ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಉತ್ತರಾಖಂಡದ ಚಮೋಲಿಯಲ್ಲಿ ಮೇಘಸ್ಫೋಟ- ಹಲವರು ನಾಪತ್ತೆಯಾಗಿರುವ ಶಂಕೆ – News Kadaba

ಉತ್ತರಾಖಂಡದ ಚಮೋಲಿಯಲ್ಲಿ ಮೇಘಸ್ಫೋಟ- ಹಲವರು ನಾಪತ್ತೆಯಾಗಿರುವ ಶಂಕೆ

(ನ್ಯೂಸ್‌ ಕಡಬ) newskadaba.com,ಆ.23 ಡೆಹ್ರಾಡೂನ್ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದ ಪರಿಣಾಮ ಅನೇಕ ಮನೆಗಳು ಸರ್ವನಾಶವಾಗಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಶನಿವಾರ ಮುಂಜಾನೆ 1 ಗಂಟೆಯ ಸುಮಾರಿಗೆ ಮೇಘಸ್ಫೋಟ ಸಂಭವಿಸಿದೆ. ಅವಶೇಷಗಳಡಿ ಹುಡುಗಿಯೊಬ್ಬಳು ಸಿಲುಕಿಕೊಂಡಿದ್ದು, ಪೊಲೀಸ್ ಹಾಗೂ ಎಸ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮೇಘಸ್ಫೋಟದಿಂದ ಅನೇಕ ವಾಹನಗಳು ಹಾಗೂ ಅಂಗಡಿಗಳು ಸಹ ಜಲಸಮಾಧಿಯಾಗಿದೆ.

ಡೆಹ್ರಾಡೂನ್, ತೆಹ್ರಿ, ಪೌರಿ, ಚಮೋಲಿ, ರುದ್ರಪ್ರಯಾಗ, ನೈನಿತಾಲ್ ಮತ್ತು ಅಲ್ಮೋರಾ ಸೇರಿದಂತೆ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರಕ್ಷಣಾ ತಂಡಗಳೊಂದಿಗೆ ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಥರಾಲಿ ಬಜಾರ್, ರಾಡಿಬಾಗ್ ಮತ್ತು ಚೆಪ್ಡೊ ಗ್ರಾಮಗಳು ಹೆಚ್ಚು ಹಾನಿಗೊಳಗಾಗಿವೆ ಎಂದು ವರದಿಗಳು ತಿಳಿಸಿವೆ. ಮೇಘಸ್ಫೋಟದ ಪರಿಣಾಮ ಅವಶೇಷಗಳು ರಸ್ತೆಯಲ್ಲಿ ಬಿದ್ದಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

Scroll to Top