ಗಣಿತ ಪರೀಕ್ಷೆಗೆ ಗೈರಾದ ಬಾಲಕಿ ➤ ತನಿಖೆಯ ವೇಳೆ ಬಾಲ್ಯವಿವಾಹ ಪ್ರಕರಣ ಬೆಳಕಿಗೆ

(ನ್ಯೂಸ್ ಕಡಬ) newskadaba.com ಔರಂಗಬಾದ್, ಮಾ. 15. ವಿದ್ಯಾರ್ಥಿನಿಯೊಬ್ಬಳು ಗಣಿತ ಪರೀಕ್ಷೆಗೆ ಗೈರು ಹಾಜರಾಗುವ ಮೂಲಕ ಬಾಲ್ಯವಿವಾಹ ಪ್ರಕರಣವೊಂದು ಬೆಳಕಿಗೆ ಬಂದ ಘಟನೆ ಔರಂಗಬಾದ್ನಲ್ಲಿ ನಡೆದಿದೆ.


ಮಹಾರಾಷ್ಟ್ರ ಪ್ರೌಢ ಶಿಕ್ಷಣ ಮಂಡಳಿಯ ಗಣಿತ ಪರೀಕ್ಷೆಗೆ ಬಾಲಕಿಯೋರ್ವಳು ಗೈರಾಗಿದ್ದು, ಇದರಿಂದ ಅನುಮಾನಗೊಂಡ ಸಾಮಾಜಿಕ ಕಾರ್ಯಕರ್ತರೊಬ್ಬರು ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ದೂರನ್ನಾಧರಿಸಿ ಬಾಲಕಿಯ ಮನೆಗೆ ಬಂದ ಗ್ರಾಮ ಸೇವಕರಿಗೆ ಬಾಲ್ಯ ವಿವಾಹ ಮಾಡಿರುವ ವಿಚಾರ ತಿಳಿದುಬಂದಿದೆ.

Scroll to Top