ಕಡಬ: ಬೈಕ್ ಢಿಕ್ಕಿಯಾಗಿ ಪಾದಚಾರಿ ಮೃತ್ಯು ► ರಸ್ತೆ ದಾಟುತ್ತಿದ್ದಾಗ ನಡೆದ ಘಟನೆ

(ನ್ಯೂಸ್ ಕಡಬ) newskadaba.com ಕಡಬ, ಜು.30. ಇಲ್ಲಿನ ಮುಖ್ಯ ಪೇಟೆಯ ಪಂಜ ರಸ್ತೆಯಲ್ಲಿ ಪಾದಚಾರಿ ವೃದ್ಧರೋರ್ವರಿಗೆ ಬೈಕೊಂದು ಢಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.

ಕಡಬ ಸಮುದಾಯ ಆಸ್ಪತ್ರೆಯ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿ ದೇವಪ್ಪ ಗೌಡ (80) ಎಂಬವರಿಗೆ ಪಂಜಕ್ಕೆ ತೆರಳುತ್ತಿದ್ದ ಬೈಕ್ ಢಿಕ್ಕಿಯಾದುದರಿಂದ ಗಾಯಗಳಾಗಿದ್ದು, ಕಡಬ ಸಮುದಾಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Scroll to Top