ಕಡಬ: ಪಿಲ್ಯ ಮೆಗಾ ಆಫರ್ ನಲ್ಲಿ ಜಾಕ್ ಪಾಟ್ ಶರೀಫ್ ಮೇಸ್ತ್ರಿಗೆ ಕಾರಿನ ಕೀ ಹಸ್ತಾಂತರ



(ನ್ಯೂಸ್ ಕಡಬ) newskadaba.com . 30. ತಾಲೂಕಿನ ಪ್ರಸಿದ್ಧ ವಸ್ತ್ರ ಮಳಿಗೆ ‘ಪಿಲ್ಯ ಫ್ಯಾಶನ್’ಮತ್ತು ‘ಪಿಲ್ಯ ಮ್ಯಾಚಿಂಗ್ ಸೆಂಟರ್ ವತಿಯಿಂದ ಗ್ರಾಹಕರಿಗಾಗಿ ಆಯೋಜಿಸಿದ್ದ ಬಹುನಿರೀಕ್ಷಿತ ‘ಮೆಗಾ ಆಫರ್’ ಬಂಪರ್ ಡ್ರಾದ ಬಹುಮಾನ ವಿತರಣಾ ಸಮಾರಂಭವು ಕಡಬದ ಶೋರೂಮ್ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.







 

​ಈ ಸಮಾರಂಭದಲ್ಲಿ ಬಟ್ಟೆ ಖರೀದಿ ಅದೃಷ್ಟ ಕೂಪನ್ ಪಡೆದುಕೊಂಡಿದ್ದ ಕಡಬ ಮೂಲದ ಶರೀಫ್ ಸಾಹೇಬ್ ಮೇಸ್ತ್ರಿ ಅವರು ಬಹುಮಾನದ ‘ಮಾರುತಿ ಸ್ವಿಫ್ಟ್’ಕಾರನ್ನು ತಮ್ಮದಾಗಿಸಿಕೊಂಡಿದ್ದರು.  ವರ್ಣರಂಜಿತವಾಗಿ ನಡೆದ ಸಮಾರಂಭದಲ್ಲಿ ಅವರಿಗೆ ಕಾರಿನ ಕೀಲಿಕೈಯನ್ನು (Key) ಅಧಿಕೃತವಾಗಿ ಹಸ್ತಾಂತರಿಸಲಾಯಿತು.






 

‘ಗ್ರಾಮೀಣ ಭಾಗದ ಮನೆಮಾತಾದ ಪಿಲ್ಯ ಫ್ಯಾಶನ್’

​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಮುಖಂಡ ಥೋಮಸ್ ಎಡೆಯಾಲ್, “ಪಿಲ್ಯ ಫ್ಯಾಶನ್ ಸಂಸ್ಥೆಯು ಕೇವಲ ವ್ಯಾಪಾರಕ್ಕಷ್ಟೇ ಸೀಮಿತವಾಗದೆ, ಗ್ರಾಹಕರಿಗೆ ನಿರಂತರವಾಗಿ ಇಂತಹ ಅಪರೂಪದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಈ ಆಫರ್ ಗ್ರಾಮೀಣ ಭಾಗದ ಪ್ರತಿಯೊಬ್ಬ ಗ್ರಾಹಕರ ಮನಸ್ಸನ್ನು ಗೆದ್ದು ಸಂಸ್ಥೆಯನ್ನು ಮನೆಮಾತಾಗಿಸಿದೆ” ಎಂದು ಹೆಮ್ಮೆಯಿಂದ ಶುಭಾಶಯ ಕೋರಿದರು.

 

​ವಿಜೇತರ ಹರ್ಷ: ಬಂಪರ್ ಕಾರು ವಿಜೇತ ಶರೀಫ್ ಮೇಸ್ತ್ರಿ ಮಾತನಾಡಿ, “ಸಾಮಾನ್ಯ ಗ್ರಾಹಕನಾಗಿ ಬಟ್ಟೆ ಖರೀದಿಸಿ ಕೂಪನ್ ಮೂಲಕ ಇಂತಹದೊಂದು ದೊಡ್ಡ ಬಂಪರ್ ಬಹುಮಾನ ಗೆದ್ದಿರುವುದು ನಂಬಲಾಗದಷ್ಟು ಸಂತಸ ತಂದಿದೆ. ಈ ಸುವರ್ಣ ಅವಕಾಶ ಕಲ್ಪಿಸಿದ ಪಿಲ್ಯ ಫ್ಯಾಶನ್‌ ಗೆ ಹೃದಯಪೂರ್ವಕ ಧನ್ಯವಾದಗಳು,” ಎಂದು ಖುಷಿ ಹಂಚಿಕೊಂಡರು.

 

​’ಪಿಲ್ಯ ಮೆಗಾ ಆಫರ್ ಸೀಸನ್ 3′ ಅನಾವರಣ: ಇದೇ ಶುಭ ಸಂದರ್ಭದಲ್ಲಿ ‘ಪಿಲ್ಯ ಮೆಗಾ ಆಫರ್ ಸೀಸನ್ 3’ ಯೋಜನೆಯನ್ನು  ಸಂಸ್ಥೆಯಲ್ಲಿ ಎಸ್.ಎಂ ಮರ್ಧಾಳ ಅವರು ಅಧಿಕೃತವಾಗಿ ಅನಾವರಣಗೊಳಿಸಿದರು.

 

ಸೀಸನ್ 3ರ ಪ್ರಮುಖ ಅಂಶಗಳು:

ರೂ. 500 ನಗದು ಖರೀದಿ: ಕೇವಲ ಒಂದು ಭಾರಿ ಮಾತ್ರ ₹500 ಮೌಲ್ಯದ ಬಟ್ಟೆ ಅಥವಾ ತವಾ ಖರೀದಿ ಕೂಪನ್ ಪಡೆಯುವ ಗ್ರಾಹಕರಿಗೆ ಈ ಲಕ್ಕಿ ಡ್ರಾ ಪಡೆಯುವ ಸುವರ್ಣ ಅವಕಾಶ.

​50 ಆಕರ್ಷಕ ಬಹುಮಾನಗಳು 51 ಬಂಪರ್ ಬಹುಮಾನಗಳು: ಗ್ರಾಹಕರಿಗಾಗಿ ಒಟ್ಟು 101 ಪ್ರಶಸ್ತಿಗಳ ಬೃಹತ್ ಕೊಡುಗೆ.

​ಬಂಪರ್ ಡ್ರಾ ದಿನಾಂಕ: ಈ ನೂತನ ಯೋಜನೆಯ ಬಂಪರ್ ಡ್ರಾ ಡಿಸೆಂಬರ್ 30 ರಂದು ನಡೆಯಲಿದೆ.

ಸಮಾರಂಭದಲ್ಲಿ ಸಂಸ್ಥೆಯ ಮಾಲೀಕರು, ಸಿಬ್ಬಂದಿವರ್ಗ, ಸ್ಥಳೀಯ ಮುಖಂಡರು ಹಾಗೂ ಅಪಾರ ಸಂಖ್ಯೆಯ ಗ್ರಾಹಕರು ಉಪಸ್ಥಿತರಿದ್ದು, ವಿಜೇತರಿಗೆ ಶುಭ ಹಾರೈಸಿದರು.

error: Content is protected !!
Scroll to Top