
(ನ್ಯೂಸ್ ಕಡಬ) newskadaba.com, ಸೆ.21 . ಪ್ರಸ್ತಾವಿತ ಮಂಗಳೂರು ವಾಟರ್ ಮೆಟ್ರೋ ಯೋಜನೆಗೆ ಚಾಲನೆ ದೊರೆತಿದ್ದು, ಬಂದರು ಹಾಗೂ ಮೀನುಗಾರಿಕಾ ಉಪವಿಭಾಗವು ಪ್ರಸ್ತಾವಿತ 19 ನಿಲ್ದಾಣಗಳ ಪೈಕಿ 11 ಮುಖ್ಯ ನಿಲ್ದಾಣಗಳನ್ನು ಅಂತಿಮಗೊಳಿಸಿದೆ.
ಜೆಪ್ಪಿನಮೊಗರು ಎನ್ಎಚ್, ನಾರ್ದನ್ ಸ್ಯಾಂಡ್ ಬಾರ್, ಓಲ್ಡ್ ಪೋರ್ಟ್, ಪೋರ್ಟ್ ಫೆರಿ, ಸ್ಯಾಂಡ್ಪಿಟ್ ಬೆಂಗ್ರೆ, ಬಂಗ್ರ ಕೂಳೂರು, ಕೂಳೂರು ಸೇತುವೆ, ಕಸಬಾ ಬೆಂಗ್ರೆ, ಸುಲ್ತಾನ್ ಬತ್ತೇರಿ, ಜೆಪ್ಪಿನಮೊಗರು ಓಲ್ಡ್ ಫೆರಿ ಮತ್ತು ತಣ್ಣೀರುಬಾವಿ ಚರ್ಚ್.ಕೂಳೂರು ಸೇತುವೆ ಬಳಿ ರೋ-ರೋ ಹಾಗೂ ಫ್ಲೋಟಿಂಗ್ ಮಾದರಿಯ ಎರಡು ಪ್ರತ್ಯೇಕ ನಿಲ್ದಾಣಗಳನ್ನು ರೂಪಿಸಲು ಯೋಜನೆ ರೂಪಿಸಲಾಗಿದೆ.
ನಗರದ ರಸ್ತೆ ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಕರಾವಳಿ ಹಾಗೂ ಬಂದರು ಪ್ರದೇಶಗಳ ಸಂಪರ್ಕ ಸುಧಾರಣೆ ಮತ್ತು ಜಲಸಾರಿಗೆ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು.ಸರ್ಕಾರದ ಪಿಪಿಪಿ ಸೆಲ್ಗೆ ಭೂಮಿಯ ಅಂದಾಜು ವಿವರಗಳನ್ನು ಸಲ್ಲಿಸಲಾಗಿದ್ದು, ಮುಂದಿನ ಹಂತದಲ್ಲಿ ತಾಂತ್ರಿಕ ಕಾರ್ಯಸಾಧ್ಯತೆ, ನಿಖರ ಮಾರ್ಗ, ದರ ಮತ್ತು ಯೋಜನೆ ಅನುಷ್ಠಾನದ ಅಂತಿಮ ವರದಿ ಸಿದ್ಧವಾಗಲಿದೆ.
ಈ ಯೋಜನೆಯು ಮಂಗಳೂರಿನ ಸಾರಿಗೆ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.




