Kadaba

ಕಡಬ: ಬೈಕ್ ಢಿಕ್ಕಿಯಾಗಿ ಪಾದಚಾರಿ ಮೃತ್ಯು ► ರಸ್ತೆ ದಾಟುತ್ತಿದ್ದಾಗ ನಡೆದ ಘಟನೆ

(ನ್ಯೂಸ್ ಕಡಬ) newskadaba.com ಕಡಬ, ಜು.30. ಇಲ್ಲಿನ ಮುಖ್ಯ ಪೇಟೆಯ ಪಂಜ ರಸ್ತೆಯಲ್ಲಿ ಪಾದಚಾರಿ ವೃದ್ಧರೋರ್ವರಿಗೆ ಬೈಕೊಂದು ಢಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಕಡಬ ಸಮುದಾಯ ಆಸ್ಪತ್ರೆಯ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿ ದೇವಪ್ಪ ಗೌಡ (80) ಎಂಬವರಿಗೆ ಪಂಜಕ್ಕೆ ತೆರಳುತ್ತಿದ್ದ ಬೈಕ್ ಢಿಕ್ಕಿಯಾದುದರಿಂದ ಗಾಯಗಳಾಗಿದ್ದು, ಕಡಬ ಸಮುದಾಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಡಬ: ಬೈಕ್ ಢಿಕ್ಕಿಯಾಗಿ ಪಾದಚಾರಿ ಮೃತ್ಯು ► ರಸ್ತೆ ದಾಟುತ್ತಿದ್ದಾಗ ನಡೆದ ಘಟನೆ Read More »

ಕರಾವಳಿ

ಬಲ್ಯ: ಅಪರಿಚಿತ ಮಹಿಳೆಯ ಶವ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜು.30. ಇಲ್ಲಿನ ಬಲ್ಯ ಗ್ರಾಮದ ಕೆಮ್ಮತ ಕೂಟೇಲು ಎಂಬಲ್ಲಿ ಗುಂಡ್ಯ ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆವೊಂದು ತೇಲಾಡುವ ಸ್ಥಿತಿಯಲ್ಲಿ ಭಾನುವಾರ ಅಪರಾಹ್ನ ಪತ್ತೆಯಾಗಿದೆ. ಮಹಿಳೆಯು ಕೆಂಪು ಬಣ್ಣದ ಚೂಡಿದಾರ್ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕಳೆದೆರಡು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಸ್ಥಳೀಯ ವ್ಯಕ್ತಿಯೋರ್ವರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಲ್ಯ: ಅಪರಿಚಿತ ಮಹಿಳೆಯ ಶವ ಪತ್ತೆ Read More »

ಕರಾವಳಿ

ಪುಳಿಕುಕ್ಕು: ಸೇತುವೆಯಿಂದ ಬಿದ್ದು ವ್ಯಕ್ತಿ ನೀರುಪಾಲು

(ನ್ಯೂಸ್ ಕಡಬ) newskadaba.com ಕಡಬ, ಜು.29. ಠಾಣಾ ವ್ಯಾಪ್ತಿಯ ಪುಳಿಕುಕ್ಕು ಎಂಬಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಗೆ ಸೇತುವೆಯ ಮೇಲಿನಿಂದ ಬಿದ್ದ ವ್ಯಕ್ತಿಯೋರ್ವರು ನೀರುಪಾಲಾದ ಘಟನೆ ಶನಿವಾರ ಅಪರಾಹ್ನ ನಡೆದಿದೆ‌. ನೀರುಪಾಲಾದವರನ್ನು ಎಡಮಂಗಲ ಗ್ರಾಮದ ಕೂಟಾಜೆ ನಿವಾಸಿ ಧರ್ಮಪಾಲ(43) ಎಂದು ಗುರುತಿಸಲಾಗಿದೆ. ಇವರು ಇಂದು ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೆಂಡತಿಗೆ ಕರೆ ಮಾಡಿ ಹೇಳಿದ್ದು, ನಂತರ ಸೇತುವೆಯ ಮೇಲಿನಿಂದ ಕೆಳಗಡೆ ಬಿದ್ದಿದ್ದಾರೆ‌ ಎನ್ನಲಾಗಿದೆ. ಈ ಬಗ್ಗೆ ಧರ್ಮಪಾಲರವರ ಪತ್ನಿ ವಿಶಾಲಾಕ್ಷಿ ಎಂಬವರು ಕಡಬ ಠಾಣೆಗೆ ದೂರು

ಪುಳಿಕುಕ್ಕು: ಸೇತುವೆಯಿಂದ ಬಿದ್ದು ವ್ಯಕ್ತಿ ನೀರುಪಾಲು Read More »

ಕರಾವಳಿ

ಸೋಮವಾರದಂದು ಕಡಬದಲ್ಲಿ ಕಾಂಗ್ರೆಸ್ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶ ► ರಾಜ್ಯದ ವಿವಿಧ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತಿ

(ನ್ಯೂಸ್ ಕಡಬ) newskadaba.com ಕಡಬ, ಜು.29. ಕಡಬ ಬ್ಲಾಕ್ ಕಾಂಗ್ರೇಸ್ ಸಮಿತಿ ಆಶ್ರಯದಲ್ಲಿ ತಾಲೂಕು ಮಟ್ಟದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶವು ಜುಲೈ 31 ನೇ ಸೋಮವಾರ ಬೆಳಿಗ್ಗೆ ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಲಿದೆ ಎಂದು ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಿವಾಕರ ಗೌಡ ಶೀರಾಡಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಮಾವೇಶದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ

ಸೋಮವಾರದಂದು ಕಡಬದಲ್ಲಿ ಕಾಂಗ್ರೆಸ್ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶ ► ರಾಜ್ಯದ ವಿವಿಧ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತಿ Read More »

ಕರಾವಳಿ

ಕಡಬ: ವೃತ್ತಿ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ

(ನ್ಯೂಸ್ ಕಡಬ) newskadaba.com ಕಡಬ, ಜು.29. ಉದ್ಯೋಗ ಖಾತರಿ ಯೋಜನೆ ಬಂದ ಬಳಿಕ ಸಮಾಜದಲ್ಲಿ ಬಹಳಷ್ಟು ಅಭಿವೃದ್ದಿ ಕಾರ್ಯಗಳು ನಡೆದಿದ್ದು ಇದು ಬಡವರಿಗೆ ವರದಾನವಿದ್ದಂತೆ ಎಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮಾಜಿ ಓಂಬುಡ್ಸ್‌ಮೆನ್ ಶೀನಶೆಟ್ಟಿ ಹೇಳಿದರು. ಅವರು ಕಡಬ ಸಮೀಪದ ಕೊರುಂದೂರು ಅಂಗನವಾಡಿ ಕೇಂದ್ರದಲ್ಲಿ ನಡೆದ ಮಹಿಳೆಯರ ವೃತ್ತಿ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆ ಬಂದ ಬಳಿಕ ಗ್ರಾಮ ಮಟ್ಟದ ಅಭಿವೃದ್ದಿಯಲ್ಲಿ ಬದಲಾವಣೆ ಕಂಡಿದೆ,

ಕಡಬ: ವೃತ್ತಿ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ Read More »

ಕರಾವಳಿ

ನೆಟ್ಟಣದಲ್ಲಿ ಬಾರ್‍ಗಾಗಿ ಕಟ್ಟಡ ಆರೋಪ ► ಕಡಬ ತಹಶೀಲ್ದಾರ್ ರಿಂದ ಕಟ್ಟಡ ನಿರ್ಮಾಣಕ್ಕೆ ತಡೆ

(ನ್ಯೂಸ್ ಕಡಬ) newskadaba.com ಕಡಬ, ಜು.28. ಬಿಳಿನೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಟ್ಟಣದ ಮರವಂಜಿ ಎಂಬಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡದಲ್ಲಿ ಮದ್ಯದಂಗಡಿ ತೆರಯಲು ತೆರೆಮರೆಯಲ್ಲಿ ಕಸರತ್ತು ನಡೆಸಲಾಗುತ್ತಿದೆ ಎನ್ನುವ ಸಾರ್ವಜನಿಕರ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸ್ಥಳಕ್ಕಾಗಮಿಸಿದ ಕಡಬ ತಹಶೀಲ್ದಾರ್ ಅವರು ಕಟ್ಟಡ ಕಾಮಗಾರಿ ನಡೆಸದಂತೆ ಸೂಚನೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನೆಟ್ಟಣದ ರಾಜ್ಯ ಹೆದ್ದಾರಿಯ ಬದಿಯಲ್ಲಿದ್ದ ಮದ್ಯದಂಗಡಿಯನ್ನು ತೆರವುಗೊಳಿಸಿ ಇದನ್ನು ಮರವಂಜಿಯಲ್ಲಿ ತೋಮ್ಸನ್ ಎಂಬವರು ತನ್ನ ಸ್ವಂತ ಜಾಗದಲ್ಲಿ

ನೆಟ್ಟಣದಲ್ಲಿ ಬಾರ್‍ಗಾಗಿ ಕಟ್ಟಡ ಆರೋಪ ► ಕಡಬ ತಹಶೀಲ್ದಾರ್ ರಿಂದ ಕಟ್ಟಡ ನಿರ್ಮಾಣಕ್ಕೆ ತಡೆ Read More »

ಕರಾವಳಿ

ಮರ್ದಾಳ-ಕೊಣಾಜೆ ರಸ್ತೆಯಲ್ಲಿ ಮೈಲುಗಲ್ಲುಗಳೇ ಉಲ್ಟಾ-ಪಲ್ಟಾ

(ನ್ಯೂಸ್ ಕಡಬ) newskadaba.com ಕಡಬ, ಜು.28. ಮರ್ದಾಳದಿಂದ ಕೊಣಾಜೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊಸದಾಗಿ ಅಳವಡಿಸಿರುವ ಮೈಲುಗಲ್ಲಿನಲ್ಲಿ ಕಿ.ಮೀ. ನಮೂದಿಸುವಾಗ ಎಡವಟ್ಟು ಮಾಡಲಾಗಿದೆ. ಮರ್ದಾಳ-ಕೊಣಾಜೆ ರಸ್ತೆಯು “ನಮ್ಮ ಗ್ರಾಮ ನಮ್ಮ ರಸ್ತೆ” ಯೋಜನೆಯಡಿಯಲ್ಲಿ ಬ್ರಾಂತಿಕಟ್ಟೆಯಿಂದ ಸುಳ್ಯ ತನಕ ಡಾಮರೀಕರಣಗೊಂಡಿದ್ದು ಇದೀಗ ನೂತನವಾಗಿ ಅಳವಡಿಸಲಾದ ಮೈಲುಗಲ್ಲು ತಪ್ಪು ಮಾಹಿತಿ ನೀಡುವಂತಾಗಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಕೊಣಾಜೆ ರಸ್ತೆಗೆ ತಿರುಗುವಲ್ಲಿ ಐತ್ತೂರು 3 ಕಿ.ಮೀ. ಎಂದು ಬರೆಯಲಾಗಿದೆ. ಅಲ್ಲಿ ಬೆತ್ತೋಡಿ 3. ಕಿ.ಮೀ ಎಂದಾಗಬೇಕು ಹಾಗೂ ಸುಳ್ಯ ಸಮೀಪ ಐತ್ತೂರು 3. ಕಿ.ಮೀ

ಮರ್ದಾಳ-ಕೊಣಾಜೆ ರಸ್ತೆಯಲ್ಲಿ ಮೈಲುಗಲ್ಲುಗಳೇ ಉಲ್ಟಾ-ಪಲ್ಟಾ Read More »

ಕರಾವಳಿ

ದೇರಾಜೆಕ್ರಾಸ್ – ಗಾಣದಕೊಟ್ಟಿಗೆ ಸಂಪರ್ಕ ರಸ್ತೆಗೆ ತಡೆ ► ಸ್ಥಳೀಯರಿಂದ ಕಡಬ ತಹಶೀಲ್ದಾರ್‍ಗೆ ದೂರು

(ನ್ಯೂಸ್ ಕಡಬ) newskadaba.com ಕಡಬ, ಜು.28. ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಯ ಗ್ರಾಮದ ದೇರಾಜೆಕ್ರಾಸ್ – ಗಾಣದಕೊಟ್ಟಿಗೆ ಸಂಪರ್ಕ ರಸ್ತೆಯ ಗಾಣದಕೊಟ್ಟಿಗೆ ಎಂಬಲ್ಲಿ ರಸ್ತೆಯಲ್ಲಿ ಹರಿಯುತ್ತಿರುವ ನೀರನ್ನು ಖಾಸಗಿ ವ್ಯಕ್ತಿಗಳಿಬ್ಬರು ತಮ್ಮ ಸ್ವಹಿತಕ್ಕಾಗಿ ತಡೆಹಿಡಿದ ಪರಿಣಾಮ ರಸ್ತೆಯಲ್ಲಿ ನೀರು ನಿಂತು ಸಂಚರಿಸಲು ಅಸಾಧ್ಯವಾಗಿದೆ ಎಂದು ಆರೋಪಿಸಿ ಗಾಣದಕೊಟ್ಟಿಗೆ ನಿವಾಸಿಗಳು ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಅವರಿಗೆ ಲಿಖಿತ ದೂರು ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಥಳಿಯಾಡಳಿತ ಅಧೀನದ ಈ ರಸ್ತೆಯನ್ನು ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಉಪಯೋಗಿಸುತ್ತಿವೆ. ಈ

ದೇರಾಜೆಕ್ರಾಸ್ – ಗಾಣದಕೊಟ್ಟಿಗೆ ಸಂಪರ್ಕ ರಸ್ತೆಗೆ ತಡೆ ► ಸ್ಥಳೀಯರಿಂದ ಕಡಬ ತಹಶೀಲ್ದಾರ್‍ಗೆ ದೂರು Read More »

ಕರಾವಳಿ

ಕಡಬದ ಶೆರ್ಲಿ ಮನೋಜ್ ಜೇಸಿ ವಲಯ ತರಬೇತುದಾರರಾಗಿ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜು.27. ಇತ್ತೀಚೆಗೆ ಜೇಸಿಐ ಇಂಡಿಯಾವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಸಿದ ವಲಯ ತರಬೇತುದಾರರ ಕಮ್ಮಟದಲ್ಲಿ ಜೇಸಿಐ ಉಡುಪಿ-ಇಂದ್ರಾಳಿಯ ಅಧ್ಯಕ್ಷೆ, ಮಣಿಪಾಲದ ಶೆಫಿನ್ಸ್‌ ಸಮೂಹದ ಸಹ ನಿರ್ದೇಶಕಿ, ಕಡಬ ಇಚಿಲಂಪಾಡಿಯ ಥಾಮಸ್ ರವರ ಪುತ್ರಿ ಶ್ರೀಮತಿ ಶೆರ್ಲಿ ಮನೋಜ್ ರವರು ವಲಯ ತರಬೇತುದಾರರಾಗಿ ಮೂಡಿ ಬಂದಿದ್ದಾರೆ. ಇವರು ಮೂಲತಃ ಕಡಬದ ಕಳಾರ ನಿವಾಸಿ ಮನೋಜ್ ಪಿ.ಯಂ.ರವನ್ನು ವರಿಸಿ ಸುಮಾರು 29 ವರ್ಷಗಳಿಂದ ಉಡುಪಿಯ ಮಣಿಪಾಲದಲ್ಲಿ ನೆಲೆಸಿರುತ್ತಾರೆ. ಪ್ರಸಕ್ತ ಜೇಸಿಯ ವಲಯಾಧಿಕಾರಿಯಾಗಿರುವ ಇವರು ಉಡುಪಿ ಪರಿಸರದಲ್ಲಿ ಮತ್ತು ಜೇಸಿ

ಕಡಬದ ಶೆರ್ಲಿ ಮನೋಜ್ ಜೇಸಿ ವಲಯ ತರಬೇತುದಾರರಾಗಿ ಆಯ್ಕೆ Read More »

ಕರ್ನಾಟಕ

ಕೊಣಾಜೆಗೆ ತೆರಳುವ ಸರಕಾರಿ ಬಸ್ಸು ಹಠಾತ್ ಸಂಚಾರ ಸ್ಥಗಿತ ► ವಿದ್ಯಾರ್ಥಿಗಳಿಂದ ಸಂಚಾರ ನಿಯಂತ್ರಕರ ಕೇಂದ್ರಕ್ಕೆ ಮುತ್ತಿಗೆ

(ನ್ಯೂಸ್ ಕಡಬ) newskadaba.com ಕಡಬ, ಜು.27. ಕಡಬದಿಂದ ಕೊಣಾಜೆಗೆ ತೆರಳುವ ಸರಕಾರಿ ಬಸ್ಸನ್ನು ಸ್ಥಗಿತಗೊಳಿಸಿ ಹಠಾತ್ತನೆ ಪುತ್ತೂರಿಗೆ ಕಳುಹಿಸಿದರ ಪರಿಣಾಮ ವಿದ್ಯಾರ್ಥಿಗಳು ವಾಹನ ಸೌಕರ್ಯವಿಲ್ಲದೆ ಕಂಗೆಟ್ಟು ಕೆಎಸ್ಸಾರ್ಟಿಸಿ ಸಂಚಾರ ನಿಯಂತ್ರಕರ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಘಟನೆ ಗುರುವಾರ ಸಂಜೆ ನಡೆಯಿತು. ನಾಗರ ಪಂಚಮಿ ಆದುದರಿಂದ ಶಾಲೆಗಳಿಗೆ ರಜೆಯಿರಬಹುದೆಂದು ಭಾವಿಸಿ ಸುಬ್ರಹ್ಮಣ್ಯದಿಂದ ಕಡಬಕ್ಕೆ ಆಗಮಿಸಿ ಕೊಣಾಜೆಗೆ ತೆರಳಬೇಕಿದ್ದ ಬಸ್ಸಿನ ಚಾಲಕ – ನಿರ್ವಾಹಕರು ನೇರವಾಗಿ ಪುತ್ತೂರಿಗೆ ತೆರಳುವ ಪ್ರಯಾಣಿಕರಿಗೆ ಟಿಕೆಟ್ ನೀಡಿದ್ದರು. ಹಠಾತ್ತನೆ ಬಸ್ ಸ್ಥಗಿತಗೊಳಿಸಿದ್ದರಿಂದಾಗಿ ಆತಂಕಗೊಂಡ ವಿದ್ಯಾರ್ಥಿಗಳು

ಕೊಣಾಜೆಗೆ ತೆರಳುವ ಸರಕಾರಿ ಬಸ್ಸು ಹಠಾತ್ ಸಂಚಾರ ಸ್ಥಗಿತ ► ವಿದ್ಯಾರ್ಥಿಗಳಿಂದ ಸಂಚಾರ ನಿಯಂತ್ರಕರ ಕೇಂದ್ರಕ್ಕೆ ಮುತ್ತಿಗೆ Read More »

ಕರಾವಳಿ
Scroll to Top