ಸುಬ್ರಹ್ಮಣ್ಯ, ಕೊಂಬಾರು ಪರಿಸರಕ್ಕೆ ಕೈಕೊಟ್ಟ ವಿದ್ಯುತ್ ► ಗುರುವಾರ ಸಂಜೆಯವರೆಗೆ ವಿದ್ಯುತ್ ಸಂಪರ್ಕ ಇಲ್ಲ

(ನ್ಯೂಸ್ ಕಡಬ) newskadaba.com ಕಡಬ, ಜು. 20. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಲ್ಲಾಜೆ ಹಾಗೂ ಬಿಳಿನೆಲೆ ಎಂಬಲ್ಲಿ ಬೃಹತ್ ಗಾತ್ರದ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದಿರುವುದರಿಂದ ಸುಬ್ರಹ್ಮಣ್ಯ, ಬಿಳಿನೆಲೆ, ಕೊಂಬಾರು, ಕೆಂಜಾಳ, ಕೈಕಂಬ ಪ್ರದೇಶದಲ್ಲಿ ಗುರುವಾರ ಸಂಜೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ.

ಕಲ್ಲಾಜೆಯಲ್ಲಿ ಅಶ್ವತ್ಥ ಮರವೊಂದು ಬುಡ ಸಹಿತ ಕಿತ್ತು ಬಿದ್ದಿರುವುದರಿಂದ 5 ಕಂಬಗಳು ಮುರಿದು ಬಿದ್ದಿದ್ದು, ಹಲವು ಕಂಬಗಳಿಗೆ ಹಾನಿಯಾಗಿವೆ. ಸುಬ್ರಹ್ಮಣ್ಯಕ್ಕೆ ನೇರ ಸಂಪರ್ಕ ಕಲ್ಪಿಸುವ 33 ಕೆವಿ ಎಕ್ಸ್‌ಪ್ರೆಸ್‌ ಲೈನ್ ತುಂಡಾಗಿರುವುದರಿಂದ ವಿದ್ಯುತ್ ಸಂಪರ್ಕ ತಡವಾಗಬಹುದು ಎಂದು ಕಡಬ ಮೆಸ್ಕಾಂ ಜೆ.ಇ. ನಾಗರಾಜ್ ತಿಳಿಸಿದ್ದಾರೆ.

Scroll to Top