ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಸಹಕಾರ ಡಿಪ್ಲೊಮಾ ಕೋರ್ಸ್ ಪ್ರವೇಶ: ಅರ್ಜಿ ಆಹ್ವಾನ – News Kadaba

ಸಹಕಾರ ಡಿಪ್ಲೊಮಾ ಕೋರ್ಸ್ ಪ್ರವೇಶ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 27. 2025ನೇ ಜುಲೈ 1 ರಿಂದ ಪ್ರಾರಂಭವಾಗುವ 6 ತಿಂಗಳ ಅವಧಿಯ ರೆಗ್ಯೂಲರ್ ಮತ್ತು ದೂರಶಿಕ್ಷಣ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ ಮೆಂಟ್ ಕೋರ್ಸ್‍ ಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಸಾಮಾನ್ಯ ಹಾಗೂ ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಂದ ಮತ್ತು ಎಲ್ಲಾ ವಿವಿಧ ಸಹಕಾರ ಸಂಘ/ಬ್ಯಾಂಕ್‍ ಗಳ ಉದ್ಯೋಗಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಲು ಕೊನೆಯ ದಿನ ಜುಲೈ 10. ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ, ಪ್ರವೇಶ ಪಡೆದ ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ ಮಾಸಿಕ ರೂ. 600 ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳಿಗೆ ರೂ.500 ಶಿಷ್ಯವೇತನ ನೀಡಲಾಗುವುದು. ಸಹಕಾರ ಡಿಪ್ಲೊಮಾ ಕೋರ್ಸ್ ಪಡೆದ ಅಭ್ಯರ್ಥಿಗಳಿಗೆ ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಮತ್ತು ಇತರೆ ಎಲ್ಲಾ ರೀತಿಯ ಸಹಕಾರ ಸಂಘ/ಸಂಸ್ಥೆಗಳು ಮತ್ತು ಬ್ಯಾಂಕ್‍ ಗಳ ಉದ್ಯೋಗ ಅವಕಾಶಗಳಲ್ಲಿನ ನೇಮಕಾತಿಗೆ ಸಹಕಾರ ಕಾಯಿದೆ ಮತ್ತು ನಿಯಮಗಳಿಗೆ ಅನುಸಾರವಾಗಿ ಆದ್ಯತೆ ಕಲ್ಪಿಸಲಾಗಿದೆ.

 

ಅಲ್ಲದೇ ಈ ಪಠ್ಯಕ್ರಮವು ಕೆ.ಎ.ಎಸ್ ಪರೀಕ್ಷೆಯ ಸಹಕಾರ ಮತ್ತು ಗ್ರಾಮೀಣ ಅಭಿವೃದ್ಧಿ ವಿಷಯ ಮತ್ತು ಸಹಕಾರ ಇಲಾಖೆಯ ಕೋ-ಆಪರೇಟಿವ್ ಇನ್‍ಸ್ಪೆಕ್ಟರ್ ಹುದ್ದೆ ಹಾಗೂ ಎಲ್ಲಾ ಸಹಕಾರ ಸಂಘ/ಸಂಸ್ಥೆಗಳ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಪೂರಕವಾಗಿದೆ.

 

ಸಹಕಾರ ಕಾಯ್ದೆ ನಿಯಮಗಳ ಅನ್ವಯ ಸಹಕಾರ ಸಂಘಗಳ ಅಧಿಕಾರಿ, ಸಿಬ್ಬಂದಿಗಳಿಗೆ ಡಿ.ಸಿ.ಎಂ. ಕೋರ್ಸ್ ಕಡ್ಡಾಯವಾಗಿದ್ದು ಸಹಕಾರ ಸಂಘ, ಸಂಸ್ಥೆಗಳಲ್ಲಿನ ಖಾಯಂ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ದೂರ ಶಿಕ್ಷಣ ಕೊರ್ಸ್‍ಗೆ ಪ್ರವೇಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08258-236561, ಮೊ:7022429440 ಸಂಪರ್ಕಿಸುವಂತೆ ಮೂಡಬಿದ್ರೆ ಕೆ.ಐ.ಸಿ.ಎಂ. ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

Scroll to Top