ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮರ್ದಾಳ-ಕೊಣಾಜೆ ರಸ್ತೆಯಲ್ಲಿ ಮೈಲುಗಲ್ಲುಗಳೇ ಉಲ್ಟಾ-ಪಲ್ಟಾ – News Kadaba

ಮರ್ದಾಳ-ಕೊಣಾಜೆ ರಸ್ತೆಯಲ್ಲಿ ಮೈಲುಗಲ್ಲುಗಳೇ ಉಲ್ಟಾ-ಪಲ್ಟಾ

(ನ್ಯೂಸ್ ಕಡಬ) newskadaba.com ಕಡಬ, ಜು.28. ಮರ್ದಾಳದಿಂದ ಕೊಣಾಜೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊಸದಾಗಿ ಅಳವಡಿಸಿರುವ ಮೈಲುಗಲ್ಲಿನಲ್ಲಿ ಕಿ.ಮೀ. ನಮೂದಿಸುವಾಗ ಎಡವಟ್ಟು ಮಾಡಲಾಗಿದೆ. ಮರ್ದಾಳ-ಕೊಣಾಜೆ ರಸ್ತೆಯು “ನಮ್ಮ ಗ್ರಾಮ ನಮ್ಮ ರಸ್ತೆ” ಯೋಜನೆಯಡಿಯಲ್ಲಿ ಬ್ರಾಂತಿಕಟ್ಟೆಯಿಂದ ಸುಳ್ಯ ತನಕ ಡಾಮರೀಕರಣಗೊಂಡಿದ್ದು ಇದೀಗ ನೂತನವಾಗಿ ಅಳವಡಿಸಲಾದ ಮೈಲುಗಲ್ಲು ತಪ್ಪು ಮಾಹಿತಿ ನೀಡುವಂತಾಗಿದೆ.

ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಕೊಣಾಜೆ ರಸ್ತೆಗೆ ತಿರುಗುವಲ್ಲಿ ಐತ್ತೂರು 3 ಕಿ.ಮೀ. ಎಂದು ಬರೆಯಲಾಗಿದೆ. ಅಲ್ಲಿ ಬೆತ್ತೋಡಿ 3. ಕಿ.ಮೀ ಎಂದಾಗಬೇಕು ಹಾಗೂ ಸುಳ್ಯ ಸಮೀಪ ಐತ್ತೂರು 3. ಕಿ.ಮೀ ಎಂದು ಬರೆಯಬೇಕಾಗಿತ್ತು ಅಲ್ಲಿ ಬೆತ್ತೋಡಿ 3.ಕಿ.ಮಿ. ಎಂದು ಬರೆಯಲಾಗಿದೆ. ಮೈಲುಗಲ್ಲಿನಲ್ಲಿನ ಕಿ.ಮೀ. ಮಾಹಿತಿ ಸಾರ್ವಜನಿಕರ ನಗೆಪಾಟಲಿಗೀಡಾಗಿದೆ. ಒಟ್ಟಿನಲ್ಲಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಾಹಿತಿ ನೀಡುವ ಮೈಲುಗಲ್ಲನ್ನೇ ಸರಿಯಾಗಿ ಅಳವಡಿಸದೇ ಪಿ.ಡಬ್ಲ್ಯು.ಡಿ. ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಈ ಕಿ.ಮೀ ಮಾಹಿತಿಯನ್ನು ಸರಿಪಡಿಸಬೇಕಾಗಿದೆ.

Scroll to Top