RSS ಕಾರ್ಯಕರ್ತನಿಗೆ ಚೂರಿ ಇರಿದಾಗ ಆಸ್ಪತ್ರೆಗೆ ಸೇರಿಸಿದ ಮುಸ್ಲಿಂ ಯುವಕ ►ಮಾನವೀಯತೆಯ ಮೂಲಕ ಹೀರೋ ಆದ ಬಂಟ್ವಾಳದ ಯುವಕ
(ನ್ಯೂಸ್ ಕಡಬ) newskadaba.com ಮಂಗಳೂರು, ಜು.06. ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ ಎಂಬುದನ್ನು ಬಿ.ಸಿ. ರೋಡಿನ ಯುವಕನೊಬ್ಬ ತನ್ನ ಮಹತ್ಕಾರ್ಯದ ಮೂಲಕ ಸಾದರಪಡಿಸಿದ್ದಾನೆ. ಕೋಮು ಸಂಘರ್ಷದಿಂದ ಕರಾವಳಿ ಜಿಲ್ಲೆ ಉರಿಯುತ್ತಿದ್ದರೆ ಜಾತಿ, ಧರ್ಮದ ಹಂಗು ತೊರೆದು ಗೆಳೆಯನ ರಕ್ಷಣೆಗೆ ಧಾವಿಸಿ ಬಂದಿದ್ದಾರೆ ಹಣ್ಣಿನ ವ್ಯಾಪಾರಿ ಅಬ್ದುಲ್ ರವೂಫ್. ಹೌದು, ಕಳೆದ ಮಂಗಳವಾರ ರಾತ್ರಿ ಸುಮಾರು ಹತ್ತು ಗಂಟೆಗೆ ಬಿ.ಸಿ.ರೋಡಿನ ಉದಯ ಲಾಂಡ್ರಿ ಮಾಲೀಕ, RSS ಕಾರ್ಯಕರ್ತ ಶರತ್‍ನಿಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತಕ್ಷಣವೇ ಅಕ್ಕಪಕ್ಕದವರು […]







