ಕ್ಯಾನ್ಸರ್‌ ತಡೆಗಟ್ಟಲು ಸಹಕಾರಿ ಈ ಜ್ಯೂಸ್

(ನ್ಯೂಸ್‌ ಕಡಬ) newskadaba.com, ಆ.05: ಗರಿಗೆ ಹುಲ್ಲು ದೇವರ ಪೂಜೆಗೆ ಮಾತ್ರವಲ್ಲಿ ಆರೋಗ್ಯಕ್ಕೂ ಪ್ರಯೋಜನಕಾರಿ. ಗರಿಕೆ ಹುಲ್ಲಿನ ರಸ, ಜ್ಯೂಸ್‌ ಅಥವಾ ಕಷಾಯ ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದು. ಆಯುರ್ವೇದದಲ್ಲಿ ಗರಿಕೆ ಹುಲ್ಲನ್ನು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಬಳಕೆ ಮಾಡಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಇದು ಜ್ವರದಂತಹ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದೆ. ಗರಿಕೆ ಹುಲ್ಲಿನ ರಸ ಅಥವಾ ಕಷಾಯವನ್ನು ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಸೇವನೆ ಮಾಡಿದರೆ […]

ಕ್ಯಾನ್ಸರ್‌ ತಡೆಗಟ್ಟಲು ಸಹಕಾರಿ ಈ ಜ್ಯೂಸ್ Read More »

ಆರೋಗ್ಯ ಮಾಹಿತಿ

ಆಯುಷ್ ಇಲಾಖೆ ಅಡಿಯಲ್ಲಿರುವ ಎಲ್ಲಾ ಔಷಧಿಗಳು FDA ವ್ಯಾಪ್ತಿಗೆ: ರಾಜ್ಯ ಸರ್ಕಾರ

(ನ್ಯೂಸ್‌ ಕಡಬ) newskadaba.com, ಆ.05: ಬೆಂಗಳೂರು: ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ವಿಭಾಗಗಳನ್ನು ಒಳಗೊಂಡಂತೆ ಆಯುಷ್ ಇಲಾಖೆಯ ಅಡಿಯಲ್ಲಿರುವ ಎಲ್ಲಾ ಔಷಧಿಗಳನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ದ ಔಷಧ ನಿಯಂತ್ರಣ ವಿಭಾಗದ ಅಡಿಯಲ್ಲಿ ತರಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಹೇಳಿದರು. ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಔಷಧಿಗಳ ಗುಣಮಟ್ಟವನ್ನು ಸುಧಾರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ಕಡಿಮೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಕೇವಲ ಎರಡು ದಿನಗಳಲ್ಲಿ

ಆಯುಷ್ ಇಲಾಖೆ ಅಡಿಯಲ್ಲಿರುವ ಎಲ್ಲಾ ಔಷಧಿಗಳು FDA ವ್ಯಾಪ್ತಿಗೆ: ರಾಜ್ಯ ಸರ್ಕಾರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂಗ್ಲೆಂಡ್‌ ಪ್ರವಾಸ ಅಂತ್ಯ: ಟೀಂ ಇಂಡಿಯಾಗೆ ಮುಂದಿನ ಪಂದ್ಯ ಯಾವಾಗ?

(ನ್ಯೂಸ್‌ ಕಡಬ) newskadaba.com, ಆ.05: ಭಾರತದ ತಂಡದ ಇಂಗ್ಲೆಂಡ್‌ ಪ್ರವಾಸ ಅಂತ್ಯಗೊಂಡಿದೆ. ಓವಲ್‌ ಮೈದಾನದಲ್ಲಿ ಕೊನೆಯ ದಿನದಂದು ನಡೆದ 5ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಜಯಗಳಿಸಿದೆ. ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ಬಳಿಕ ಭಾರತ ತಂಡ ಒಂದು ತಿಂಗಳು ವಿಶ್ರಾಂತಿ ಪಡೆಯಲಿದೆ. ಹಾಗಾಗಿ ಆಗಸ್ಟ್‌ನಲ್ಲಿ ಟೀಂ ಇಂಡಿಯಾಗೆ ಯಾವುದೇ ಪಂದ್ಯ ಇರುವುದಿಲ್ಲ. ಇನ್ನು ಭಾರತ ತಂಡವು 2025ರ ಏಷ್ಯಾ ಕಪ್‌ನಲ್ಲಿ ನೇರವಾಗಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದೆ. ಈ ಪಂದ್ಯ ಸೆ.9ರಿಂದ 28ರವರೆಗೆ ಟಿ20 ಸ್ವರೂಪದಲ್ಲಿ ಆಯೋಜಿಸಲಾಗಿದೆ. ಟೀಂ ಇಂಡಿಯಾ ಸೆ.10ರಂದು

ಇಂಗ್ಲೆಂಡ್‌ ಪ್ರವಾಸ ಅಂತ್ಯ: ಟೀಂ ಇಂಡಿಯಾಗೆ ಮುಂದಿನ ಪಂದ್ಯ ಯಾವಾಗ? Read More »

ಕ್ರೀಡಾ ನ್ಯೂಸ್

ಸ್ಯಾಂಡಲ್‌ವುಡ್‌ನ ಯುವ ನಟ ಸಂತೋಷ್ ಬಾಲರಾಜ್ ನಿಧನ

(ನ್ಯೂಸ್‌ ಕಡಬ) newskadaba.com, ಆ.05: ಸ್ಯಾಂಡಲ್‌ವುಡ್‌ನ ಯುವ ನಟನ ಸಂತೋಷ್ ಬಾಲರಾಜ್ (34) ನಿಧನ ಹೊಂದಿದ್ದಾರೆ. ಇಂದು ಬೆಳಗ್ಗೆ 9.30ರ ಸುಮಾರಿಗೆ ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ ಕಳೆದ ತಿಂಗಳು ಜಾಂಡೀಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮತ್ತೆ ಸಂತೋಷ್ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿದ್ದರು. ಜಾಂಡೀಸ್‌ನಿಂದ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತೋಷ್ ಅವರು ಆ.

ಸ್ಯಾಂಡಲ್‌ವುಡ್‌ನ ಯುವ ನಟ ಸಂತೋಷ್ ಬಾಲರಾಜ್ ನಿಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ಮೈಸೂರು ದಸರಾ: ಗಜಪಯಣಕ್ಕೆ ಚಾಲನೆ

(ನ್ಯೂಸ್‌ ಕಡಬ) newskadaba.com, ಆ.05: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದೆ. ನಾಗರಹೊಳೆ ಹೆಬ್ಬಾಗಿಲು ವೀರನ ಹೊಸಹಳ್ಳಿಯಲ್ಲಿ ದಸರಾ ಗಜಪಯಣಕ್ಕೆ ಚಾಲನೆ ದೊರೆತಿದೆ. ಗಜಪಡೆಯ ಮೊದಲ ಹಂತದ 9 ಆನೆಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಪೂಜೆ ಸಲ್ಲಿಸಿದ್ದಾರೆ. ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಮೊದಲ ತಂಡದ ಆನೆಗಳಿಗೆ ಪೂಜೆ ಸಲ್ಲಿಸಿ ಮೈಸೂರಿಗೆ ಬೀಳ್ಕೊಡಲಾಗಿದೆ. ಈ ಮೂಲಕ ಸಾಂಸ್ಕೃತಿಕ ನಗರಿಯಲ್ಲಿ ದಸರಾ ವೈಭವ ಆರಂಭವಾಗಿದೆ. ಈ ಬಾರಿಯ ದಸರೆಯಲ್ಲಿ ಒಟ್ಟು 14 ಆನೆಗಳು

ಮೈಸೂರು ದಸರಾ: ಗಜಪಯಣಕ್ಕೆ ಚಾಲನೆ Read More »

ಕರ್ನಾಟಕ

ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ರಚನೆ: ಅಧ್ಯಕ್ಷರಾಗಿ ಅಝೀಝ್ ಬಿ.ಕೆ ಮರು ಆಯ್ಕೆ

(ನ್ಯೂಸ್‌ ಕಡಬ) newskadaba.com, ಆ.05: ಉಪ್ಪಿನಂಗಡಿ: ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮ ಪಂಚಾಯತಿಗೆ ಒಳಪಟ್ಟ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿನ ಮುಂದಿನ ಮೂರು ವರ್ಷಗಳ ಅವಧಿಗೆ ಶಾಲಾಭಿವೃಧ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆಯು ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.  ಅಧ್ಯಕ್ಷರಾಗಿ ಎರಡನೇ ಬಾರಿಗೆ ಅವಿರೋಧವಾಗಿ ಶ್ರೀಯುತ ಅಝೀಝ್ ಬಿ.ಕೆ ಮರು ಆಯ್ಕೆಯಾದರು. ಉಪಾಧ್ಯಕ್ಷೆಯಾಗಿ ಶ್ರೀಮತಿ ಅಸ್ಮಾ ಮೊದಲ ಬಾರಿಗೆ ಆಯ್ಕೆಯಾದರು. ಪದಾಧಿಕಾರಿಗಳಾಗಿ ವಾಮನ ಬರಮೇಲು, ಪದ್ಮನಾಭ ಶೆಟ್ಟಿ

ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ರಚನೆ: ಅಧ್ಯಕ್ಷರಾಗಿ ಅಝೀಝ್ ಬಿ.ಕೆ ಮರು ಆಯ್ಕೆ Read More »

ಕರಾವಳಿ

ಇಂದು ಬೆಂಗಳೂರು, ಮಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ!

(ನ್ಯೂಸ್‌ ಕಡಬ) newskadaba.com, ಆ.05: ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಭಾನುವಾರ ರಾತ್ರಿ ಭರ್ಜರಿ ಮಳೆಯಾಗಿದೆ. ಅದೇ ರೀತಿ ರಾಜ್ಯದಲ್ಲಿ ಮುಂದಿನ ಮೂರು ವರುಣ ಅಬ್ಬರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿಗೆ ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ ನೀಡಿದ್ದು, ಉತ್ತರ ಒಳನಾಡಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳು ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ

ಇಂದು ಬೆಂಗಳೂರು, ಮಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ! Read More »

ಕರಾವಳಿ, ಕರ್ನಾಟಕ

ಸರ್ಕಾರದ ವಿರುದ್ಧ ಸಾರಿಗೆ ನೌಕರರ ಮುಷ್ಕರ – ಹಲವು ಕಡೆ ಬಸ್‌ ಬಂದ್‌

(ನ್ಯೂಸ್‌ ಕಡಬ) newskadaba.com, ಆ.05: ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಗಸ್ಟ್ 5 ರಿಂದ (ಇಂದಿನಿಂದ) ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಬೇಡಿಕೆ ಇಡಲಾಗಿದೆ. 1800 ಕೋಟಿ ಹಿಂಬಾಕಿ, ಕೋಟ್ಯಾಂತರ ರುಪಾಯಿ ಪಿಎಫ್ ಬಾಕಿ,ವೇತನ ಹೆಚ್ಚಳ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಆದರೆ ಹಿಂಬಾಕಿ ಕೊಡಲು ಸರ್ಕಾರ ಒಪ್ಪದಿದ್ದ ಕಾರಣ, ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ. ವೇತನ ಹಿಂಬಾಕಿ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಸರ್ಕಾರದ

ಸರ್ಕಾರದ ವಿರುದ್ಧ ಸಾರಿಗೆ ನೌಕರರ ಮುಷ್ಕರ – ಹಲವು ಕಡೆ ಬಸ್‌ ಬಂದ್‌ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

Karnataka Rains: 29 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

(ನ್ಯೂಸ್‌ ಕಡಬ) newskadaba.com, ಆ.05: ಕರ್ನಾಟಕದ 29 ಜಿಲ್ಲೆಗಳಲ್ಲಿ ಒಂದು ವಾರ ಭಾರೀ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆ ಧಾರವಾಡ, ಶಿವಮೊಗ್ಗ, ರಾಯಚೂರು, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕಲಬುರ್ಗಿ, ಯಾದಗಿರಿ, ಬೀದರ್‌, ಕೊಪ್ಪಳ, ಹಾವೇರಿ, ವಿಜಯಪುರ, ಗದಗ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಉಳಿದಂತೆ ತುಮಕೂರು, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ, ಚಿಕ್ಕಮಗಳೂರು, ಕೋಲಾರ, ಹಾಸನ, ಕೋಲಾರ, ಕೊಡಗು

Karnataka Rains: 29 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ Read More »

ಕರ್ನಾಟಕ

ಪ್ರತಿಭಟನಾ ರ‍್ಯಾಲಿ ಆ.8ಕ್ಕೆ ಮುಂದೂಡಿಕೆ: ಡಿಕೆಶಿ

(ನ್ಯೂಸ್‌ ಕಡಬ) newskadaba.com, ಆ.04: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿಗದಿಯಾಗಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಪ್ರತಿಭಟನಾ ರ‍್ಯಾಲಿ ಆ.8ಕ್ಕೆ ಮುಂದೂಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ದ ಮತಗಳ್ಳತನದ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ಆ.8ರಂದು ಪ್ರತಿಭಟನೆ ನಡೆಸಲು ನಿಗದಿ ಮಾಡಲಾಗಿತ್ತು. ಆದರೆ, ಇದೇ ಸಮಯದಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹಾಗಾಗಿ ಪ್ರತಿಭಟನಾ

ಪ್ರತಿಭಟನಾ ರ‍್ಯಾಲಿ ಆ.8ಕ್ಕೆ ಮುಂದೂಡಿಕೆ: ಡಿಕೆಶಿ Read More »

ಕರ್ನಾಟಕ
Scroll to Top