BMTC ಬಸ್ ಗೆ ಒಂದೇ ತಿಂಗಳಲ್ಲಿ ನಾಲ್ವರು ಬಲಿ: ಅಪಘಾತಗಳಿಗೆ ಕಾರಣವಾಗುತ್ತಿವೆ ಶಬ್ದರಹಿತ e-busಗಳು..!



(ನ್ಯೂಸ್ಕಡಬ) newskadaba.com,ಆ.23 ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಈ ಅಪಘಾತಗಳಿಗೆ ಶಬ್ದರಹಿತ ಎಲೆಕ್ಟ್ರಿಕ್ ಬಸ್ ಗಳೇ ಕಾರಣವಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.







ಈ ಎಲೆಕ್ಟ್ರಿಕ್ ಬಸ್ ಗಳು ಹಠಾತ್ ವೇಗವರ್ಧನೆ ಮತ್ತು ಕಠಿಣ ಬ್ರೇಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಈ ಬಸ್ ಗಳ ಚಾಲಕರನ್ನು ಬಿಎಂಟಿಸಿ ನೇಮಿಸುತ್ತಿಲ್ಲ. ಬದಲಿಗೆ ಒಪ್ಪಂದದ (ಜಿಸಿಸಿ) ಅಡಿಯಲ್ಲಿ ಆ ಬಸ್‌ಗಳನ್ನು ನಿರ್ವಹಿಸುವ ಕಂಪನಿಗಳೇ ನೇಮಕ ಮಾಡುತ್ತಿವೆ ಎಂದು ತಿಳಿದುಬಂದಿದೆ.






ಖಾಸಗಿ ಬಸ್‌ಗಳು, ಕ್ಯಾಬ್‌ಗಳು ಮತ್ತು ಆಟೋಗಳನ್ನು ಪ್ರತಿನಿಧಿಸುವ ಕರ್ನಾಟಕ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಅವರು ಮಾತನಾಡಿ, ಬಿಎಂಟಿಸಿಯಿಂದ ನೇರವಾಗಿ ನೇಮಕಗೊಂಡ ಚಾಲಕರು ಕಠಿಣ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಆದರೆ, ಎಲೆಕ್ಟ್ರಿಕ್ ಬಸ್‌ಗಳನ್ನು ಖಾಸಗಿ ಕಂಪನಿಗಳಿಂದ ನೇಮಿಸಲ್ಪಟ್ಟ ಚಾಲಕರು ನಿರ್ವಹಿಸುತ್ತಾರೆ. ಈ ಹಿಂದೆ ಲಘು ಮೋಟಾರು ವಾಹನಗಳನ್ನು ನಿರ್ವಹಿಸುತ್ತಿದ್ದ ಚಾಲಕರಿಗೆ ದೊಡ್ಡ ಎಲೆಕ್ಟ್ರಿಕ್ ಬಸ್‌ಗಳನ್ನು ನೀಡಲಾಗುತ್ತಿದೆ. ಇದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಪಘಾತಗಳಿಗೆ ಮತ್ತೊಂದು ಕಾರಣವೆಂದರೆ ಈ ಬಸ್‌ಗಳು ಶಬ್ದರಹಿತವಾಗಿರುವುದು. ಸಾಮಾನ್ಯವಾಗಿ ವಾಹನಗಳನ್ನು ಇತರೆ ವಾಹನ ಬಳಕೆದಾರರು ಹಾಗೂ ಪಾದಚಾರಿಗಳು ಅವುಗಳ ಶಬ್ಧ ಮೂಲಕ ಪತ್ತೆ ಮಾಡುತ್ತಾರೆ. ಆದರೆ, ಎಲೆಕ್ಟ್ರಿಕ್ ಬಸ್ ಗಳು ಶಬ್ಧರಹಿತವಾಗಿರುವುದರಿಂದ ಅಪಘಾತಗಳಿಗೆ ಇದು ಕಾರಣವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಲೆಕ್ಟ್ರಿಕ್ ಬಸ್’ಗಳ ಹಠಾತ್ ಬ್ರೇಕ್ ಮತ್ತು ವೇಗವರ್ಧನೆಯಿಂದ ಬಸ್‌ನೊಳಗಿನ ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆಯ ಪ್ರಯಾಣಿಕರು ಸಮತೋಲನ ಕಳೆದುಕೊಳ್ಳುವುದರಿಂದ ಗಾಯಗೊಳ್ಳುವುದು ಮಾತ್ರವಲ್ಲದೆ, ರಸ್ತೆಯಲ್ಲಿರುವ ವಾಹನ ಬಳಕೆದಾರರಿಗೆ ಕೂಡ ಸಮಸ್ಯೆಯಾಗುತ್ತಿದೆ, ಈ ವರ್ಷದ ಆರಂಭದಲ್ಲಿ ಬಿಎಂಟಿಸಿ ಚಾಲಕರಿಗೆ ಕಾರ್ಯಾಗಾರಗಳನ್ನು ನಡೆಲಾಗಿದೆ. ಆದರೆ ಅದು ಹೆಚ್ಚು ಸಹಾಯ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

error: Content is protected !!
Scroll to Top