ನೆರಿಯ: ಕಾಡುಹಂದಿ ಬೇಟೆಯಾಡಿ ಮಾಂಸ ಸಂಗ್ರಹಿಸಿದ್ದ ವ್ಯಕ್ತಿ ಅರಣ್ಯ ಇಲಾಖೆ ವಶಕ್ಕೆ

(ನ್ಯೂಸ್‌ ಕಡಬ) newskadaba.com, ಸೆ.22 . ನೆರಿಯ ಗ್ರಾಮದ ಮುಚ್ಚರಾಳಿಯಲ್ಲಿ ಕಾಡುಹಂದಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಸಂಸ್ಕರಿಸಿದ ನಂತರ ಸಂಗ್ರಹಿಸಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ನೆರಿಯ ಗ್ರಾಮದ ಮುಚಳ್ಳಿ ಮನೆಯ ನಿವಾಸಿ ಕುಕ್ಕಪ್ಪ ಗೌಡ ಅವರ ಪುತ್ರ ಸುರೇಶ್ ಎಂಕೆ (38) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 20 ರಂದು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕಾಡುಹಂದಿಯನ್ನು ಬೇಟೆಯಾಡಿರುವುದು ಪತ್ತೆಯಾಗಿದೆ. ಬೇಟೆಗೆ ಬಳಸಲಾಗಿದೆ ಎನ್ನಲಾದ ಬಂದೂಕು, ಚಾಕು ಮತ್ತು ಇತರ ಉಪಕರಣಗಳನ್ನು […]

ನೆರಿಯ: ಕಾಡುಹಂದಿ ಬೇಟೆಯಾಡಿ ಮಾಂಸ ಸಂಗ್ರಹಿಸಿದ್ದ ವ್ಯಕ್ತಿ ಅರಣ್ಯ ಇಲಾಖೆ ವಶಕ್ಕೆ Read More »

ಕರಾವಳಿ

ಕರಾವಳಿಯಲ್ಲಿ 3 ದಿನ ‘ರೆಡ್ ಅಲರ್ಟ್’: ಭಾರಿ ಮಳೆ, ಬಲವಾದ ಗಾಳಿ ಮುನ್ಸೂಚನೆ!

(ನ್ಯೂಸ್‌ ಕಡಬ) newskadaba.com, ಸೆ.22 . ಕರ್ನಾಟಕದ ಮೂರು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮಳೆಯೊಂದಿಗೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಪ್ರದೇಶದಾದ್ಯಂತ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ.ಉಡುಪಿ ಜಿಲ್ಲೆಯ ಹಲವೆಡೆ ಈಗಾಗಲೇ ಮಧ್ಯಮದಿಂದ ಭಾರೀ ಮಳೆಯಾಗಿದ್ದು, ಸುಮಾರು 30ರಿಂದ 45 ನಿಮಿಷಗಳ ಕಾಲ ಜೋರು ಮಳೆ ದಾಖಲಾಗಿದೆ.ಕಳೆದ 24 ಗಂಟೆಗಳಲ್ಲಿ

ಕರಾವಳಿಯಲ್ಲಿ 3 ದಿನ ‘ರೆಡ್ ಅಲರ್ಟ್’: ಭಾರಿ ಮಳೆ, ಬಲವಾದ ಗಾಳಿ ಮುನ್ಸೂಚನೆ! Read More »

ಕರಾವಳಿ

ಬಿಸಿಲಿನ ಝಳಕ್ಕೆ ಸಿಕ್ಕಿತು ಮುಕ್ತಿ: ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ತಂಪರೆದ ಮಳೆ!

(ನ್ಯೂಸ್‌ ಕಡಬ) newskadaba.com,  ಸೆ.21 . ಮಂಗಳೂರು: ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲು ಹಾಗೂ ಉರಿ ಸೆಖೆಯಿಂದ ಬಳಲುತ್ತಿದ್ದ ಮಂಗಳೂರು ಸೇರಿದಂತೆ ಕರಾವಳಿಯ ಜನತೆಗೆ ಸೋಮವಾರ ಸುರಿದ ಮಳೆ ಕೊಂಚ ನೆಮ್ಮದಿ ತಂದಿದೆ. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ನಗರದ ವಿವಿಧ ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ಕರಾವಳಿ ಕರ್ನಾಟಕದಲ್ಲಿ ಸೆಪ್ಟೆಂಬರ್ 21 ರಿಂದ 24 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.ವಿಶೇಷವಾಗಿ ಸೆಪ್ಟೆಂಬರ್ 21 ಮತ್ತು 22

ಬಿಸಿಲಿನ ಝಳಕ್ಕೆ ಸಿಕ್ಕಿತು ಮುಕ್ತಿ: ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ತಂಪರೆದ ಮಳೆ! Read More »

ಕರಾವಳಿ

ಉಡುಪಿ: ನದಿಗೆ ಬಿದ್ದ ಕಾರು — ಮೀನುಗಾರನ ಸಾಹಸದಿಂದ ಇಬ್ಬರ ಪ್ರಾಣ ರಕ್ಷಣೆ!

(ನ್ಯೂಸ್‌ ಕಡಬ) newskadaba.com,  ಸೆ.21 .ಉಡುಪಿಯ ಕೊಡವೂರಿನ ಚೆನ್ನಂಗಡಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿಬಿದ್ದಿದೆ.ಕಾರಿನಲ್ಲಿ ಸಿಲುಕಿದ್ದ ಚಾಲಕ ಹಾಗೂ 3 ವರ್ಷದ ಮಗುವನ್ನು ಸ್ಥಳೀಯ ಮೀನುಗಾರ ಗಣೇಶ್ ತಕ್ಷಣ ನದಿಗೆ ಧುಮುಕಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸಮಯಪ್ರಜ್ಞೆ ಹಾಗೂ ಧೈರ್ಯ ಪ್ರದರ್ಶಿಸಿ ಇಬ್ಬರ ಪ್ರಾಣ ಉಳಿಸಿದ ಗಣೇಶ್ ಅವರ ಸಾಹಸಕ್ಕೆ ಸ್ಥಳೀಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಉಡುಪಿ: ನದಿಗೆ ಬಿದ್ದ ಕಾರು — ಮೀನುಗಾರನ ಸಾಹಸದಿಂದ ಇಬ್ಬರ ಪ್ರಾಣ ರಕ್ಷಣೆ! Read More »

ಕರಾವಳಿ

ಸೆಪ್ಟೆಂಬರ್ 28 ರಿಂದ 30ರವರೆಗೆ ದೇಶಾದ್ಯಂತ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ: ಒಕ್ಕೂಟಗಳಿಂದ 3 ದಿನಗಳ ಮುಷ್ಕರ ಕರೆ

(ನ್ಯೂಸ್‌ ಕಡಬ) newskadaba.com,  ಸೆ.21 . ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 28 ರಿಂದ 30ರವರೆಗೆ ಮೂರು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಶಾಖೆಗೆ ಭೇಟಿ ನೀಡಿ ಮಾಡಬೇಕಾದ ತುರ್ತು ಕೆಲಸಗಳನ್ನು ಮುಷ್ಕರಕ್ಕೂ ಮುನ್ನವೇ ಪೂರ್ಣಗೊಳಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸೂಚಿಸಿದೆ.ಚೆಕ್ ಕ್ಲಿಯರೆನ್ಸ್, ಭೌತಿಕ ದಾಖಲೆಗಳ ಪರಿಶೀಲನೆ ಹಾಗೂ ಬ್ಯಾಂಕ್ ಸಿಬ್ಬಂದಿಯ ನೇರ ಸಹಾಯ ಅಗತ್ಯವಿರುವ ಸೇವೆಗಳಲ್ಲಿ ವಿಳಂಬ ಅಥವಾ ಅಡಚಣೆ

ಸೆಪ್ಟೆಂಬರ್ 28 ರಿಂದ 30ರವರೆಗೆ ದೇಶಾದ್ಯಂತ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ: ಒಕ್ಕೂಟಗಳಿಂದ 3 ದಿನಗಳ ಮುಷ್ಕರ ಕರೆ Read More »

ಕರಾವಳಿ

ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಮೃತ್ಯು

(ನ್ಯೂಸ್‌ ಕಡಬ) newskadaba.com,  ಸೆ.21 . ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲಿಯೇ ವೃದ್ಧೆ ಮೃತಪಟ್ಟಿರುವ ಘಟನೆ ಕೊಪ್ಪಳದ ಬಿ.ಟಿ ಪಾಟೀಲ್ ನಗರದಲ್ಲಿ ನಡೆದಿದೆ.ನಜಮುನಿಸಾ ಬೇಗಂ (91) ಮೃತಪಟ್ಟ ವೃದ್ಧೆ. ನಜಮುನಿಸಾ ಬೇಗ್‌ಂ ಮನೆ ಮುಂದೆ ನಿಂತುಕೊಂಡಿದ್ದರು. ಈ ವೇಳೆ ನಜಮುನಿಸಾ ಬೇಗಂ ಮೇಲೆ ಕೋತಿ ದಾಳಿ ನಡೆಸಿ ತಳ್ಳಿದೆ. ಈ ಪರಿಣಾಮ ನಜಮುನಿಸಾ ಬೇಗಂ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ನಜಮುನಿಸಾ ಬೇಗಂ ಅವರನ್ನು ಎಬ್ಬಿಸಲು ಬಂದ ಮಹಿಳೆಯ ಮೇಲೂ ಕೋತಿ ದಾಳಿ ನಡೆಸಿದೆ. ಘಟನೆಯ ದೃಶ್ಯ

ಕೋತಿ ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲೇ ವೃದ್ಧೆ ಮೃತ್ಯು Read More »

ಕರಾವಳಿ

ಮಲ್ಲಮ್ಮ ʻಬಿಗ್‌ ಬಾಸ್‌ʼ ವೇದಿಕೆ ಏರಲು ಕಾರಣಕರ್ತರಾಗಿದ್ದ ಪಲ್ಲವಿ ಅವರ ಹಠಾತ್‌ ನಿಧನ

(ನ್ಯೂಸ್‌ ಕಡಬ) newskadaba.com,  ಸೆ.21 . ಪ್ರಸಿದ್ಧ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಹಾಗೂ ‘ರಿಷಿ ಡಿಸೈನ್’ ಬೋಟಿಕ್ ಸಂಸ್ಥಾಪಕಿ ಪಲ್ಲವಿ ಅವರು ಹಠಾತ್ ನಿಧನರಾಗಿದ್ದಾರೆ. ಅವರ ಸಡನ್ ಅಗಲಿಕೆ ಕಿರುತೆರೆ ಲೋಕ ಹಾಗೂ ಅಭಿಮಾನಿಗಳಿಗೆ ತೀವ್ರ ಆಘಾತ ತಂದಿದೆ. ಉತ್ತರ ಕರ್ನಾಟಕ ಮೂಲದ ಮಲ್ಲಮ್ಮ ಅವರಿಗೆ ಬೆಂಗಳೂರಿನಲ್ಲಿ ಆಶ್ರಯ ನೀಡಿ, ತಮ್ಮ ‘ರಿಷಿ ಡಿಸೈನ್’ ಬೋಟಿಕ್‌ನಲ್ಲಿ ಉದ್ಯೋಗ ಕಲ್ಪಿಸುವ ಮೂಲಕ ಅವರ ಜೀವನಕ್ಕೆ ಪಲ್ಲವಿ ಆಸರೆಯಾಗಿದ್ದರು.ಮಲ್ಲಮ್ಮ ಅವರನ್ನು ಕೇವಲ ಉದ್ಯೋಗಿಯಾಗಿ ನೋಡದೆ ಕುಟುಂಬದ ಸದಸ್ಯೆಯಂತೆ ಪ್ರೀತಿಸುತ್ತಿದ್ದ ಪಲ್ಲವಿ,

ಮಲ್ಲಮ್ಮ ʻಬಿಗ್‌ ಬಾಸ್‌ʼ ವೇದಿಕೆ ಏರಲು ಕಾರಣಕರ್ತರಾಗಿದ್ದ ಪಲ್ಲವಿ ಅವರ ಹಠಾತ್‌ ನಿಧನ Read More »

ಕರಾವಳಿ

ಮಂಗಳೂರು ವಾಟರ್ ಮೆಟ್ರೋ: ಬಂದರು ಇಲಾಖೆಯಿಂದ 11 ಪ್ರಮುಖ ನಿಲ್ದಾಣಗಳ ಪಟ್ಟಿ ಬಿಡುಗಡೆ

(ನ್ಯೂಸ್‌ ಕಡಬ) newskadaba.com,  ಸೆ.21 . ಪ್ರಸ್ತಾವಿತ ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಚಾಲನೆ ದೊರೆತಿದ್ದು, ಬಂದರು ಹಾಗೂ ಮೀನುಗಾರಿಕಾ ಉಪವಿಭಾಗವು ಪ್ರಸ್ತಾವಿತ 19 ನಿಲ್ದಾಣಗಳ ಪೈಕಿ 11 ಮುಖ್ಯ ನಿಲ್ದಾಣಗಳನ್ನು ಅಂತಿಮಗೊಳಿಸಿದೆ. ಜೆಪ್ಪಿನಮೊಗರು ಎನ್‌ಎಚ್, ನಾರ್ದನ್ ಸ್ಯಾಂಡ್ ಬಾರ್, ಓಲ್ಡ್ ಪೋರ್ಟ್, ಪೋರ್ಟ್ ಫೆರಿ, ಸ್ಯಾಂಡ್‌ಪಿಟ್ ಬೆಂಗ್ರೆ, ಬಂಗ್ರ ಕೂಳೂರು, ಕೂಳೂರು ಸೇತುವೆ, ಕಸಬಾ ಬೆಂಗ್ರೆ, ಸುಲ್ತಾನ್ ಬತ್ತೇರಿ, ಜೆಪ್ಪಿನಮೊಗರು ಓಲ್ಡ್ ಫೆರಿ ಮತ್ತು ತಣ್ಣೀರುಬಾವಿ ಚರ್ಚ್.ಕೂಳೂರು ಸೇತುವೆ ಬಳಿ ರೋ-ರೋ ಹಾಗೂ ಫ್ಲೋಟಿಂಗ್ ಮಾದರಿಯ

ಮಂಗಳೂರು ವಾಟರ್ ಮೆಟ್ರೋ: ಬಂದರು ಇಲಾಖೆಯಿಂದ 11 ಪ್ರಮುಖ ನಿಲ್ದಾಣಗಳ ಪಟ್ಟಿ ಬಿಡುಗಡೆ Read More »

ಕರಾವಳಿ

ಉಪ್ಪಿನಂಗಡಿ ಪೆರ್ನೆ ಘಟನೆ: ಬಾವಿಗೆ ಮಕ್ಕಳನ್ನು ಎಸೆದಿದ್ದ ಮಹಿಳೆಗೆ ನ್ಯಾಯಾಂಗ ಬಂಧನ!

(ನ್ಯೂಸ್‌ ಕಡಬ) newskadaba.com,  ಸೆ.21 . ಕುಟುಂಬ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಕಂದಮ್ಮಗಳನ್ನು ಬಾವಿಗೆ ಎಸೆದು, ಮಗುವಿನ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆ ನೂರುನ್ನಿಸಾಳಿಗೆ ಪುತ್ತೂರು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ (ರಿಮಾಂಡ್) ವಿಧಿಸಿದೆ. ಸೆಪ್ಟೆಂಬರ್ 19 ರಂದು ಬಂಟ್ವಾಳ ತಾಲೂಕಿನ ಪೆರ್ನೆ ಸಮೀಪ ಕುಟುಂಬದ ಆಂತರಿಕ ಜಗಳದ ಕಾರಣಕ್ಕೆ ನೂರುನ್ನೀಸಾ, ತನ್ನ ಸ್ವಂತ ಮಗಳಾದ ಆಲಿಯಾ (2 ವರ್ಷ) ಹಾಗೂ ಗಂಡನ ತಂಗಿಯ ಮಗುವಾದ ರಬೀಹ್ (3 ವರ್ಷ) ಎಂಬಿಬ್ಬರನ್ನು ಮನೆಯಲ್ಲಿದ್ದ

ಉಪ್ಪಿನಂಗಡಿ ಪೆರ್ನೆ ಘಟನೆ: ಬಾವಿಗೆ ಮಕ್ಕಳನ್ನು ಎಸೆದಿದ್ದ ಮಹಿಳೆಗೆ ನ್ಯಾಯಾಂಗ ಬಂಧನ! Read More »

ಕರಾವಳಿ

ವ್ಯಕ್ತಿ ಮೇಲೆ ಚೂರಿಯಿಂದ ಭೀಕರ ಹಲ್ಲೆ: ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ತನಿಖೆ ಚುರುಕು

(ನ್ಯೂಸ್‌ ಕಡಬ) newskadaba.com,  ಸೆ.21 . ಬಂಟ್ವಾಳ ತಾಲೂಕಿನ ಧನುಪೂಜೆ ಸಮೀಪದ ಕಮ್ಮಾಜೆಯಲ್ಲಿ ರವಿವಾರ ಸಂಜೆ ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದ ಘಟನೆ ನಡೆದಿದೆ.ಕಮ್ಮಾಜೆಯ ಮೂಡಾಯಿಕೋಡಿ ನಿವಾಸಿ ಪ್ರಶಾಂತ್ ಚೂರಿ ಇರಿತಕ್ಕೊಳಗಾದವರಾಗಿದ್ದು, ಮೇಸ್ತ್ರೀ ಪ್ರಶಾಂತ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಪ್ರಶಾಂತ್ ಅವರನ್ನು ತಕ್ಷಣವೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದು, ಚೂರಿ ಇರಿತಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ವ್ಯಕ್ತಿ ಮೇಲೆ ಚೂರಿಯಿಂದ ಭೀಕರ ಹಲ್ಲೆ: ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ತನಿಖೆ ಚುರುಕು Read More »

ಕರಾವಳಿ
Scroll to Top