಳಿ..!

(ನ್ಯೂಸ್‌ ಕಡಬ) newskadaba.com ಅ. 15. ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಒಂದೇ ದಿನದಲ್ಲಿ 2,850 ರೂ. ಏರಿಕೆಯಾಗುವುದರ ಮೂಲಕ 10 ಗ್ರಾಂಗೆ 1,30,800 ರೂ. ತಲುಪಿದೆ.

ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, 99.9 ಪ್ರತಿಶತ ಶುದ್ಧತೆಯ ಅಮೂಲ್ಯ ಲೋಹ ಸೋಮವಾರ 10 ಗ್ರಾಂಗೆ 1,27,950 ರೂ.ಗೆ ಮುಕ್ತಾಯಗೊಂಡಿತ್ತು. 99.5 ಪ್ರತಿಶತ ಶುದ್ಧ ಚಿನ್ನವು ಮಂಗಳವಾರ 2,850 ರೂ. ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ದಾಖಲೆಯ 1,30,200 ರೂ. ತಲುಪಿದೆ. ಬಂಗಾರದ ಬೆಲೆ ಅಂದರೆ 2024ರ ಡಿಸೆಂಬರ್‌ ನಿಂದ ಇಲ್ಲಿಯವರೆಗೆ ಶೇ.65.67ರಷ್ಟು ಏರಿಕೆಯಾಗಿದೆ.

ಜಾಗತಿಕ ರಾಜಕೀಯ ಕಾರಣಗಳು, ಪೂರೈಕೆ ನಿರ್ಬಂಧಗಳು ಮತ್ತು ಬಲವಾದ ದೇಶೀಯ ಹೂಡಿಕೆ ಬೇಡಿಕೆ ಹಾಗೂ ದುರ್ಬಲ ರೂಪಾಯಿಯಿಂದ ಚಿನ್ನ ಮತ್ತು ಬೆಳ್ಳಿ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ. ಏರಿಕೆಯ ಪ್ರವೃತ್ತಿ ಹಾಗೇ ಮುಂದುವರೆದಿದೆ.

ಇತ್ತ ಬೆಳ್ಳಿ ಕೂಡ 6,000 ರೂ.ಗಳಷ್ಟು ಏರಿಕೆಯಾಗಿ ಪ್ರತಿ ಕಿಲೋ ಗ್ರಾಂಗೆ 1,85,000 ರೂ.ಗಳ ಜೀವಮಾನದ ಗರಿಷ್ಠ ಮಟ್ಟ ತಲುಪಿದೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ), ಇದು ಸತತ 5ನೇ ದಿನದ ಏರಿಕೆಯನ್ನು ಸೂಚಿಸುತ್ತದೆ. ಹಿಂದಿನ ಮಾರುಕಟ್ಟೆ ಅವಧಿಯಲ್ಲಿ ಬಿಳಿ ಲೋಹವು ಪ್ರತಿ ಕೆಜಿಗೆ 1,79,000 ರೂ.ಗಳಲ್ಲಿ ಸ್ಥಿರವಾಗಿತ್ತು.

ರೂಪಾಯಿ ಕುಸಿತವೇ ಬೆಲೆ ಏರಿಕೆಗೆ ಕಾರಣ:
ಹಬ್ಬ ಮತ್ತು ಮದುವೆ ಋತುವಿಗೆ ಮುಂಚಿತವಾಗಿ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ನಿರಂತರ ಬೇಡಿಕೆ ಹೆಚ್ಚಾಗಿದೆ. ಮಂಗಳವಾರ ಯುಎಸ್‌‍ ಡಾಲರ್‌ ವಿರುದ್ಧ 12 ಪೈಸೆ ಕುಸಿದು 88.80ರಷ್ಟು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಮರಳಿದ್ದು, ಬೆಳ್ಳಿ ಬೆಲೆಯಲ್ಲಿ ತೀವ್ರ ಏರಿಕೆಗೆ ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಬೆಳ್ಳಿ ಬೆಲೆ 95,300 ರೂ. ಅಥವಾ ಶೇ. 106.24ರಷ್ಟು ಏರಿಕೆಯಾಗಿದೆ. ಡಿಸೆಂಬರ್‌ 31, 2024 ರಂದು ಪ್ರತಿ ಕಿಲೋಗ್ರಾಂಗೆ 89,700 ರೂಪಾಯಿ ಇತ್ತು. ಸತತ ಎಂಟು ವಾರಗಳ ಕಾಲ ಏರಿಕೆ ಕಂಡ ಸ್ಪಾಟ್‌ ಚಿನ್ನ, ಪ್ರತಿ ಔನ್ಸ್ ಗೆ 4,179 ಡಾಲರ್‌ಗಳ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ.

Scroll to Top