crime

ಗುತ್ತಿಗಾರು ಸರಕಾರಿ ಪ್ರೌಢ ಶಾಲೆಯಿಂದ ಕಂಪ್ಯೂಟರ್ ಬ್ಯಾಟರಿ ಕಳವು ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಮಾ. 17. ಇಲ್ಲಿನ  ಸರಕಾರಿ ಪ್ರೌಢ ಶಾಲೆಯಲ್ಲಿನ ಕೊಠಡಿಯಲ್ಲಿದ್ದ ಕಂಪ್ಯೂಟರ್ ನ ಹಳೆಯ ಬ್ಯಾಟರಿಗಳನ್ನು ಕಳವುಗೈದಿರುವ ಬಗ್ಗೆ ಶಾಲಾ ಮುಖ್ಯಸ್ಥರು ದೂರು ದಾಖಲಿಸಿದ್ದಾರೆ. ಇಲಾಖೆಯಿಂದ ಪೂರೈಕೆಯಾಗಿದ್ದ 16 ಬ್ಯಾಟರಿಗಳು ಕಳವಾಗಿದ್ದು, ಈ ಬ್ಯಾಟರಿಗಳ ಅಂದಾಜು ಮೌಲ್ಯ 16 ಸಾವಿರ ರೂ. ಎನ್ನಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಐಪಿಸಿ ಕಲಂ 380,454, 457ರಂತೆ ಪ್ರಕರಣ ದಾಖಲಿಸಲಾಗಿದೆ.

ಗುತ್ತಿಗಾರು ಸರಕಾರಿ ಪ್ರೌಢ ಶಾಲೆಯಿಂದ ಕಂಪ್ಯೂಟರ್ ಬ್ಯಾಟರಿ ಕಳವು ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಡ್ರಮ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ ಪ್ರಕರಣ ➤ ಮೂವರ ಬಂಧನ         

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 17. ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣದ ಬಳಿ ಡ್ರಮ್ ಒಂದರಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾದ ಪ್ರಕರಣವನ್ನು ಭೇಧಿಸಿದ ರೈಲ್ವೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಕೊಲೆಯಾದ ಮಹಿಳೆಯನ್ನು ಬಿಹಾರ ಮೂಲದ ತಮನ್ನಾ ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಒಟ್ಟು ಎಂಟು ಮಂದಿ ಭಾಗವಹಿಸಿದ್ದು ಸಿಟಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಮಾಲ್(21), ತನ್ವೀರ್(24) ಶಕೀಬ್(25) ಎಂಬವರನ್ನು ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು

ಡ್ರಮ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ ಪ್ರಕರಣ ➤ ಮೂವರ ಬಂಧನ          Read More »

ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ಅಕ್ರಮ ಮಾದಕ ವಸ್ತು ಗಾಂಜಾ ಮಾರಾಟ ಪ್ರಕರಣ ➤ ಓರ್ವ ಅರೆಸ್ಟ್, ಇನ್ನೋರ್ವ ಆರೋಪಿ ಪರಾರಿ

(ನ್ಯೂಸ್ ಕಡಬ)newskadaba.com ಪುತ್ತೂರು, ಮಾ.17. ಮಾದಕ ಪದಾರ್ಥ ಗಾಂಜಾವನ್ನು ಮಾರಾಟ ಮಾಡಲು ಉದ್ದೇಶದಿಂದ ಕಾರಿನಲ್ಲಿ ಸಾಗಾದ ಮಾಡುತ್ತಿದ್ದ ಸಂಧರ್ಭ ಸಂಪ್ಯ ಪೊಲೀಸ್ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುತ್ತೂರಿನ ಅಬೂಬಕ್ಕರ್ ಸಿದ್ದಿಕ್ ಎಂದು ಗುರುತಿಸಲಾಗಿದೆ. ಪರಾರಿಯಾದವನನ್ನು ಸುಳ್ಯದ ಸರ್ಪುದ್ದಿನ್ ಎಂದು ಗುರುತಿಸಲಾಗಿದೆ.

ಅಕ್ರಮ ಮಾದಕ ವಸ್ತು ಗಾಂಜಾ ಮಾರಾಟ ಪ್ರಕರಣ ➤ ಓರ್ವ ಅರೆಸ್ಟ್, ಇನ್ನೋರ್ವ ಆರೋಪಿ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 17. ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಉಳ್ಳಾಲ ಕೋಟೆಪುರ ಬಸ್‌ ನಿಲ್ದಾಣದ ಸಮೀಪ ನಡೆದಿದೆ. ಹತ್ಯೆಗೆ ಸಂಬಂಧಿಸಿ ಆಕೆಯೊಂದಿಗೆ ವಾಸಿಸುತ್ತಿದ್ದ ದೆಹಲಿ ಮೂಲದ ನಯೀಮ್‌ ಎಂಬಾತ ಈ ಹತ್ಯೆಯನ್ನು ಮಾಡಿ ಪರಾರಿಯಾಗಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿಯಿಂದ ಕೋಟೆಪುರಕ್ಕೆ ಬಂದಿದ್ದ ಜೋಡಿ, ಸ್ಥಳೀಯ ಸೆಲೂನ್‌ ಮಾಲೀಕರ ಮೂಲಕ ಬಾಡಿಗೆ ಮನೆಯನ್ನು ಸಂಪರ್ಕಿಸಿ, ಹಮೀದ್‌ ಎಂಬವರ ಬಾಡಿಗೆ ಮನೆಯನ್ನು

ಉಳ್ಳಾಲ: ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಕುಂದಾಪುರ: ಲಾರಿ ಢಿಕ್ಕಿಯಾಗಿ ಬಸ್ ಪಲ್ಟಿ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.17. ಡಿಪೋದಿಂದ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಸರ್ಕಾರಿ ಬಸ್ಸೊಂದು ಯೂ ಟರ್ನ್ ತೆಗೆದುಕೊಳ್ಳುವ ವೇಳೆ‌ ಲಾರಿ‌ ಡಿಕ್ಕಿಯಾದ ಪರಿಣಾಮ ಪಲ್ಟಿಯಾದ ಘಟನೆ‌ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರದ ಸಂತೆ ಮಾರ್ಕೆಟ್ ಬಳಿ ನಡೆದಿದೆ. ಎಂದಿನಂತೆ ಕೆಎಸ್ಆರ್ಟಿಸಿ ಬಸ್ ಸರ್ವೀಸ್ ರಸ್ತೆಯಲ್ಲಿ‌ ಬಂದು ಸಂತೆ ಮಾರ್ಕೆಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯು ಟರ್ನ್ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭ ಹಿಂದಿನಿಂದ ಬಂದ ಲಾರಿ‌ ಡಿಕ್ಕಿಹೊಡೆದಿದೆ ಎನ್ನಲಾಗಿದೆ. ಪ್ತಯಾಣಿಕರಿಲ್ಲದ ಬಸ್ ತಿರುವು ತೆಗೆದುಕೊಳ್ಳುತ್ತಿದ್ದುದರಿಂದ ನಿಯಂತ್ರಣ

ಕುಂದಾಪುರ: ಲಾರಿ ಢಿಕ್ಕಿಯಾಗಿ ಬಸ್ ಪಲ್ಟಿ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಗಾಂಜಾ ಮಾರಾಟಕ್ಕೆ ಯತ್ನ ➤ ಓರ್ವ ಅರೆಸ್ಟ್ 

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 17. ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಇಟ್ಟುಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಮತ್ತು ಎಸ್.ಐ ಅವರ ನೇತೃತ್ವದ ತಂಡವು ಬಂಧಿಸಿದ ಘಟನೆ ಮುಕ್ರಂಪಾಡಿಯ ಬಸ್ ತಂಗುದಾಣದಲ್ಲಿ ನಡೆದಿದೆ. ಬಂಧಿತನನ್ನು ಬಲ್ನಾಡು ಗ್ರಾಮದ ಬುಳ್ಳೇರಿಕಟ್ಟೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಇಕ್ಬಾಲ್ ಪಿ ಯಾನೆ ಇಕ್ಕು(35) ಎಂದು ಗುರುತಿಸಲಾಗಿದೆ.  

ಪುತ್ತೂರು: ಗಾಂಜಾ ಮಾರಾಟಕ್ಕೆ ಯತ್ನ ➤ ಓರ್ವ ಅರೆಸ್ಟ್  Read More »

ಕರಾವಳಿ

ವಿಟ್ಲ: ನೇಣುಬಿಗಿದು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 16. ವಿವಾಹಿತ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಮೈರ ಕರವೀರ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪದ್ಮಿನಿ (35) ಎಂದು ಗುರುತಿಸಲಾಗಿದೆ. ವಿವಾಹಿತರಾಗಿದ್ದ ಇವರು, ಪತಿಯನ್ನು ತೊರೆದು ತಂದೆ ಮನೆಯಲ್ಲೇ ವಾಸವಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಮಾ.15ರಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.

ವಿಟ್ಲ: ನೇಣುಬಿಗಿದು ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

ವಿಷ ಸೇವಿಸಿ ಯುವಕ ಮೃತ್ಯು…!

(ನ್ಯೂಸ್ ಕಡಬ) newskadaba.com ಕಾರ್ಕಳ, ಮಾ. 15. ವಿಷ ಸೇವಿಸಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಕಾರ್ಕಳದಲ್ಲಿ ಸಂಭವಿಸಿದೆ. ಮೃತ ಯುವಕನನ್ನು ಹಿರಿಯಂಗಡಿಯ ಪ್ರಜ್ವಲ್‌ ದೇವಾಡಿಗ(18) ಎಂದು ಗುರುತಿಸಲಾಗಿದೆ. ಈತನ ತಂದೆ ತಾಯಿ ಹಾಗೂ ಸಹೋದರ ಕಾರ್ಕಳ ಮಾರಿಗುಡಿಯ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ, ಮನೆಯಲ್ಲಿ ಒಬ್ಬನೇ ಇದ್ದ ಪ್ರಜ್ವಲ್‌ ವಿಷ ಸೇವಿಸಿದ್ದ. ಈ ಕುರಿತು ಪ್ರಜ್ವಲ್‌ನ ಗೆಳೆಯ ಮಲ್ಲಿಕಾರ್ಜುನ ಎಂಬಾತ ಪ್ರಜ್ವಲ್ ಅಣ್ಣ ಉಜ್ವಲ್‌ಗೆ ಕರೆಮಾಡಿ ವಿಷಯ ತಿಳಿಸಿದ್ದನು. ತಕ್ಷಣವೇ ಪ್ರಜ್ವಲ್‌ ನನ್ನು ಮಣಿಪಾಲದ ಆಸ್ಪತ್ರೆಗೆ

ವಿಷ ಸೇವಿಸಿ ಯುವಕ ಮೃತ್ಯು…! Read More »

ಕರಾವಳಿ, ಕ್ರೈಮ್ ನ್ಯೂಸ್

ಗಣಿತ ಪರೀಕ್ಷೆಗೆ ಗೈರಾದ ಬಾಲಕಿ ➤ ತನಿಖೆಯ ವೇಳೆ ಬಾಲ್ಯವಿವಾಹ ಪ್ರಕರಣ ಬೆಳಕಿಗೆ

(ನ್ಯೂಸ್ ಕಡಬ) newskadaba.com ಔರಂಗಬಾದ್, ಮಾ. 15. ವಿದ್ಯಾರ್ಥಿನಿಯೊಬ್ಬಳು ಗಣಿತ ಪರೀಕ್ಷೆಗೆ ಗೈರು ಹಾಜರಾಗುವ ಮೂಲಕ ಬಾಲ್ಯವಿವಾಹ ಪ್ರಕರಣವೊಂದು ಬೆಳಕಿಗೆ ಬಂದ ಘಟನೆ ಔರಂಗಬಾದ್ನಲ್ಲಿ ನಡೆದಿದೆ. ಮಹಾರಾಷ್ಟ್ರ ಪ್ರೌಢ ಶಿಕ್ಷಣ ಮಂಡಳಿಯ ಗಣಿತ ಪರೀಕ್ಷೆಗೆ ಬಾಲಕಿಯೋರ್ವಳು ಗೈರಾಗಿದ್ದು, ಇದರಿಂದ ಅನುಮಾನಗೊಂಡ ಸಾಮಾಜಿಕ ಕಾರ್ಯಕರ್ತರೊಬ್ಬರು ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ದೂರನ್ನಾಧರಿಸಿ ಬಾಲಕಿಯ ಮನೆಗೆ ಬಂದ ಗ್ರಾಮ ಸೇವಕರಿಗೆ ಬಾಲ್ಯ ವಿವಾಹ ಮಾಡಿರುವ ವಿಚಾರ ತಿಳಿದುಬಂದಿದೆ.

ಗಣಿತ ಪರೀಕ್ಷೆಗೆ ಗೈರಾದ ಬಾಲಕಿ ➤ ತನಿಖೆಯ ವೇಳೆ ಬಾಲ್ಯವಿವಾಹ ಪ್ರಕರಣ ಬೆಳಕಿಗೆ Read More »

ಕ್ರೈಮ್ ನ್ಯೂಸ್

ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ ➤ ಲಕ್ಷಾಂತರ ರೂಪಾಯಿ ನಷ್ಟ

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 15. ಗುಜರಿ ಅಂಗಡಿಯ ವಸ್ತುಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಉಡುಪಿಯ ಕಿನ್ನಿಮುಲ್ಕಿ ಸ್ವಾಗತ ಗೋಪುರ ಸಮೀಪದ ಗುಜರಿ ಅಂಗಡಿಯಲ್ಲಿ ನಡೆದಿದೆ. ಪ್ಲಾಸ್ಟಿಕ್ ಮತ್ತು ಗುಜರಿ ವಸ್ತುಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ ಎನ್ನಲಾಗಿದೆ. ತಡರಾತ್ರಿ ಅಗ್ನಿಶಾಮದಳ ಸಿಬ್ಬಂದಿಗಳು ಹರಸಾಹಸಟ್ಟು ಬೆಂಕಿ ನಂದಿಸಿದರು. ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.    

ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ ➤ ಲಕ್ಷಾಂತರ ರೂಪಾಯಿ ನಷ್ಟ Read More »

ಕರಾವಳಿ
Scroll to Top