ಪಡಿತರ ಚೀಟಿದಾರರೇ ಗಮನಿಸಿ: ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮೊಬೈಲ್ ಲಿಂಕ್ ಮಾಡಲು ಸುವರ್ಣಾವಕಾಶ



(ನ್ಯೂಸ್‌ ಕಡಬ) newskadaba.com,  ಜು.10  ಕರ್ನಾಟಕದ ಪಡಿತರ ಚೀಟಿದಾರರು ತಮ್ಮ ಕಾರ್ಡ್‌ನಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಮುಕ್ತ ಅವಕಾಶ ಕಲ್ಪಿಸಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 31, 2027 ರವರೆಗೆ ಅಂತಿಮ ಗಡುವು ನೀಡಲಾಗಿದೆ.







 

ಏನೆಲ್ಲಾ ತಿದ್ದುಪಡಿ ಮಾಡಿಸಬಹುದು: ಹೊಸ ಸದಸ್ಯರ ಹೆಸರು ಸೇರ್ಪಡೆ/ತೆಗೆದುಹಾಕುವುದು ,ಕುಟುಂಬದ ಮುಖ್ಯಸ್ಥರ ಬದಲಾವಣೆ ಹಾಗೂ ಫೋಟೋ ಅಪ್ಡೇಟ್,ನ್ಯಾಯಬೆಲೆ ಅಂಗಡಿ ವಿಳಾಸ ಬದಲಾವಣೆ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದು…ಬೇಕಾಗುವ ಪ್ರಮುಖ ದಾಖಲೆಗಳು: ಪತ್ನಿ ಹೆಸರು ಸೇರ್ಪಡೆಗೆ: ಆಧಾರ್ ಕಾರ್ಡ್, ಮದುವೆ ಪ್ರಮಾಣಪತ್ರ, ಮತ್ತು ಪೋಷಕರ ಪಡಿತರ ಚೀಟಿ… ಮಗುವಿನ ಹೆಸರು ಸೇರ್ಪಡೆಗೆ: ಮಗುವಿನ ಜನನ ಪ್ರಮಾಣಪತ್ರ ಹಾಗೂ ಪೋಷಕರ ಆಧಾರ್ ಕಾರ್ಡ್.






 

ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಸೈಬರ್ ಕೇಂದ್ರಗಳ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ahara.kar.nic.in ಗೆ ಭೇಟಿ ನೀಡಿ, ‘ಇ-ಸೇವೆಗಳು’ ವಿಭಾಗದಲ್ಲಿ ‘ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ’ ಆಯ್ಕೆ ಮಾಡಿ. ಬಳಿಕ ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ.

ಅರ್ಜಿ ಸಲ್ಲಿಸಿದ ನಂತರ ಸಿಗುವ ಸ್ವೀಕೃತಿ ಪತ್ರವನ್ನು ಸುರಕ್ಷಿತವಾಗಿಟ್ಟುಕೊಳ್ಳಿ. ದಾಖಲೆಗಳು ಸರಿಯಾಗಿದ್ದಲ್ಲಿ 15 ರಿಂದ 30 ದಿನಗಳ ಒಳಗಾಗಿ ಪರಿಷ್ಕೃತ ರೇಷನ್ ಕಾರ್ಡ್ ನಿಮ್ಮ ಮನೆಗೆ ತಲುಪಲಿದೆ.

 

error: Content is protected !!
Scroll to Top