(ನ್ಯೂಸ್ ಕಡಬ) newskadaba.com ಕಡಬ, ಆ. 20. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಬಿಳಿನೆಲೆ ಒಕ್ಕೂಟದ ವ್ಶಾಪ್ತಿಯ ಸಣ್ಣಾರ ಪದ್ಮಯ್ಯ ನಾಯ್ಕರವರ ಪತ್ನಿ ಜಯಾ ರವರಿಗೆ ಪೂಜ್ಶ ವೀರೇಂದ್ರ ಹೆಗ್ಗಡೆಯವರು ಮಂಜೂರುಗೊಳಿಸಿದ ಗಾಲಿ ಕುರ್ಚಿಯನ್ನು ಜಯ ಎಂಬವರ ಸ್ವಗೃಹದಲ್ಲಿ ವಿತರಿಸಲಾಯಿತು.
ಅನಾರೋಗ್ಯದಿಂದ ಶಾರೀರಿಕವಾಗಿ ಅಸಕ್ತರಾಗಿ ನಡೆಯಲು ಕಷ್ಟಪಡುತ್ತಿರುವ ಜಯಾರವರ ಮನವಿಯನ್ನು ಪರಿಗಣಿಸಿದ ಪೂಜ್ಯರು ಗಾಲಿಕುರ್ಚಿಯನ್ನು ಮಂಜೂರು ಮಾಡಿರುತ್ತಾರೆ. ಗಾಲಿ ಕುರ್ಚಿಯನ್ನು ಫಲಾನುಭವಿ ಜಯಾರವರಿಗೆ ಹಸ್ತಾಂತರಿಸಿದ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯು ಸಾಲ ನೀಡುವ ಸಂಸ್ಥೆಯೆಂದು ಅನೇಕರ ಅಭಿಪ್ರಾಯವಿದೆ, ಆದರೆ ಧರ್ಮಸ್ಥಳ ಯೋಜನೆ ಸಹಾಯಮಾಡುವ ದಷ್ಟಿಯಿಂದ ಪ್ರಾರಂಭಿಸಲಾದ ಸಂಸ್ಥೆಯೆಂದು ಸಾರ್ವಜನಿಕರಿಗೆ ಅರ್ಥಪಡಿಸುವ ಅನಿವಾರ್ಯತೆ ಪ್ರಸ್ತುತ ಕಾಲಗಟ್ಟದಲ್ಲಿದೆ.
ಯೋಜನೆಯ ಮೂಲಕ ಸ್ವಾವಲಂಬಿಗಳಾಗಲು ಬ್ಶಾಂಕ್ ಮೂಲಕ ಆರ್ಥಿಕ ಸಹಾಯ ಪಡೆಯಲು ನೆರವಾಗುತ್ತದೆ. ಸಮಾಜದ ನ್ಯೂನತೆಗಳನ್ನು ಗುರುತಿಸಿ ಅವಶ್ಶಕ ಸ್ಪಂದಿಸುವ ಸಾಂತ್ವಾನದ ಮೂಲಕ, ಧನಸಹಾಯ ಹಾಗೂ ಅಗತ್ಶ ಸಲಕರಣೆಗಳನ್ನು ಒದಗಿಸುವ ಮೂಲಕ ಸಮಾಜದ ಮುಖ್ಶವಾಹಿನಿಗೆ ಪ್ರತೀಯೊಬ್ಬರೂ ಬರಬೇಕು ಎನ್ನುವುದು ಪೂಜ್ಯ ಖಾವಂದರ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ನಿಕಟಪೂರ್ವ ವಲಯಾಧ್ಯಕ್ಷರು ಸತೀಶ್ ಎರ್ಕ, ಬಿಳಿನೆಲೆ ವಲಯ ಸಂರಕ್ಷಣಾ ವೇದಿಕೆಯ ಅಧ್ಯಕ್ಷರು ಲೋಕನಾಥ ಗೌಡ ಕೈಕಂಬ, ಬಿಳಿನೆಲೆ ಒಕ್ಕೂಟದ ಅಧ್ಯಕ್ಷರು ರಾಜೇಶ್ ಒಗ್ಗು, ಒಕ್ಕೂಟದ ಕಾರ್ಯದರ್ಶಿ ಲಕ್ಷಣ ಗೌಡ ಸಣ್ಣಾರ, ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸತೀಶ್ ಎ ಸ್ಥಳೀಯರಾದ ದುರ್ಗಾ ದಾಸ್ ಹಾಗೂ ಜಯರವರ ಪತಿ ಪದ್ಮಯ್ಯ ನಾಯ್ಕ ಸಣ್ಣಾರ ಮಗ ದಯಾನಂದ ನಾಯ್ಕ ಸಣ್ಣಾರ ಉಪಸ್ಥಿತರಿದ್ದರು..









