News Kadaba

ಅಮೆರಿಕ-ಇರಾನ್ ಒಪ್ಪಂದ ಮುರಿತ ಹಾರ್ಮುಜ್ ಜಲಸಂಧಿಯಲ್ಲಿ ಭೀಕರ ಗುಂಡಿನ ಚಕಮಕಿ

(ನ್ಯೂಸ್‌ ಕಡಬ) newskadaba.com,  ಜು.16 ಅಮೆರಿಕವು ತನ್ನ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ಇರಾನ್, ಯುಎಸ್ ಸೈನಿಕರೊಂದಿಗಿನ ತಿಳಿವಳಿಕೆ ಒಪ್ಪಂದದಿಂದ ತಾನು ಸಂಪೂರ್ಣವಾಗಿ ಹಿಂದೆ ಸರಿಯುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಬುಧವಾರ ಮುಂಜಾನೆ ಅಮೆರಿಕ ಪಡೆಗಳು ಇರಾನಿನ ಬಂದರುಗಳ ಮೇಲೆ ಕಠಿಣ ನೌಕಾ ದಿಗ್ಬಂಧನವನ್ನು ಮರುಸ್ಥಾಪಿಸಿದ ಬೆನ್ನಲ್ಲೇ, ಆಯಕಟ್ಟಿನ ಪ್ರದೇಶವಾದ ಹಾರ್ಮುಜ್ ಜಲಸಂಧಿಯಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ.ಎಷ್ಟೇ ಭಾರಿ ಬೆಲೆ ತೆರಬೇಕಾಗಿ ಬಂದರೂ ಹಾರ್ಮುಜ್ ಜಲಸಂಧಿಯ ಮೇಲೆ […]

ಅಮೆರಿಕ-ಇರಾನ್ ಒಪ್ಪಂದ ಮುರಿತ ಹಾರ್ಮುಜ್ ಜಲಸಂಧಿಯಲ್ಲಿ ಭೀಕರ ಗುಂಡಿನ ಚಕಮಕಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಮುಂದಿನ 6 ತಿಂಗಳಲ್ಲಿ 72,186 ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ!

(ನ್ಯೂಸ್‌ ಕಡಬ) newskadaba.com,  ಜು.16 : ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಒಳಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಮುಂದಿನ ಆರು ತಿಂಗಳೊಳಗೆ ಒಟ್ಟು 72,186 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ. 2 ತಿಂಗಳಲ್ಲಿ ಅಧಿಸೂಚನೆ, 4 ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣ ಹಾಗೂ 6 ತಿಂಗಳೊಳಗೆ ನೇಮಕಾತಿ ಪತ್ರ ವಿತರಿಸಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸುಮಾರು 40,000 ಹುದ್ದೆಗಳ ನೇಮಕಾತಿ ಉಸ್ತುವಾರಿ ಹೊತ್ತಿದೆ.

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಮುಂದಿನ 6 ತಿಂಗಳಲ್ಲಿ 72,186 ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ! Read More »

ಉದ್ಯೋಗ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಣಂಬೂರು ಕಡಲತೀರದಲ್ಲಿ ತೀವ್ರಗೊಂಡ ಸಮುದ್ರ ಕೊರೆತ: ಪ್ರವಾಸಿಗರಿಗೆ ಪ್ರವೇಶ ನಿಷೇಧ

(ನ್ಯೂಸ್‌ ಕಡಬ) newskadaba.com,   ಜು.14: ಬಲವಾದ ಗಾಳಿ ಹಾಗೂ ಪ್ರಕ್ಷುಬ್ಧ ಅಲೆಗಳ ಹೊಡೆತಕ್ಕೆ ಸಿಲುಕಿ ಮಂಗಳೂರಿನ ಪಣಂಬೂರು ಅಂತಾರಾಷ್ಟ್ರೀಯ ಕಡಲತೀರದಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದೆ. ಇದರಿಂದಾಗಿ ಕಡಲತೀರದ ಮರಳು ವೇಗವಾಗಿ ಕೊಚ್ಚಿಹೋಗುತ್ತಿದ್ದು, ಕರಾವಳಿ ಮೂಲಸೌಕರ್ಯಕ್ಕೆ ಧಕ್ಕೆಯುಂಟಾಗಿದೆ. ಮುಖ್ಯ ಟಿಕೆಟ್ ಕೌಂಟರ್ ಮತ್ತು ಆಡಳಿತ ಕಚೇರಿಯ ಸಮೀಪವೇ ಕಡಲು ಕೊರೆತ ಉಂಟಾಗಿದ್ದು, ಕಡಲತೀರದಲ್ಲಿದ್ದ ಎರಡು ಬೃಹತ್ ಮರಗಳು ಧರೆಗುರುಳಿವೆ. ಸದ್ಯ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರು ಸಮುದ್ರಕ್ಕಿಳಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಕೋಸ್ಟ್‌ ಗಾರ್ಡ್‌ ಕಚೇರಿ ಇರುವ ಭಾಗದಲ್ಲಿ ಮತ್ತಷ್ಟು ಹಾನಿಯಾಗದಂತೆ

ಪಣಂಬೂರು ಕಡಲತೀರದಲ್ಲಿ ತೀವ್ರಗೊಂಡ ಸಮುದ್ರ ಕೊರೆತ: ಪ್ರವಾಸಿಗರಿಗೆ ಪ್ರವೇಶ ನಿಷೇಧ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗಗನಯಾನದತ್ತ ಇಸ್ರೋ ದಿಟ್ಟ ಹೆಜ್ಜೆ: ಮೂರು ಅತ್ಯಂತ ಸಂಕೀರ್ಣ ಪರೀಕ್ಷೆಗಳು ಯಶಸ್ವಿ

(ನ್ಯೂಸ್‌ ಕಡಬ) newskadaba.com,  ಜು.13 : ಭಾರತದ ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಗೆ ಸಂಬಂಧಿಸಿದಂತೆ ಇಸ್ರೋ ಭಾನುವಾರ ಮೂರು ಅತ್ಯಂತ ಸಂಕೀರ್ಣ ಮತ್ತು ಪ್ರಮುಖ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಬಾಹ್ಯಾಕಾಶದಿಂದ ಮರಳಿದ ನಂತರ ಕ್ರೂ ಮಾಡ್ಯೂಲ್ ಸಮುದ್ರದ ನೀರಿನ ಮೇಲೆ ಸುರಕ್ಷಿತವಾಗಿ ತೇಲಲು ನೆರವಾಗುವ ‘ಗ್ಯಾಸ್ ಆಧಾರಿತ ಹೊಸ ವ್ಯವಸ್ಥೆ’ಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಪ್ಯಾರಾಚೂಟ್‌ಗಳನ್ನು ರಕ್ಷಿಸುವ ಕವರ್‌ನ ಎರಡು ಭಾಗಗಳು (CSU-1 ಮತ್ತು CSU-2) ನಿಗದಿತ ಸಮಯದಲ್ಲಿ ಸರಿಯಾಗಿ ಬೇರ್ಪಡುವುದನ್ನು ದೃಢೀಕರಿಸಲಾಯಿತು.ಕ್ರೂ ಮಾಡ್ಯೂಲ್ ಮತ್ತು ಪ್ರೊಪಲ್ಷನ್ ಭಾಗವನ್ನು ಜೋಡಿಸುವ ಕೇಬಲ್‌ಗಳು

ಗಗನಯಾನದತ್ತ ಇಸ್ರೋ ದಿಟ್ಟ ಹೆಜ್ಜೆ: ಮೂರು ಅತ್ಯಂತ ಸಂಕೀರ್ಣ ಪರೀಕ್ಷೆಗಳು ಯಶಸ್ವಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಟ್ಲದ ಕನ್ಯಾನ ಗ್ರಾಮದಲ್ಲಿ ದುರ್ಘಟನೆ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ!

(ನ್ಯೂಸ್‌ ಕಡಬ) newskadaba.com,  ಜು.10 ವಿಟ್ಲ: ಕುಟುಂಬದಿಂದ ದೂರವಾಗಿ ಮನನೊಂದಿದ್ದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಕನ್ಯಾನ ಗ್ರಾಮದ ಕೊಣಲೆ ಮಳವೆಲಿನಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಈಶ್ವರ ನಾಯ್ಕ (51) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ವಿಟ್ಲ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

ವಿಟ್ಲದ ಕನ್ಯಾನ ಗ್ರಾಮದಲ್ಲಿ ದುರ್ಘಟನೆ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಡಿತರ ಚೀಟಿದಾರರೇ ಗಮನಿಸಿ: ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮೊಬೈಲ್ ಲಿಂಕ್ ಮಾಡಲು ಸುವರ್ಣಾವಕಾಶ

(ನ್ಯೂಸ್‌ ಕಡಬ) newskadaba.com,  ಜು.10  ಕರ್ನಾಟಕದ ಪಡಿತರ ಚೀಟಿದಾರರು ತಮ್ಮ ಕಾರ್ಡ್‌ನಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಮುಕ್ತ ಅವಕಾಶ ಕಲ್ಪಿಸಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 31, 2027 ರವರೆಗೆ ಅಂತಿಮ ಗಡುವು ನೀಡಲಾಗಿದೆ.   ಏನೆಲ್ಲಾ ತಿದ್ದುಪಡಿ ಮಾಡಿಸಬಹುದು: ಹೊಸ ಸದಸ್ಯರ ಹೆಸರು ಸೇರ್ಪಡೆ/ತೆಗೆದುಹಾಕುವುದು ,ಕುಟುಂಬದ ಮುಖ್ಯಸ್ಥರ ಬದಲಾವಣೆ ಹಾಗೂ ಫೋಟೋ ಅಪ್ಡೇಟ್,ನ್ಯಾಯಬೆಲೆ ಅಂಗಡಿ ವಿಳಾಸ ಬದಲಾವಣೆ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದು…ಬೇಕಾಗುವ ಪ್ರಮುಖ ದಾಖಲೆಗಳು: ಪತ್ನಿ ಹೆಸರು

ಪಡಿತರ ಚೀಟಿದಾರರೇ ಗಮನಿಸಿ: ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮೊಬೈಲ್ ಲಿಂಕ್ ಮಾಡಲು ಸುವರ್ಣಾವಕಾಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮುಂದಿನ 3 ದಿನ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ: ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್!

(ನ್ಯೂಸ್‌ ಕಡಬ) newskadaba.com,  ಜು.10 : ಮುಂಬರುವ ಮೂರು ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮುನ್ನೆಚ್ಚರಿಕೆಯಾಗಿ ಸಮುದ್ರ ತೀರ ಹಾಗೂ ತಗ್ಗು ಪ್ರದೇಶದ ಜನರಿಗೆ ಸುರಕ್ಷಿತವಾಗಿರಲು ಸೂಚಿಸಲಾಗಿದೆ.

ಮುಂದಿನ 3 ದಿನ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ: ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನದ ಪ್ರಿಯರಿಗೆ ನಿರಾಳ: ಸತತ ಇಳಿಕೆ ಕಂಡ ಹಳದಿ ಲೋಹದ ಬೆಲೆ; ಬೆಳ್ಳಿ ದರ ಸ್ಥಿರ!

(ನ್ಯೂಸ್‌ ಕಡಬ) newskadaba.com,  ಜು.08 : 24 ಕ್ಯಾರೆಟ್ ಚಿನ್ನ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ ₹770 ಇಳಿಕೆಯಾಗಿದೆ. ಸದ್ಯ 1 ಗ್ರಾಮ್ ಬೆಲೆ ₹14,449 ಆಗಿದೆ. (ಕಳೆದ 5 ದಿನಗಳಲ್ಲಿ ಒಟ್ಟು ₹2,240 ಇಳಿಕೆ ಕಂಡಿದೆ). 22 ಕ್ಯಾರೆಟ್ ಚಿನ್ನ : ಆಭರಣ ಚಿನ್ನದ ಬೆಲೆಯಲ್ಲಿ 10 ಗ್ರಾಮ್‌ಗೆ ₹700 ಇಳಿಕೆಯಾಗಿದ್ದು, ಪ್ರಸ್ತುತ 1 ಗ್ರಾಮ್ ಬೆಲೆ ₹13,245 ತಲುಪಿದೆ. ಚಿನ್ನದ ಬೆಲೆ ಇಳಿಕೆಯಾಗಿದ್ದರೂ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಮೂರು ದಿನಗಳಿಂದ

ಚಿನ್ನದ ಪ್ರಿಯರಿಗೆ ನಿರಾಳ: ಸತತ ಇಳಿಕೆ ಕಂಡ ಹಳದಿ ಲೋಹದ ಬೆಲೆ; ಬೆಳ್ಳಿ ದರ ಸ್ಥಿರ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪೆಟ್ರೋಲ್ ಬಂಕ್‌ಗೆ ವಂಚಿಸಿ ಪರಾರಿಯಾಗಿದ್ದ ಮೂವರ ಬಂಧನ: ಶಿರ್ವ ಪೊಲೀಸರ ಭರ್ಜರಿ ಕಾರ್ಯಾಚರಣೆ

(ನ್ಯೂಸ್‌ ಕಡಬ) newskadaba.com, ಜು.03 ಉಡುಪಿ: ಪೆಟ್ರೋಲ್ ಬಂಕ್ ಒಂದರಲ್ಲಿ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡು, ಹಣ ಪಾವತಿಸದೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ ನಟಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.ಶಿರ್ವ ಕೋಟೆಕಾರ್‌ನ ಮಹಮ್ಮದ್ ರಿಯಾಜ್ (26), ಭೂತಬೆಟ್ಟಿನ ಮಹಮ್ಮದ್ ಅಫ್ರಾಜ್ (23) ಮತ್ತು ಉಡುಪಿ ಅಂಬಾಗಿಲಿನ ಆಶಿಲ್ (21). ಕೃತ್ಯಕ್ಕೆ ಬಳಸಿದ್ದ ಫೋರ್ಡ್ ಇಕೋಸ್ಪೋರ್ಟ್ ಕಾರು.ಜೂನ್ 27ರ ರಾತ್ರಿ ಕುರ್ಕಾಲು ಗ್ರಾಮದ ಸುಭಾಸ್ ನಗರದ ಪೆಟ್ರೋಲ್ ಬಂಕ್‌ನಲ್ಲಿ ₹4,711 ಮೌಲ್ಯದ ಡೀಸೆಲ್

ಪೆಟ್ರೋಲ್ ಬಂಕ್‌ಗೆ ವಂಚಿಸಿ ಪರಾರಿಯಾಗಿದ್ದ ಮೂವರ ಬಂಧನ: ಶಿರ್ವ ಪೊಲೀಸರ ಭರ್ಜರಿ ಕಾರ್ಯಾಚರಣೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ ತಾಲೂಕಿನಲ್ಲಿ ವರುಣನ ಆರ್ಭಟ: ಮರ ಬಿದ್ದು ಮನೆಗಳು ಜಖಂ, ನಿರಾಶ್ರಿತರಾದ ನಿವಾಸಿಗಳು

(ನ್ಯೂಸ್‌ ಕಡಬ) newskadaba.com, ಜು.02: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ಮನೆಗಳಿಗೆ ಭಾರಿ ಹಾನಿ ಸಂಭವಿಸಿದೆ. ಅಜೆಕಲ ನಿವಾಸಿ ಚಂದ್ರಶೇಖರ ಅವರ ಮನೆ ಮೇಲೂ ಮರ ಬಿದ್ದಿದ್ದು, ನಿವಾಸವು ವಾಸಕ್ಕೆ ಸಂಪೂರ್ಣ ಅಯೋಗ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರು ಸದ್ಯ ಬಾಡಿಗೆ ಮನೆಯನ್ನು ಆಶ್ರಯಿಸಿದ್ದಾರೆ. ಅಲಂಗಾರು ನಿವಾಸಿ ವನಜಾ ಅವರ ಮನೆಯೂ ಭಾರಿ ಮಳೆಯ ಪರಿಣಾಮ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ.

ಬಂಟ್ವಾಳ ತಾಲೂಕಿನಲ್ಲಿ ವರುಣನ ಆರ್ಭಟ: ಮರ ಬಿದ್ದು ಮನೆಗಳು ಜಖಂ, ನಿರಾಶ್ರಿತರಾದ ನಿವಾಸಿಗಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top