ಡ್ರಗ್ಸ್ ಸೇವಿಸುವ ಕಲಾವಿದರು ಚಿತ್ರರಂಗದಿಂದ ಬ್ಯಾನ್

(ನ್ಯೂಸ್ ಕಡಬ) newsmadaba.com ಜೂ. 27. ಇತ್ತೀಚಿನ‌ ದಿನಗಳಲ್ಲಿ ಸಿನಿಮಾರಂಗದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿ ಕೇಳಿ ಬರುತ್ತಿದ್ದು, ಕಲಾವಿದರು, ನಿರ್ದೇಶಕರು ಕೂಡ ಡ್ರಗ್ಸ್‌ ಸೇವನೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.

ಈಗಾಗಲೇ ಮಾಲಿವುಡ್‌ ಚಿತ್ರರಂಗದಲ್ಲಿ ಖ್ಯಾತ ನಟ ಶೈನ್ ಟಾಮ್, ನಿರ್ದೇಶಕರಾದ ಖಾಲಿದ್ ರೆಹಮಾನ್, ಅಶ್ರಫ್ ಹಮ್ಜಾ ಅವರನ್ನು ಡ್ರಗ್ಸ್‌ ಸೇವನೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿತ್ತು. ಇದಲ್ಲದೇ ಇತ್ತೀಚೆಗೆ ಕಾಲಿವುಡ್‌ ಶ್ರೀಕಾಂತ್‌, ನಟ ಕೃಷ್ಣರನ್ನು ಡ್ರಗ್ಸ್‌ ಸೇವನೆ ಆರೋಪದಲ್ಲಿ ಬಂಧಿಸಲಾಗಿದೆ.

ಹೀಗಾಗಿ ಮಾಲಿವುಡ್‌ ಚಿತ್ರರಂಗ ಮಾದಕ ದ್ರವ್ಯ ಸೇವನೆ ಮಾಡುವ ಕಲಾವಿದರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಡ್ರಗ್ಸ್‌ ಸೇವಿಸುವ ಕಲಾವಿದರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅದೇ ರೀತಿಯ ನಿರ್ಧಾರವನ್ನು ಟಾಲಿವುಡ್‌ನಲ್ಲೂ ತೆಗೆದುಕೊಳ್ಳುವುದಾಗಿ ತೆಲಂಗಾಣ ಸಿನಿಮಾ ಅಭಿವೃದ್ಧಿ ಕಾರ್ಪೋರೇಷನ್ ಅಧ್ಯಕ್ಷ, ನಿರ್ಮಾಪಕ ದಿಲ್ ರಾಜು ಹೇಳಿದ್ದಾರೆ.

ಇತ್ತೀಚೆಗೆ ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನದ ಪ್ರಯುಕ್ತ ತೆಲಂಗಾಣ ಸರ್ಕಾರ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿತ್ತು. ಇದರಲ್ಲಿ ನೂರಾರು ಜನರು ಹಾಗೂ ಖ್ಯಾತ ಕಲಾವಿದರು ಕೂಡ ಭಾಗಿಯಾಗಿದ್ದರು.

Scroll to Top