ರೈಲಿನಲ್ಲೂ ಲಗೇಜ್‌ ನಿಯಮ ಜಾರಿಗೆ ಮುಂದಾದ ರೈಲ್ವೇ ಇಲಾಖೆ..?



(ನ್ಯೂಸ್ ಕಡಬ) newskadaba.com ನವದೆಹಲಿ, ಆ. 20. ಸಾಮಾನ್ಯವಾಗಿ ಬೇರೊಂದು ಊರಿಗೆ ಪ್ರಯಾಣ ಮಾಡಬೇಕು ಅಂದು ಕೊಂಡಿರುವವರು ಹೆಚ್ಚಾಗಿ ಅಗ್ಗದ ಮತ್ತು ಆರಾಮದಾಯಕವಾದ ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುವುದು ಅಲ್ಲದೇ ರೈಲಿನಲ್ಲಿ ಪ್ರಯಾಣ ಮಾಡುವಾಗ ಹಲವಾರು ವಸ್ತುಗಳನ್ನು, ಲಗೇಜ್‌ಗಳನ್ನು ಹೊತ್ತೊಯ್ಯುವುದು ಕೂಡಾ ಸಹಜ. ಆದರೆ ಇದೀಗ ಭಾರತೀಯ ರೈಲ್ವೆ ಇಲಾಖೆಯು ಹೆಚ್ಚುವರಿ ಲಗೇಜ್‌ಗೆ ಬ್ರೇಕ್‌ ಹಾಕಲು ಮುಂದಾಗಿದೆ.







ಆದಾಯ ಹೆಚ್ಚಳಕ್ಕೆ ಮುಂದಾಗಿರುವ ಭಾರತೀಯ ರೈಲ್ವೆ ಇಲಾಖೆಯು ಶೀಘ್ರದಲ್ಲೇ ಹೊಸ ನಿಯಮ ಜಾರಿಗೊಳಿಸಲು ಸಿದ್ದತೆ ಮಾಡಿಕೊಳ್ಳುತ್ತಿದೆ. ಅದರಂತೆ ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚುವರಿ ಲಗೇಜ್‌ಗಳು ಇದ್ದರೆ ಹೆಚ್ಚುವರಿ ಮೊತ್ತವನ್ನ ಪಾವತಿಸಬೇಕಾಗುತ್ತದೆ. ವಿಮಾನಗಳ ಮಾದರಿಯಲ್ಲಿಯೇ ರೈಲಿನಲ್ಲೂ ಲಗೇಜ್‌ ಸಾಗಿಸುವಂತೆ ಮಾಡಲು ರೈಲ್ವೆ ಇಲಾಖೆ ಈ ನಿಯಮ ಜಾರಿಗೆ ತರಲು ಮುಂದಾಗಿದೆ.






 

ಕೋಚ್‌ ಶ್ರೇಣಿಗಳ ಆಧಾರದ ಮೇಲೆ ಹೆಚ್ಚುವರಿ ಲಗೇಜ್‌ಗೆ ಹೆಚ್ಚುವರಿ ದರ ನಿಗದಿ ಮಾಡಲಿದೆ. ಹೊಸ ನಿಯಮಗಳ ಪ್ರಕಾರ, ಎಸಿ ಮೊದಲನೇ ದರ್ಜೆಯಲ್ಲಿ 70 ಕೆ.ಜಿ, ಎಸಿ ಎರಡನೇ ದರ್ಜೆಯಲ್ಲಿ 50 ಕೆ.ಜಿ, ಎಸಿ ಮೂರನೇ ದರ್ಜೆ ಹಾಗೂ ಸ್ಲೀಪರ್ ಕೋಚ್‌ನಲ್ಲಿ 40 ಕೆ.ಜಿಗೆ ಅವಕಾಶವಿರುತ್ತದೆ. ಟಿಕೆಟ್‌ ಗೆ ಅನುಗುಣವಾಗಿ ಲಗೇಜ್‌ಗೆ ದರ ನಿಗದಿ ಮಾಡಲಾಗುತ್ತದೆ. ನಿಯಮಿತಕ್ಕಿಂತಲೂ ಹೆಚ್ಚಿನ ತೂಕದ ಲಗೇಜ್‌ ಇದ್ದರೆ, ಉಳಿದ ಲಗೇಜ್‌ಗೆ ಹೆಚ್ಚುವರು ಹಣ ಪಾವತಿ ಮಾಡಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

 

error: Content is protected !!
Scroll to Top