
(ನ್ಯೂಸ್ ಕಡಬ) newskadaba.com, ಸೆ.21 .ಉಡುಪಿಯ ಕೊಡವೂರಿನ ಚೆನ್ನಂಗಡಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿಬಿದ್ದಿದೆ.ಕಾರಿನಲ್ಲಿ ಸಿಲುಕಿದ್ದ ಚಾಲಕ ಹಾಗೂ 3 ವರ್ಷದ ಮಗುವನ್ನು ಸ್ಥಳೀಯ ಮೀನುಗಾರ ಗಣೇಶ್ ತಕ್ಷಣ ನದಿಗೆ ಧುಮುಕಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಸಮಯಪ್ರಜ್ಞೆ ಹಾಗೂ ಧೈರ್ಯ ಪ್ರದರ್ಶಿಸಿ ಇಬ್ಬರ ಪ್ರಾಣ ಉಳಿಸಿದ ಗಣೇಶ್ ಅವರ ಸಾಹಸಕ್ಕೆ ಸ್ಥಳೀಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.




