“ಸೈಕಲ್ ಸವಾರಿ ಮತ್ತು ಪೋಲಿಯೋ ಡ್ರಾಪ್ಸ್” ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಜೂ. 14. 1980ರ ಕಾಲಘಟ್ಟ. ನಮ್ಮೂರು ಚೂಂತಾರು ಸಮೀಪದ ಶೇಣಿಯ ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ಸಮಯವದು. ಆ ಸಂದರ್ಭದಲ್ಲಿ ಪೊಲಿಯೋ ಡ್ರಾಪ್ಸ್ ಹಾಕುವುದು ಈಗಿನಂತೆ ಎಲ್ಲೆಡೆ ಭರದಿಂದ ನಡೆಯುತ್ತಿತ್ತು. ನಮ್ಮಪ್ಪನಿಗೆ ನಾನು ಸೇರಿ ನಾಲ್ಕು ಮಕ್ಕಳು ಬೆನ್ನು ಬೆನ್ನಿಗೆ ಹುಟ್ಟಿದ ಕಾರಣದಿಂದ ನಮಗೆಲ್ಲರಿಗೂ ವರ್ಷದಷ್ಟೇ ಅಂತರ ಇತ್ತು. ತಮ್ಮ, ಅಣ್ಣ, ಅಕ್ಕ ಮತ್ತು ನನಗೆ ಹೀಗೆ ನಾಲ್ವರಿಗೂ ಪೊಲಿಯೋ ಡ್ರಾಪ್ಸ್ ಹಾಕಿಸಬೇಕಿತ್ತು. ನಮ್ಮಪ್ಪ ವೃತ್ತಿಯಲ್ಲಿ ಪುರೋಹಿತರು. ಮನೆಯಲ್ಲಿ ಕಡು ಬಡತನವಿದ್ದರೂ ಹೊಟ್ಟೆ ಮತ್ತು […]

“ಸೈಕಲ್ ಸವಾರಿ ಮತ್ತು ಪೋಲಿಯೋ ಡ್ರಾಪ್ಸ್” ಡಾ. ಚೂಂತಾರು Read More »

ವಿಶೇಷ ಲೇಖನಗಳು

ಸರಸ್ವತೀ ವಿದ್ಯಾಲಯದಲ್ಲಿ ಹಿಂದೂ ಸಾಮ್ರಾಜ್ಯ ದಿನ

(ನ್ಯೂಸ್ ಕಡಬ) newskadaba.com ಕಡಬ, ಜೂ. 14. ಕಡಬ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯಲ್ಲಿ ಜೂನ್ 13ರಂದು ಹಿಂದೂ ಸಾಮ್ರಾಜ್ಯ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಪ್ರಮೀಳಾ ಲೋಕೇಶ್ ವಹಿಸಿ ಶಿವಾಜಿಯ ಜೀವನ, ಹಿಂದೂ ಸಾಮ್ರಾಜ್ಯವನ್ನು ಕಟ್ಟಿದ ರೀತಿಯನ್ನು ಸ್ಪುಟವಾಗಿ ತಿಳಿಸಿದರು. ವಿದ್ಯಾರ್ಥಿಗಳಾದ ರಕ್ಷಾ ಹಾಗೂ ದಿಗಂತ್ ಹಿಂದೂ ಸಾಮ್ರಾಜ್ಯ ದಿನದ ಮಹತ್ವವನ್ನು ತಿಳಿಸಿದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ್ಮೀಶ ಗೌಡ ಆರಿಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕ –ಶಿಕ್ಷಕೇತರ ವೃಂದ,

ಸರಸ್ವತೀ ವಿದ್ಯಾಲಯದಲ್ಲಿ ಹಿಂದೂ ಸಾಮ್ರಾಜ್ಯ ದಿನ Read More »

ಕರಾವಳಿ

ಲಾಲ್ ಬಾಗ್ ನಲ್ಲಿ ಇನ್ನುಮುಂದೆ ಫೊಟೋ ಶೂಟ್, ವಿಡಿಯೋ ಚಿತ್ರೀಕರಣಕ್ಕೆ ನಿಷೇಧ

(ನ್ಯೂಸ್ ಕಡಬ) newskadaba.com ಜೂ. 14. ಇನ್ನುಮುಂದೆ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ವೆಡ್ಡಿಂಗ್‌ ಫೋಟೋಶೂಟ್‌, ಮಾಡೆಲಿಂಗ್‌, ರೀಲ್ಸ್‌ ವಿಡಿಯೋ ಹಾಗೂ ಸಿನಿಮಾ ಚಿತ್ರೀಕರಣಕ್ಕೆ ನಿಷೇಧ ಹೇರಲಾಗಿದೆ. ಈ ಕುರಿತು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ. ಕಬ್ಬನ್‌ ಪಾರ್ಕ್‌ನಲ್ಲಿ ಈಗಾಗಲೇ ರೀಲ್ಸ್‌, ಸಿನಿಮಾ, ಕಿರುತೆರೆ ಚಿತ್ರೀಕರಣ, ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌, ಪೋಸ್ಟ್‌ ವೆಡ್ಡಿಂಗ್‌ ಫೋಟೋ ಶೂಟ್‌ ಸೇರಿ, ಚಿತ್ರೀಕರಣಕ್ಕೂ ನಿಷೇಧಿಸಿ ರಾಜ್ಯ ಸರಕಾರ ಆದೇಶ ಮಾಡಿತ್ತು. ಈ ಬೆನ್ನಲ್ಲೇ ಇದೀಗ ಲಾಲ್‌ಬಾಗ್‌ನಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರಲು ತೋಟಗಾರಿಕಾ ಇಲಾಖೆ

ಲಾಲ್ ಬಾಗ್ ನಲ್ಲಿ ಇನ್ನುಮುಂದೆ ಫೊಟೋ ಶೂಟ್, ವಿಡಿಯೋ ಚಿತ್ರೀಕರಣಕ್ಕೆ ನಿಷೇಧ Read More »

ಕರ್ನಾಟಕ

ವಿಮಾನ ದುರಂತ- ಮೋದಿ ಯಾಕೆ ರಾಜೀನಾಮೆ ಕೊಡಬೇಕು ಅವರೇನು ಪೈಲಟಾ? ಪಿಎಂ ಮೋದಿ ಪರ ಸಿಎಂ ಇಬ್ರಾಹಿಂ ಬ್ಯಾಟಿಂಗ್

(ನ್ಯೂಸ್ ಕಡಬ) newskadaba.com ಜೂ. 14.  ಗುರುವಾರದಂದು ಗುಜರಾತಿನ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಒಟ್ಟು 265 ಜನ ಮೃತಪಟ್ಟಿದ್ದು, ಈ ದುರಂತದ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಕೇಂದ್ರ ಸರ್ಕಾರವನ್ನು ದೂರಿದ್ದಾರೆ. ಹೀಗಾಗಿ ದುರಂತಕ್ಕೆ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕೆಂಬ ಮಾತುಗಳು ಸಹ ಕೇಳಿಬರುತ್ತಿದ್ದು, ಇದರ ನಡುವೆ ಮಾಜಿ ಶಾಸಕ ಸಿಎಂ ಇಬ್ರಾಹಿಂ ಅವರು ಪ್ರಧಾನಿ ನರೇಂದ್ರ ಮೋದಿಯವರ ಪರ ಬ್ಯಾಟ್ ಬೀಸಿದ್ದಾರೆ. ಮೋದಿಯವರು ರಾಜೀನಾಮೆ ಕೊಡಬೇಕು

ವಿಮಾನ ದುರಂತ- ಮೋದಿ ಯಾಕೆ ರಾಜೀನಾಮೆ ಕೊಡಬೇಕು ಅವರೇನು ಪೈಲಟಾ? ಪಿಎಂ ಮೋದಿ ಪರ ಸಿಎಂ ಇಬ್ರಾಹಿಂ ಬ್ಯಾಟಿಂಗ್ Read More »

ರಾಷ್ಟ್ರೀಯ ನ್ಯೂಸ್

ಹಾಲು ಕದಿಯುವ ಹಸು ಪತ್ತೆ- ವಿಡಿಯೋ ವೈರಲ್..!

(ನ್ಯೂಸ್ ಕಡಬ) newskadaba.com ಜೂ. 14.  ಹಸುವೊಂದು ಹಾಲು ಕದ್ದು ಕುಡಿಯುವ ವಿಚಿತ್ರ ಪ್ರಕರಣವೊಂದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಬೆಳಕಿಗೆ ಬಂದಿದ್ದು, ಹಸು ಒಂದು ಕಳ್ಳತನ ಮಾಡಿ ಸಿಕ್ಕಿಬಿದ್ದಿದೆ. ಇದು ವಿಚಿತ್ರವಾದರೂ ಸತ್ಯ. ಮೂಡಿಗೆರೆಯಲ್ಲಿ ಅಂಗಡಿ ನಡೆಸುತ್ತಿದ್ದ ವಿಕ್ರಂ ಎಂಬವರ ಅಂಗಡಿಯಲ್ಲಿ ಪ್ರತಿದಿನ 10-20 ಲೀಟರ್ ಹಾಲು ಕಳ್ಳತನವಾಗುತ್ತಿತ್ತು. ಹಾಲಿನ ವಾಹನ ಅಂಗಡಿ ಮುಂದೆ ಸರಿಯಾಗಿ ಸಂಖ್ಯೆ ಪ್ರಕಾರ ಹಾಲಿನ ಟ್ರೇ ಇಳಿಸಿ ಹೋಗುತ್ತಿದ್ದರೂ ಹಾಲಿನ ಪ್ಯಾಕೆಟ್‌ಗಳು ಅಲ್ಲಿ ಇರುತ್ತಿರಲಿಲ್ಲ. ವಿಕ್ರಂ ಮೊದಲಿಗೆ ಇದು ಮಾನವರ ಕಳ್ಳತನವೆಂದು ಶಂಕಿಸಿದ್ದರು.

ಹಾಲು ಕದಿಯುವ ಹಸು ಪತ್ತೆ- ವಿಡಿಯೋ ವೈರಲ್..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Crime

ಚೂರಿ ಇರಿತಕ್ಕೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ಮೃತ್ಯು

(ನ್ಯೂಸ್ ಕಡಬ) newskadaba.com ಜೂ. 14. ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೌಶಿಕ್ ಎಂಬಾತ ಇದೀಗ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಮಂಗಳೂರಿನ ಯೆಯ್ಯಾಡಿಯಲ್ಲಿ ನಡೆದಿದೆ. ಯೆಯ್ಯಾಡಿಯಲ್ಲಿ ಕೌಶಿಕ್ ಹಾಗೂ ಇತರರ ನಡುವೆ ಗಲಾಟೆಯಾಗಿತ್ತು. ಗಲಾಟೆಯ ಸಂದರ್ಭದಲ್ಲಿ ಬ್ರಿಜೇಶ್ ಶೆಟ್ಟಿ, ಗಣೇಶ್ ಬಿಜೈ ಎಂಬವರು ಚಾಕುವಿನಿಂದ ಕೌಶಿಕ್ ಹೊಟ್ಟೆಗೆ ಇರಿದಿದ್ದರು. ತೀವ್ರ ರಕ್ತಸ್ತ್ರಾವದಿಂದ ಗಾಯಗೊಂಡಿದ್ದಂತ ಕೌಶಿಕ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಚಿಕಿತ್ಸೆ ಫಲಿಸದೇ ಕೌಶಿಕ್ ಮೃತಪಟ್ಟಿದ್ದಾನೆ. ಇನ್ನು ಈ ದಾಳಿ

ಚೂರಿ ಇರಿತಕ್ಕೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ಮೃತ್ಯು Read More »

ಕರ್ನಾಟಕ

ಆಗುಂಬೆ ಘಾಟಿಯಲ್ಲಿ ಘನ ವಾಹನ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ಜೂ. 14. ಭಾರೀ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂ ಕುಸಿತ ಆಗುವ ಸಂಭವ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜೂನ್ 15 ರಿಂದ 30ರವರೆಗೆ ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ- ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದು, ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಿದ್ದಾರೆ. ಉಡುಪಿ-ತೀರ್ಥಹಳ್ಳಿಗೆ ಸಂಚರಿಸುವ ಭಾರೀ ವಾಹನಗಳು ಉಡುಪಿ-ಕುಂದಾಪುರ

ಆಗುಂಬೆ ಘಾಟಿಯಲ್ಲಿ ಘನ ವಾಹನ ಸಂಚಾರ ನಿಷೇಧ Read More »

ಕರ್ನಾಟಕ
crime, arrest, suspected

ಜೀವಂತ ತಾಯಿಯ ನಕಲಿ ಡೆತ್ ಸರ್ಟಿಫಿಕೇಟ್ ಪಡೆದ ಭೂಪ- ಅರೆಸ್ಟ್..!

(ನ್ಯೂಸ್ ಕಡಬ) newskadaba.com ಜೂ. 14. ತಾಯಿ ಜೀವಂತವಿರುವಾಗಲೇ ಪಾಪಿ ಪುತ್ರನೋರ್ವ ಆಸ್ತಿಗಾಗಿ ಸುಳ್ಳು ಅರ್ಜಿ ನೀಡಿ ತಾಯಿಯ ಡೆತ್ ಸರ್ಟಿಫಿಕೇಟ್ ಪಡೆದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ. ಜೊತೆಗೆ ಮರಣ ಪ್ರಮಾಣಪತ್ರ ನೀಡಿದ ಪುರಸಭೆ ಅಧಿಕಾರಿಗೂ ನೋಟಿಸ್‌ ನೀಡಲಾಗಿದೆ. ಬಂಧಿತ ಆರೋಪಿಯನ್ನು ಶೌಕತ್ ಅಲಿ ಎಂದು ಗುರುತಿಸಲಾಗಿದೆ. ಶೌಕತ್ ಅಲಿ ತಂದೆ ಅವರು 2001 ರಲ್ಲಿ ಮೃತಪಟ್ಟಿದ್ದು, ಪುತ್ರ ಹಾಗೂ ಆತನ ತಾಯಿ ಹೂರಾಂಬಿ ಜಂಗ್ಲಿ ಸಾಬ್ ಎಂಬವರ ಹೆಸರಿನಲ್ಲಿ 2

ಜೀವಂತ ತಾಯಿಯ ನಕಲಿ ಡೆತ್ ಸರ್ಟಿಫಿಕೇಟ್ ಪಡೆದ ಭೂಪ- ಅರೆಸ್ಟ್..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಂಟೇನರ್ ಲಾರಿಗೆ ಬೆಂಕಿ ತಗುಲಿ 10ಕ್ಕೂ ಅಧಿಕ ಫ್ರಿಡ್ಜ್ ಗಳಿಗೆ ಹಾನಿ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ರೆಫ್ರಿಜರೇಟರ್ ಸಾಗಿಸುತ್ತಿದ್ದ ಕಂಟೈನರ್ ಲಾರಿಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ ಘಟನೆ ಕಾಸರಗೋಡು – ಕಾಞಾಂಗಾಡ್ ರಾಜ್ಯ ಹೆದ್ದಾರಿಯ ಕೂವತ್ತೊಟ್ಟಿ ಎಂಬಲ್ಲಿ ನಡೆದಿದೆ. ಲಾರಿಯ ಮೇಲ್ಭಾಗಕ್ಕೆ ವಿದ್ಯುತ್ ತಂತಿ ತಗಲಿದ ಪರಿಣಾಮ ಬೆಂಕಿ ತಗಲಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಕಂಟೈನರ್ ನೊಳಗಿದ್ದ ಹತ್ತಕ್ಕೂ ಅಧಿಕ ರೆಫ್ರಿಜರೇಟರ್ ಭಾಗಶಃ ಹಾನಿಗೊಳಗಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾದರು.

ಕಂಟೇನರ್ ಲಾರಿಗೆ ಬೆಂಕಿ ತಗುಲಿ 10ಕ್ಕೂ ಅಧಿಕ ಫ್ರಿಡ್ಜ್ ಗಳಿಗೆ ಹಾನಿ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗುಜರಿ ಅಂಗಡಿಯಲ್ಲಿ ಅಗ್ನಿ ಅವಘಡ- ಅಪಾರ ಹಾನಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 14. ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಎರಡು ಅಂಗಡಿಗಳು ಹೊತ್ತಿ ಉರಿದ ಘಟನೆ ಹಂಪನಕಟ್ಟೆಯ ಯುನಿವರ್ಸಿಟಿ ಕಾಲೇಜ್ ಮುಂಭಾಗದಲ್ಲಿ ನಡೆದಿದೆ. ಗುಜಿರಿ ಅಂಗಡಿಯಲ್ಲಿ ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಅದರ ಪಕ್ಕದಲ್ಲಿರುವ ವಸ್ತ್ರ ಮಳಿಗೆಗೂ ಬೆಂಕಿ ಆವರಿಸಿಕೊಂಡಿದೆ. ಘಟನೆಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಬೆಂಕಿಯಿಂದಾಗಿ ಸೊತ್ತು ಹಾನಿಯಾಗಿದೆ. ಸ್ಥಳಕ್ಕೆ ಪಾಂಡೇಶ್ವರ ಅಗ್ನಿಶಾಮಕ ಹಾಗೂ ಬಂಟ್ವಾಳ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಬೆಂಕಿ ಆರಿಸುವಲ್ಲಿ ಹರಸಾಹಸ

ಗುಜರಿ ಅಂಗಡಿಯಲ್ಲಿ ಅಗ್ನಿ ಅವಘಡ- ಅಪಾರ ಹಾನಿ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top