Kadaba

ಕಡಬ: ಬಾಲಕಿಗೆ ಲೈಂಗಿಕ ಕಿರುಕುಳ ► ಫೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜು.27. ಠಾಣಾ ವ್ಯಾಪ್ತಿಯ ಮರ್ಧಾಳ ಎಂಬಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿಯನ್ನು ಕಡಬ ಪೊಲೀಸರು ಫೋಕ್ಸೋ ಕಾಯ್ದೆಯಡಿ ಬಂಧಿಸಿದ ಘಟನೆ ಗುರುವಾರದಂದು ನಡೆದಿದೆ. ಆರೋಪಿಯನ್ನು 102ನೇ ನೆಕ್ಕಿಲಾಡಿ ಗ್ರಾಮದ ಸಾಲೆತ್ತಡ್ಕ ನಿವಾಸಿ ಅಂದ್ರು ಎಂಬವರ ಪುತ್ರ ಯಶು ಯಾನೆ ಯಶೋಧರ ಎಂದು ಗುರುತಿಸಲಾಗಿದ್ದು, ಈತ ಎಪ್ರಿಲ್ ತಿಂಗಳಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದನೆನ್ನಲಾಗಿದೆ‌. ಪ್ರಸಕ್ತ ವರ್ಷದಲ್ಲಿ ಶಾಲೆಗೆ ತೆರಳಿದ ವಿದ್ಯಾರ್ಥಿನಿ ಮಂಕಾಗಿರುವುದನ್ನು ಕಂಡು ವಿಚಾರಿಸಿದ ಶಿಕ್ಷಕಿ […]

ಕಡಬ: ಬಾಲಕಿಗೆ ಲೈಂಗಿಕ ಕಿರುಕುಳ ► ಫೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ Read More »

ಕರಾವಳಿ

 ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜು.26. ಸಾಮಾಜಿಕ ಜಾಲತಾಣಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರಸಕ್ತ ಕಾಲಘಟ್ಟದಲ್ಲಿ ಮುದ್ರಣಾ ಮಾಧ್ಯಮಕ್ಕೆ ಸವಾಲಾಗಿದ್ದು, ವರದಿಗಾರರು ಕ್ಲಿಷ್ಟಕರ ಸನ್ನಿವೇಶದಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಮಾಜದ ಅಭಿವೃದ್ದಿಗೆ ಪುರಕವಾದ ವರದಿ ನೀಡಿದಾಗ ಪತ್ರಕರ್ತನ ಘನತೆ ಹೆಚ್ಚುತ್ತದೆ ಎಂದು ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಸುಬ್ರಹ್ಮಣ್ಯ ರಾವ್ ಹೇಳಿದರು. ಅವರು ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಶ್ರೀ ರಾಮಕುಂಜೇಶ್ವರ ಮಹಾ ವಿದ್ಯಾಲಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ

 ಕಡಬ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ Read More »

ಕರಾವಳಿ

ಕಡಬ: ನೀರಿನಲ್ಲಿ ಮುಳುಗಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜು.25. ಠಾಣಾ ವ್ಯಾಪ್ತಿಯ ಕೊಲ್ಯದ ಕಟ್ಟೆ ಎಂಬಲ್ಲಿ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೃತ ಯುವಕನನ್ನು ಗೋಳಿಯಡ್ಕ ನಿವಾಸಿ ಅಮ್ಮು ಮುಗೇರ ಎಂಬವರ ಪುತ್ರ ವಸಂತ (26) ಎಂದು ಗುರುತಿಸಲಾಗಿದೆ. ಬುಧವಾರದಂದು ಬೆಳಿಗ್ಗೆ ಸ್ಥಳೀಯ ವ್ಯಕ್ತಿಯೊಂದಿಗೆ ಮೀನು ಹಿಡಿಯಲೆಂದು ತೆರಳಿದ್ದ ವಸಂತ ಕೊಲ್ಯದಕಟ್ಟೆ ಪವರ್ ಡ್ಯಾಂ ಬಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಎದೆನೋವು ಇದೆಯೆಂದು ಮನೆಯವರಲ್ಲಿ ತಿಲಿಸಿದ್ದಾರೆನ್ನಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕಾರಣ

ಕಡಬ: ನೀರಿನಲ್ಲಿ ಮುಳುಗಿ ಯುವಕ ಮೃತ್ಯು Read More »

ಕರಾವಳಿ

ಕಡಬ ಸರಕಾರಿ ಪದವಿ ಪೂರ್ವ ಕಾಲೇಜು: ವನಮಹೋತ್ಸವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಜು.24. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಡಬ ಬಿ ಒಕ್ಕೂಟ, ,ಕಡಬ ಸರಕಾರಿ ಪದವಿ ಪೂರ್ವ ಕಾಲೇಜ್ ಹಳೇವಿದ್ಯಾಥಿ೯ ಸಂಘ, ಕಡಬ ರಾಷ್ಟ್ರೀಯ ಸೇವಾ ಯೋಜನೆ ಘಟಕ ದ ಸಂಯುಕ್ತ ಆಶ್ರಯ ದಲ್ಲಿ “ವನಮಹೋತ್ಸವ” ಹಾಗೂ ಬೀಜದಉಂಡೆ ಬಿತ್ತೋತ್ಸವ ಕಾರ್ಯಕ್ರಮವು ಕಡಬ ‌ಸರಕಾರಿ ಪದವಿ ಪೂರ್ವ ಕಾಲೇಜ್ ನ‌ ವಠಾರದಲ್ಲಿ ಶನಿವಾರದಂದು ನಡೆಯಿತು. ಈ ಕಾರ್ಯ ಕ್ರಮದ ಅಧ್ಯಕ್ಷ ತೆಯನ್ನು ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾದ

ಕಡಬ ಸರಕಾರಿ ಪದವಿ ಪೂರ್ವ ಕಾಲೇಜು: ವನಮಹೋತ್ಸವ ಕಾರ್ಯಕ್ರಮ Read More »

ಕರಾವಳಿ

ಕಡಬ: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಜು.24. ಠಾಣಾ ವ್ಯಾಪ್ತಿಯ ಕುಟ್ರುಪ್ಪಾಡಿ ನಿವಾಸಿ ರೈತನೋರ್ವ ಸಾಲ ಬಾಧೆಯಿಂದಾಗಿ ಬೇಸತ್ತು ಶನಿವಾರದಂದು ವಿಷ ಸೇವಿಸಿದ್ದು, ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತಪಟ್ಟ ರೈತನನ್ನು ಕುಟ್ರುಪ್ಪಾಡಿ ಕಾಂಞರವಿಳ ನಿವಾಸಿ ರಾಜು(54) ಎಂದು ಗುರುತಿಸಲಾಗಿದೆ‌. ಅಪಾರ ಸಾಲದಿಂದಿದ್ದು, ಕೃಷಿಯಲ್ಲಿನ ಬೆಲೆಯೇರಿಕೆಯಿಂದಾಗಿ ಬೇಸತ್ತು ಶನಿವಾರ ಸಂಜೆ ವಿಷ ಸೇವಿಸಿದ ರಾಜುರವರು ಪುತ್ತೂರಿನ ಪ್ರಗತಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದರು. ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆನ್ನಲಾಗಿದೆ‌.

ಕಡಬ: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ Read More »

ಕರಾವಳಿ

ಕಡಬದಲ್ಲಿ ಸರಿಯಾದ ಬಸ್ ತಂಗುದಾಣವಿಲ್ಲ ► ಇರೋ ಎರಡು ನಿಲ್ದಾಣಗಳಿಗೆ ಮೆಟ್ಟಿಲೇ ಇಲ್ಲ

(ನ್ಯೂಸ್ ಕಡಬ) newskadaba.com ಕಡಬ, ಜು.22. ಈಗಾಗಲೇ ತಾಲೂಕು ಕೇಂದ್ರ ಎಂದು ಘೋಷಣೆಯಾಗಿರುವ ಕಡಬದಲ್ಲಿ ಸರಿಯಾದ ಒಂದು ಬಸ್ ನಿಲ್ದಾಣ ಇಲ್ಲ, ಇರೋ ಪ್ರಯಾಣಿಕರ ತಂಗುದಾಣಗಳಿಗೆ ಮೆಟ್ಟಿಲುಗಳೇ ಇಲ್ಲ. ಕಳೆದ ಕೆಲವು ತಿಂಗಳುಗಳಿಂದ ಮೆಟ್ಟಿಲು ಇಲ್ಲದೆ ಪ್ರಯಾಣಿಕರು ಅವಾಂತರ ಎದುರಿಸುತ್ತಿದ್ದಾರೆ. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಪೇಟೆಯ ಪಂಜ ಕ್ರಾಸ್ ಬಳಿ ಇರುವ ಪ್ರಯಾಣಿಕರ ತಂಗುದಾಣದ ದುರವಸ್ಥೆ ಇದು. ಈ ತಂಗುದಾಣ ಜನರಿಗೆ ಸೇಫ್ ಎಂದೇನು ಇಲ್ಲ. ಜೋರು ಗಾಳಿ, ಮಳೆಗೆ ತಕ್ಕಮಟ್ಟಿಗೆ ಆಶ್ರಯ ನೀಡುವ ಬಸ್ಸ್ಟಾಂಡ್.

ಕಡಬದಲ್ಲಿ ಸರಿಯಾದ ಬಸ್ ತಂಗುದಾಣವಿಲ್ಲ ► ಇರೋ ಎರಡು ನಿಲ್ದಾಣಗಳಿಗೆ ಮೆಟ್ಟಿಲೇ ಇಲ್ಲ Read More »

ಕರಾವಳಿ

ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷರ ಹಲ್ಲೆ ಪ್ರಕರಣ ► ಉಳಿದ ಆರೋಪಿಗಳ ಬಂಧನಕ್ಕೆ ಆಡಳಿತ ಮಂಡಳಿ ಅಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಜು.21. ಇಲ್ಲಿನ ಸಿ.ಎ. ಬ್ಯಾಂಕಿನ ಉಪಾಧ್ಯಕ್ಷ ರಮೇಶ್ ಕಲ್ಪುರೆ ಅವರ ಮೇಲಿನ ಹಲ್ಲೆ ಆರೋಪಿಗಳಲ್ಲಿ ಕೆಲವರು ಮಾತ್ರ ಬಂಧನವಾಗಿದ್ದು ಉಳಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ ಆಗ್ರಹಿಸಿದ್ದಾರೆ. ಅವರು ಬ್ಯಾಂಕಿನ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಮೇಶ್ ಕಲ್ಪುರೆ ಅವರ ಹಲ್ಲೆ ಅಮಾನವೀಯ ಹಾಗೂ ಖಂಡನೀಯವಾಗಿದ್ದು, ಆಡಳಿತ ಮಂಡಳಿ ಈ ಹಲ್ಲೆಯನ್ನು ಉಗ್ರವಾಗಿ ಖಂಡಿಸುತ್ತದೆ ಎಂದರು. ಕಡಬ ಯಶೋದಾ

ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷರ ಹಲ್ಲೆ ಪ್ರಕರಣ ► ಉಳಿದ ಆರೋಪಿಗಳ ಬಂಧನಕ್ಕೆ ಆಡಳಿತ ಮಂಡಳಿ ಅಗ್ರಹ Read More »

ಕರಾವಳಿ

ಕಡಬ ಸೈಂಟ್ ಆ್ಯನ್ಸ್‌ ಮುಖ್ಯೋಪಾಧ್ಯಾಯರಿಂದ ದಬ್ಬಾಳಿಕೆ ಆರೋಪ ► ಇಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಜು.20. ಕಡಬದ ಪ್ರತಿಷ್ಠಿತ ಸೈಂಟ್ ಜೋಕಿಮ್ಸ್‌ ವಿದ್ಯಾ ಸಂಸ್ಥೆಯ ಅಂಗಸಂಸ್ಥೆಯಾದ ಸೈಂಟ್ ಆ್ಯನ್ಸ್‌ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಆಗಮಿಸಿ ಸಂಸ್ಥೆಯ ಸಂಚಾಲಕರಾದ ಫಾ| ರೊನಾಲ್ಡ್‌ ಲೋಬೋ ರವರಲ್ಲಿ ದೂರಿಕೊಂಡ ಘಟನೆ ಗುರುವಾರದಂದು ನಡೆದಿದೆ. ಸೈಂಟ್ ಆ್ಯನ್ಸ್‌ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಫಾ| ಪೌಲ್ ಡಿ. ಕ್ರಾಸ್ತಾ ಹಾಗೂ ಸಿಸ್ಟರ್ ಜೆಸಿಂತಾ ರೋಡ್ರಿಗಸ್ ರವರು ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಶಿಕ್ಷಕ

ಕಡಬ ಸೈಂಟ್ ಆ್ಯನ್ಸ್‌ ಮುಖ್ಯೋಪಾಧ್ಯಾಯರಿಂದ ದಬ್ಬಾಳಿಕೆ ಆರೋಪ ► ಇಂದು ಸಂಜೆಯೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ Read More »

ಕರಾವಳಿ

ಸುಬ್ರಹ್ಮಣ್ಯ, ಕೊಂಬಾರು ಪರಿಸರಕ್ಕೆ ಕೈಕೊಟ್ಟ ವಿದ್ಯುತ್ ► ಗುರುವಾರ ಸಂಜೆಯವರೆಗೆ ವಿದ್ಯುತ್ ಸಂಪರ್ಕ ಇಲ್ಲ

(ನ್ಯೂಸ್ ಕಡಬ) newskadaba.com ಕಡಬ, ಜು. 20. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಲ್ಲಾಜೆ ಹಾಗೂ ಬಿಳಿನೆಲೆ ಎಂಬಲ್ಲಿ ಬೃಹತ್ ಗಾತ್ರದ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದಿರುವುದರಿಂದ ಸುಬ್ರಹ್ಮಣ್ಯ, ಬಿಳಿನೆಲೆ, ಕೊಂಬಾರು, ಕೆಂಜಾಳ, ಕೈಕಂಬ ಪ್ರದೇಶದಲ್ಲಿ ಗುರುವಾರ ಸಂಜೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ. ಕಲ್ಲಾಜೆಯಲ್ಲಿ ಅಶ್ವತ್ಥ ಮರವೊಂದು ಬುಡ ಸಹಿತ ಕಿತ್ತು ಬಿದ್ದಿರುವುದರಿಂದ 5 ಕಂಬಗಳು ಮುರಿದು ಬಿದ್ದಿದ್ದು, ಹಲವು ಕಂಬಗಳಿಗೆ ಹಾನಿಯಾಗಿವೆ. ಸುಬ್ರಹ್ಮಣ್ಯಕ್ಕೆ ನೇರ

ಸುಬ್ರಹ್ಮಣ್ಯ, ಕೊಂಬಾರು ಪರಿಸರಕ್ಕೆ ಕೈಕೊಟ್ಟ ವಿದ್ಯುತ್ ► ಗುರುವಾರ ಸಂಜೆಯವರೆಗೆ ವಿದ್ಯುತ್ ಸಂಪರ್ಕ ಇಲ್ಲ Read More »

ಕರಾವಳಿ

ನಾಳೆಯಿಂದ ಕಡಬ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ

(ನ್ಯೂಸ್ ಕಡಬ) newskadaba.com ಕಡಬ, ಜು.18. ಕಡಬದ ವಿದ್ಯುತ್ ವಿತರಣಾ ಕೇಂದ್ರದಲ್ಲಿನ ಬ್ರೇಕರ್ ಗಳನ್ನು ನೂತನವಾಗಿ ಉನ್ನತೀಕರಿಸುವ ಕಾಮಗಾರಿ ನಡೆಯುತ್ತಿರುವುದರಿಂದ ಜುಲೈ 19ನೇ ಬುಧವಾರದಿಂದ ಜುಲೈ 26ನೇ ಬುಧವಾರದವರೆಗೆ ಕಡಬದಿಂದ ಹೊರಡುವ ವಿದ್ಯುತ್ ಮಾರ್ಗಗಳಲ್ಲಿ ಸ್ವಲ್ಪ ಮಟ್ಟಿಗೆ ವಿದ್ಯುತ್ ವ್ಯತ್ಯಾಸವಿರುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಾಳೆಯಿಂದ ಕಡಬ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ Read More »

ಕರಾವಳಿ
Scroll to Top