ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ ➤ ಲಕ್ಷಾಂತರ ರೂಪಾಯಿ ನಷ್ಟ

(ನ್ಯೂಸ್ ಕಡಬ) newskadaba.com ಉಡುಪಿ, ಮಾ. 15. ಗುಜರಿ ಅಂಗಡಿಯ ವಸ್ತುಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಉಡುಪಿಯ ಕಿನ್ನಿಮುಲ್ಕಿ ಸ್ವಾಗತ ಗೋಪುರ ಸಮೀಪದ ಗುಜರಿ ಅಂಗಡಿಯಲ್ಲಿ ನಡೆದಿದೆ.

ಪ್ಲಾಸ್ಟಿಕ್ ಮತ್ತು ಗುಜರಿ ವಸ್ತುಗಳಿಗೆ ಆಕಸ್ಮಿಕ ಬೆಂಕಿ ತಗುಲಿದೆ ಎನ್ನಲಾಗಿದೆ. ತಡರಾತ್ರಿ ಅಗ್ನಿಶಾಮದಳ ಸಿಬ್ಬಂದಿಗಳು ಹರಸಾಹಸಟ್ಟು ಬೆಂಕಿ ನಂದಿಸಿದರು. ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

 

 

Scroll to Top