Kadaba

ಕಡಬ: ಪಿಲ್ಯ ಮೆಗಾ ಆಫರ್ ನಲ್ಲಿ ಜಾಕ್ ಪಾಟ್ ಶರೀಫ್ ಮೇಸ್ತ್ರಿಗೆ ಕಾರಿನ ಕೀ ಹಸ್ತಾಂತರ

(ನ್ಯೂಸ್ ಕಡಬ) newskadaba.com ಆ. 30. ತಾಲೂಕಿನ ಪ್ರಸಿದ್ಧ ವಸ್ತ್ರ ಮಳಿಗೆ ‘ಪಿಲ್ಯ ಫ್ಯಾಶನ್’ಮತ್ತು ‘ಪಿಲ್ಯ ಮ್ಯಾಚಿಂಗ್ ಸೆಂಟರ್ ವತಿಯಿಂದ ಗ್ರಾಹಕರಿಗಾಗಿ ಆಯೋಜಿಸಿದ್ದ ಬಹುನಿರೀಕ್ಷಿತ ‘ಮೆಗಾ ಆಫರ್’ ಬಂಪರ್ ಡ್ರಾದ ಬಹುಮಾನ ವಿತರಣಾ ಸಮಾರಂಭವು ಕಡಬದ ಶೋರೂಮ್ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.   ​ಈ ಸಮಾರಂಭದಲ್ಲಿ ಬಟ್ಟೆ ಖರೀದಿ ಅದೃಷ್ಟ ಕೂಪನ್ ಪಡೆದುಕೊಂಡಿದ್ದ ಕಡಬ ಮೂಲದ ಶರೀಫ್ ಸಾಹೇಬ್ ಮೇಸ್ತ್ರಿ ಅವರು ಬಹುಮಾನದ ‘ಮಾರುತಿ ಸ್ವಿಫ್ಟ್’ಕಾರನ್ನು ತಮ್ಮದಾಗಿಸಿಕೊಂಡಿದ್ದರು.  ವರ್ಣರಂಜಿತವಾಗಿ ನಡೆದ ಸಮಾರಂಭದಲ್ಲಿ ಅವರಿಗೆ ಕಾರಿನ ಕೀಲಿಕೈಯನ್ನು […]

ಕಡಬ: ಪಿಲ್ಯ ಮೆಗಾ ಆಫರ್ ನಲ್ಲಿ ಜಾಕ್ ಪಾಟ್ ಶರೀಫ್ ಮೇಸ್ತ್ರಿಗೆ ಕಾರಿನ ಕೀ ಹಸ್ತಾಂತರ Read More »

ಕರಾವಳಿ

ಪ್ರಾಂತೀಯ ಮಟ್ಟದ ರಿದಮಿಕ್ ಯೋಗಾಸನ ಕಡಬದ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಗೆ ದ್ವಿತೀಯ ಸ್ಥಾನ

(ನ್ಯೂಸ್ ಕಡಬ) newskadaba.com ಆ. 24. ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಆಗಸ್ಟ್ 21ರಂದು ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಾಂತೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ರಿದಮಿಕ್ ಪೇರ್ ವಿಭಾಗದಲ್ಲಿ 10ನೇ ತರಗತಿಯ ದಿಗಂತ್ ಹಾಗೂ 9ನೇ ತರಗತಿ ತಶ್ವಿನ್ ಬಿ.ಕೆ ದ್ವಿತೀಯ ಸ್ಥಾನವನ್ನು ಪಡೆದು ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.   ಇವರಿಗೆ ಸಂಸ್ಥೆಯ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಬಿ.ವಿ ಇವರು ಮಾರ್ಗದರ್ಶನ ನೀಡಿರುತ್ತಾರೆ.

ಪ್ರಾಂತೀಯ ಮಟ್ಟದ ರಿದಮಿಕ್ ಯೋಗಾಸನ ಕಡಬದ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಗೆ ದ್ವಿತೀಯ ಸ್ಥಾನ Read More »

ಕರಾವಳಿ

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಸೈಂಟ್ ಆನ್ಸ್ ಶಾಲೆ ಕಡಬದ ವಿದ್ಯಾರ್ಥಿಗಳು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ. 11. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಆಶ್ವಿ ಶೆಟ್ಟಿ ಹಾಗೂ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಗೌತಮ ಪ್ರಸಾದ ಹಾಗೂ ಅದ್ವಿತ್ ಆಯ್ಕೆಯಾಗಿದ್ದಾರೆ. ಕುಮಾರಿ ಸಾನ್ವಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಚಾಲಕರಾದ ವಂದನೀಯ ಪ್ರಕಾಶ್ ಪೌಲ್

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಸೈಂಟ್ ಆನ್ಸ್ ಶಾಲೆ ಕಡಬದ ವಿದ್ಯಾರ್ಥಿಗಳು ಆಯ್ಕೆ Read More »

ಕರಾವಳಿ, ಕ್ರೀಡಾ ನ್ಯೂಸ್

ಶಿಥಿಲಗೊಂಡಿರುವ ಶತಮಾನ ಕಂಡ ಬಂಟ್ರ ಸರಕಾರಿ ಶಾಲೆ ಕಟ್ಟಡ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ, ಕೊಠಡಿ ಬಳಕೆ ಸ್ಥಗಿತಕ್ಕೆ ಸೂಚನೆ

(ನ್ಯೂಸ್ ಕಡಬ) newskadaba.com ಮರ್ಧಾಳ, ಆ. 07. ಶತಮಾನ ಕಂಡ ಕಡಬ ತಾಲೂಕಿನ ಬಂಟ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣವಾಗಿ ಶಿಥಿಲಗೊಂಡಿರುವ ಶಾಲಾ ಕಟ್ಟಡದಲ್ಲಿನ ಎಲ್ಲಾ ತರಗತಿ ಕೊಠಡಿಗಳ ಬಳಕೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಸೂಚನೆ ನೀಡಿದ್ದಾರೆ.   ಇತ್ತೀಚಿನ ದಿನಗಳಲ್ಲಿ ಶಾಲಾ ಕಟ್ಟಡದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿರುವುದು, ಮೇಲ್ಛಾವಣಿಯ ಭಾಗಗಳು ಉದುರುತ್ತಿರುವುದು ಹಾಗೂ ಕಟ್ಟಡ ದುರ್ಬಲಗೊಂಡಿರುವ ಬಗ್ಗೆ ಪೋಷಕರು ಮತ್ತು ಸಾರ್ವಜನಿಕರು ಶಿಕ್ಷಣ ಇಲಾಖೆಯ

ಶಿಥಿಲಗೊಂಡಿರುವ ಶತಮಾನ ಕಂಡ ಬಂಟ್ರ ಸರಕಾರಿ ಶಾಲೆ ಕಟ್ಟಡ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ, ಕೊಠಡಿ ಬಳಕೆ ಸ್ಥಗಿತಕ್ಕೆ ಸೂಚನೆ Read More »

ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ: ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲೂ ಭಕ್ತಸಾಗರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 02. ದಕ್ಷಿಣ ಭಾರತದ ಹೆಸರಾಂತ ಹಾಗೂ ಪವಿತ್ರ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಇಂದು ರವಿವಾರ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀ ದೇವರಿಗೆ ಸೇವೆ ಸಲ್ಲಿಸಿದರು. ಭಕ್ತರಿಗೆ ಕುಮಾರಧಾರ ನದಿಯಲ್ಲಿ ತೀರ್ಥ ಸ್ನಾನಕ್ಕಾಗಿ ಸ್ನಾನ ಘಟ್ಟದ ಪಕ್ಕದಲ್ಲಿ ಡ್ರಮ್ ಗಳನ್ನು ಇರಿಸಿ ಅದರಲ್ಲಿ ನೀರಿನ ವ್ಯವಸ್ಥೆ ಹಾಗೂ ಶವರ್ ವ್ಯವಸ್ಥೆಗಳನ್ನ ಶ್ರೀ ದೇವಳದ ವತಿಯಿಂದ

ಕುಕ್ಕೆ ಸುಬ್ರಹ್ಮಣ್ಯ: ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲೂ ಭಕ್ತಸಾಗರ Read More »

ಕರಾವಳಿ, ಕರ್ನಾಟಕ
Death, deadbody, Waterfall

ಕಡಬ: ಅಡಿಕೆ ಮರಬಿದ್ದು ಕೂಲಿಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜು. 31. ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಜೋರಾಗಿ ಬೀಸಿದ ಗಾಳಿಗೆ ಅಡಿಕೆ ಮರ ಮುರಿದು ಮೈಮೇಲೆ ಬಿದ್ದ ಪರಿಣಾಮ ಕೂಲಿ ಕಾರ್ಮಿಕರೋರ್ವರು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಕುಂತೂರು ಗ್ರಾಮದ ಗುತ್ತುಪಾಲು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮೃತ ವ್ಯಕ್ತಿಯನ್ನು ಕುಂತೂರು ಕೇವಳ ನಿವಾಸಿ ಯಾದವ ಗೌಡ (66ವ) ಎಂದು ಗುರುತಿಸಲಾಗಿದೆ. ಇವರು ಗುತ್ತುಪಾಲು ಎಂಬಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜೋರಾಗಿ ಬೀಸಿದ ಗಾಳಿಗೆ ಅಡಿಕೆ

ಕಡಬ: ಅಡಿಕೆ ಮರಬಿದ್ದು ಕೂಲಿಕಾರ್ಮಿಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಚೆಸ್ ಪಂದ್ಯಾಟ- ಕಡಬದ ಸೈಂಟ್ ಆನ್ಸ್ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಜು. 31. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆ ಇದರ ಜಂಟಿ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಎಂಟು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 17ರ ವಯೋಮಾನದ ವಿಭಾಗದಲ್ಲಿ ನಾಲ್ಕು ಜನ ವಿದ್ಯಾರ್ಥಿಗಳು ಹಾಗೂ ಹದಿನಾಲ್ಕರ ವಯೋಮಾನದ ವಿಭಾಗದಲ್ಲಿ ನಾಲ್ಕು ವಿದ್ಯಾರ್ಥಿಗಳು ವಿಜಯಿಗಳಾಗಿ ಮುಂಬರಲಿರುವ ತಾಲೂಕು ಮಟ್ಟದ ಪಂದ್ಯಾಟದಲ್ಲಿ ಆಯ್ಕೆಗೊಂಡಿರುತ್ತಾರೆ.

ಚೆಸ್ ಪಂದ್ಯಾಟ- ಕಡಬದ ಸೈಂಟ್ ಆನ್ಸ್ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ Read More »

ಕರಾವಳಿ, ಕ್ರೀಡಾ ನ್ಯೂಸ್

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

(ನ್ಯೂಸ್ ಕಡಬ) newskadaba.com ಕಡಬ, ಜು. 30. ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆ ಕಡಬ ಇದರ ಜಂಟಿ ಆಶ್ರಯದಲ್ಲಿ  ಕಡಬ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಕಡಬ ಸೈಂಟ್ ಜೋಕಿಮ್ಸ್ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೈಂಟ್ ಜೋಕಿಮ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂದನೀಯ ಫಾದರ್ ಪ್ರಕಾಶ್ ಪೌಲ್  ಡಿ’ಸೋಜಾ ಅವರು

ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ Read More »

ಕರಾವಳಿ, ಕ್ರೀಡಾ ನ್ಯೂಸ್

ಜುಲೈ 19ರಂದು ಎಸ್ಸೆಸ್ಸೆಫ್ ಕಡಬ ಸೆಕ್ಟರ್ ಸಾಹಿತ್ಯೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜು. 15. ಸುನ್ನೀ ವಿದ್ಯಾರ್ಥಿ ಸಂಘಟನೆಯಾದ ಎಸ್ಸೆಸ್ಸೆಫ್ ಪ್ರತಿವರ್ಷವೂ ಸಾಹಿತ್ಯೋತ್ಸವ ಎಂಬ ಹೆಸರಿನಲ್ಲಿ ಕಲಾ ಸ್ಪರ್ಧಾ ಸಂಗಮಗಳನ್ನು ದೇಶದಾದ್ಯಂತ ನಡೆಸುತ್ತಿದ್ದು, ಅದರ ಕಡಬ ಸೆಕ್ಟರ್ ಮಟ್ಟದ ಕಾರ್ಯಕ್ರಮವು ಇದೇ ಬರುವ ಜುಲೈ 19ನೇ ತಾರೀಖಿನಂದು ಕಡಬ ಅಡ್ಡಗದ್ದೆಯಲ್ಲಿರುವ ಸುನ್ನೀ ಸೆಂಟರ್ ಅಂಗಣದಲ್ಲಿ ನಡೆಯಲಿದೆ. ನಾಡಿನ ಭರವಸೆಯಾಗಿ ಬೆಳೆದು ಬರುತ್ತಿರುವ ವಿಧ್ಯಾರ್ಥಿಗಳಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಹಾಗೂ ಅವರನ್ನು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಸಮೂಹದಲ್ಲಿ ಗುರುತಿಸಲು ಬೇಕಾಗಿ ಕಾರ್ಯಾಚರಿಸುತ್ತಿರುವ ವಿಧ್ಯಾರ್ಥಿ ಸಂಘಟನೆಯಾಗಿದೆ ಎಸ್ಸೆಸ್ಸೆಫ್. ಕಳೆದ

ಜುಲೈ 19ರಂದು ಎಸ್ಸೆಸ್ಸೆಫ್ ಕಡಬ ಸೆಕ್ಟರ್ ಸಾಹಿತ್ಯೋತ್ಸವ Read More »

ಕರಾವಳಿ

ಮೊಬೈಲ್’ನಿಂದ ಹೊಡೆದು ಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಅಸಲಿ ಸತ್ಯ!

(ನ್ಯೂಸ್ ಕಡಬ) newskadaba.com ಜು. 15. ಒಡಿಶಾದ ಬೋಲಾಂಗಿರ್ ಜಿಲ್ಲೆಯಲ್ಲಿ ನಡೆದ ಪತ್ನಿಯ ಹಲ್ಲೆಯಿಂದ ಪತಿ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದ್ದ ಪ್ರಕರಣವು ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಸತ್ಯಾಸತ್ಯತೆಯನ್ನು ಹೊರಹಾಕಿದೆ. ​ಘಟನೆಯ ಹಿನ್ನೆಲೆ: ದಂಪತಿ ನಡುವೆ ನಡೆದ ಜಗಳದ ವೇಳೆ, ಕೋಪಗೊಂಡ ಪತ್ನಿ ತನ್ನ ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಬಲವಾಗಿ ಹೊಡೆದಿದ್ದಳು. ಇದರಿಂದ ಗಾಯಗೊಂಡಿದ್ದ ಪತಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯ ನಂತರ ಮನೆಗೆ ಕರೆತರಲಾಗಿತ್ತು. ಆದರೆ, ಮನೆಗೆ ಬಂದ ಕೆಲವೇ ಸಮಯದಲ್ಲಿ

ಮೊಬೈಲ್’ನಿಂದ ಹೊಡೆದು ಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಅಸಲಿ ಸತ್ಯ! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top