ಕದನ ವಿರಾಮ ಉಲ್ಲಂಘಿಸಿದ ಪಾಕ್ ► ನಾಲ್ವರು ಯೋಧರು ಹುತಾತ್ಮ

(ನ್ಯೂಸ್ ಕಡಬ) newskadaba.com ಜಮ್ಮು-ಕಾಶ್ಮೀರ, ಜೂ.14. ಗಡಿಯಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮವನ್ನು ಉಲ್ಲಂಘಿಸಿದ್ದು, ಪಾಕ್‌ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಸಾಂಬಾ ಜಿಲ್ಲೆಯ ಅಂತರ್ರಾಷ್ಟ್ರೀಯ ಗಡಿಯಲ್ಲಿ ಬುಧವಾರದಂದು ಪಾಕ್‌ ಸೈನಿಕರು ಭಾರತೀಯ ಯೋಧರತ್ತ ಗುಂಡಿನ ದಾಳಿ ನಡೆಸಿದ್ದು, ಗಡಿ ಭದ್ರತಾ ಪಡೆಯ ಯೋಧರು ಗುಂಡಿನ ಮೂಲಕ ಪಾಕ್‌ಗೆ ಪ್ರತ್ಯುತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಬಿಎಸ್‌ಎಫ್‌ನ ಸಹಾಯಕ ಕಮಾಂಡೆಂಟ್‌ ಜತೀಂದರ್ ಸಿಂಗ್, ಸಬ್‌‌ ಇನ್ಸ್‌ಪೆಕ್ಟರ್‌ ರಜನೀಶ್, ಎಎಸ್ಐ […]

ಕದನ ವಿರಾಮ ಉಲ್ಲಂಘಿಸಿದ ಪಾಕ್ ► ನಾಲ್ವರು ಯೋಧರು ಹುತಾತ್ಮ Read More »

ರಾಷ್ಟ್ರೀಯ ನ್ಯೂಸ್

ಹಿಂದೂ ಯುವತಿಯನ್ನು ಯಾಮಾರಿಸಿ ಮದುವೆಯಾದ ಸುಳ್ಯದ ಮುಸ್ಲಿಂ ಯುವಕ ► ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಯುವತಿಯ ಕಡೆಯವರು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.13. ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯನ್ನು ಮೋಸದ ಬಲೆಗೆ ಕೆಡವಿ ವಿವಾಹವಾಗಿದ್ದುದನ್ನು ಅರಿತ ಯುವತಿ ಹಾಗೂ ಸಂಬಂಧಿಕರು ಯುವಕನನ್ನು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರದಂದು ತೊಕ್ಕೊಟ್ಟು ಸಮೀಪದ ಕುಂಪಲದಲ್ಲಿ ನಡೆದಿದೆ. ಆರೋಪಿ ಯುವಕನನ್ನು ಸುಳ್ಯ ತಾಲೂಕಿನ ಗೂನಡ್ಕ ನಿವಾಸಿ ನಝೀರ್ ಎಂಬವರ ಪುತ್ರ ಸಯ್ಯದ್ ಹಾರೂನ್ ರಶೀದ್ ಎಂದು ಗುರುತಿಸಲಾಗಿದೆ. ಮಂಗಳೂರಿನ ಜಿಯೋ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಈತ ತನ್ನ ಹೆಸರನ್ನು ಅರುಣ್ ಪೂಜಾರಿ ಎಂದು ಪರಿಚಯಿಸಿಕೊಂಡು ತೊಕ್ಕೊಟ್ಟು ಸಮೀಪದ ಕುಂಪಲದ

ಹಿಂದೂ ಯುವತಿಯನ್ನು ಯಾಮಾರಿಸಿ ಮದುವೆಯಾದ ಸುಳ್ಯದ ಮುಸ್ಲಿಂ ಯುವಕ ► ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಯುವತಿಯ ಕಡೆಯವರು Read More »

ಕರಾವಳಿ

ಜಯನಗರ ಚುನಾವಣೆಯಲ್ಲಿ ಜಯದ‌ ನಗೆ ಬೀರಿದ ಕಾಂಗ್ರೆಸ್ ► ಮಾಜಿ ಗೃಹ ಸಚಿವರ ಪುತ್ರಿ ಸೌಮ್ಯ ರೆಡ್ಡಿಯ ‘ಕೈ’ ಹಿಡಿದ ಮತದಾರರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.13. ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯದ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಕೈ ಹಿಡಿದಿರುವ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ನ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ಬಿಜೆಪಿಯ ಪ್ರಹ್ಲಾದ್ ಬಾಬು ವಿರುದ್ಧ ಎರಡು ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಠೇವಣಿ

ಜಯನಗರ ಚುನಾವಣೆಯಲ್ಲಿ ಜಯದ‌ ನಗೆ ಬೀರಿದ ಕಾಂಗ್ರೆಸ್ ► ಮಾಜಿ ಗೃಹ ಸಚಿವರ ಪುತ್ರಿ ಸೌಮ್ಯ ರೆಡ್ಡಿಯ ‘ಕೈ’ ಹಿಡಿದ ಮತದಾರರು Read More »

ಕರಾವಳಿ

ಗ್ರಾ.ಪಂ. ಪಿಡಿಓ ನೇಣುಬಿಗಿದು ಆತ್ಮಹತ್ಯೆ ► ಪಂಚಾಯತ್ ನ ಶೌಚಾಲಯದಲ್ಲಿ ಕೃತ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.13. ಗ್ರಾ.ಪಂ.ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನ ಬುಧವಾರದಂದು ನಡೆದಿದೆ. ದ.ಕ.ಜಿಲ್ಲೆಯ ಮುನ್ನೂರು ಗ್ರಾಮ ಪಂಚಾಯತ್ ಪಿಡಿಓ ಕೃಷ್ಣ ಸ್ವಾಮಿ (47) ಆತ್ಮಹತ್ಯೆ ಮಾಡಿಕೊಂಡವರು. ಇವರು ಡೆತ್ ನೋಟ್ ಬರೆದಿಟ್ಟು ಪಂಚಾಯತ್ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾ.ಪಂ. ಪಿಡಿಓ ನೇಣುಬಿಗಿದು ಆತ್ಮಹತ್ಯೆ ► ಪಂಚಾಯತ್ ನ ಶೌಚಾಲಯದಲ್ಲಿ ಕೃತ್ಯ Read More »

ಕರಾವಳಿ

ಮಕ್ಕಳ ಹೆತ್ತವರಿಗೊಂದು ಶುಭ ಸುದ್ದಿ ► ಇನ್ಮುಂದೆ ಆಯ್ದ ಸರಕಾರಿ ಶಾಲೆಗಳಲ್ಲಿ ಎಲ್ ಕೆಜಿ ಆರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.13. ರಾಜ್ಯದ ಕೆಲವು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ ಕೆಜಿ ತರಗತಿಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆಯು ನಿರ್ಧರಿಸಿದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ. ಸರಕಾರಿ ಶಾಲೆಗಳಲ್ಲಿ ಎಲ್ ಕೆಜಿ ತರಗತಿಗಳ ಅಗತ್ಯವಿದೆ ಎಂದು ಪೋಷಕರ ಬೇಡಿಕೆಯಂತೆ ಸರಕಾರವು ಎಚ್ಚೆತ್ತಿದ್ದು, ಪ್ರಸಕ್ತ ಸಾಲಿನಿಂದಲೇ ರಾಜ್ಯದ 13 ಜಿಲ್ಲೆಗಳ ಸುಮಾರು 100 ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಆರಂಭವಾಗಲಿವೆ. ಎಲ್ ಕೆಜಿ ತರಗತಿಗೆ ನೂತನ ಪಠ್ಯ ಕ್ರಮವನ್ನು

ಮಕ್ಕಳ ಹೆತ್ತವರಿಗೊಂದು ಶುಭ ಸುದ್ದಿ ► ಇನ್ಮುಂದೆ ಆಯ್ದ ಸರಕಾರಿ ಶಾಲೆಗಳಲ್ಲಿ ಎಲ್ ಕೆಜಿ ಆರಂಭ Read More »

ಕರಾವಳಿ

ಬಲ್ಯ: ನಾಪತ್ತೆಯಾಗಿದ್ದ ಯುವತಿಯನ್ನು ಪತ್ತೆಹಚ್ಚಿದ ಪೊಲೀಸರು

ಕಡಬ, ಜೂ.12. ಕೆಲಸಕ್ಕೆಂದು ತೆರಳಿ ನಾಪತ್ತೆಯಾದ್ದ ಯುವತಿಯನ್ನು ಕಡಬ ಪೊಲೀಸರು ಮಂಗಳವಾರದಂದು ಪತ್ತೆಹಚ್ಚಿ ಕರೆದುಕೊಂಡು ಬಂದಿದ್ದಾರೆ. ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಬಲ್ಯ ಗ್ರಾಮದ ದೇರಾಜೆ ಪನ್ಯಾಡಿ ನಿವಾಸಿ ದಿ.ಗುರುವ ಎಂಬವರ ಪುತ್ರಿ ಕು|ಸುಂದರಿ(30)‌ ಎಂಬಾಕೆ ಕಳೆದ ಸುಮಾರು ಒಂದು ತಿಂಗಳ ಹಿಂದೆ ಕೆಲಸಕ್ಕೆಂದು ತೆರಳಿದ್ದು, ಆ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಈಕೆಯ ತಾಯಿ ಚೋಮು ಕಡಬ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಕಡಬ ಪೊಲೀಸರು ಪೊಳಲಿ ಕೈಕಂಬ ಸಮೀಪದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ

ಬಲ್ಯ: ನಾಪತ್ತೆಯಾಗಿದ್ದ ಯುವತಿಯನ್ನು ಪತ್ತೆಹಚ್ಚಿದ ಪೊಲೀಸರು Read More »

ಕರಾವಳಿ

ನಂತೂರು: ಟೆಂಪೋ – ಡಿಯೋ ಢಿಕ್ಕಿ ► ಪತಿ – ಪತ್ನಿ ಇಬ್ಬರೂ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.12. ಟೆಂಪೋ ಮತ್ತು ಹೋಂಡಾ ಡಿಯೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದಂಪತಿ ಮೃತಪಟ್ಟ ದಾರುಣ ಘಟನೆ ನಗರದ ನಂತೂರು ಸರ್ಕಲ್ ನಲ್ಲಿ ಮಂಗಳವಾರ ಸಂಜೆ‌ ನಡೆದಿದೆ. ಮೃತ ದುರ್ದೈವಿಗಳನ್ನು ಉಡುಪಿ ಜಿಲ್ಲೆಯ ಕಾಪು ನಿವಾಸಿ ಮೊಹಮ್ಮದ್ ಸಮೀರ್ (30) ಹಾಗೂ ಅವರ ಪತ್ನಿ ಬೆಳ್ತಂಗಡಿಯ ಸಮ್ರೀನ್(26) ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ಸಂಜೆ ತಮ್ಮ ದ್ವಿಚಕ್ರ ವಾಹನದಲ್ಲಿ ಕಾಪುವಿನಿಂದ ಬೆಳ್ತಂಗಡಿಗೆ ತೆರಳುತ್ತಿದ್ದಾಗ ನಂತೂರ್ ಸರ್ಕಲ್ ಬಳಿ ಗೂಡ್ಸ್ ಟೆಂಪೋವೊಂದು ಇವರಿದ್ದ

ನಂತೂರು: ಟೆಂಪೋ – ಡಿಯೋ ಢಿಕ್ಕಿ ► ಪತಿ – ಪತ್ನಿ ಇಬ್ಬರೂ ಮೃತ್ಯು Read More »

ಕರಾವಳಿ

ಚಾರ್ಮಾಡಿ ಘಾಟ್ ನಲ್ಲಿ ಮಣ್ಣು ಕುಸಿತ ಪರಿಣಾಮ ► ಎರಡು ದಿನಗಳ ಕಾಲ ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.12. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯ ಅಲ್ಲಲ್ಲಿ ಮಣ್ಣು ಕುಸಿದು ಬೀಳುತ್ತಿರುವುದರಿಂದ ಎರಡು ದಿನಗಳ ಕಾಲ ಸಂಚಾರ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ. ಚಾರ್ಮಾಡಿ ಘಾಟ್ ನ 11 ನೇ ಕ್ರಾಸ್ ನಲ್ಲಿ ಉಂಟಾದ ಭೂಕುಸಿತದಿಂದಾಗಿ ರಸ್ತೆಯು ಸಂಪೂರ್ಣ ಬಂದಾಗಿರುವುದರಿಂದ ಮಣ್ಣನ್ನು ತೆರವುಗೊಳಿಸಲು ಕಾಲಾವಕಾಶ ಬೇಕಾಗಿರುವುದರಿಂದ ಗುರುವಾರದವರೆಗೆ ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಹಾಗೂ

ಚಾರ್ಮಾಡಿ ಘಾಟ್ ನಲ್ಲಿ ಮಣ್ಣು ಕುಸಿತ ಪರಿಣಾಮ ► ಎರಡು ದಿನಗಳ ಕಾಲ ಸಂಚಾರ ನಿಷೇಧ Read More »

ಕರಾವಳಿ

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಪ್ರಯಾಣಿಕರ ಪರದಾಟ

ಕಡಬ, ಜೂ.12. ಕಳೆದ ಕೆಲವು ದಿನಗಳಿಂದ ಘಟ್ಟ ಪ್ರದೇಶ ಹಾಗೂ ಸ್ಥಳೀಯವಾಗಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಅಡ್ಡಲಾಗಿರುವ ಗುಂಡ್ಯ ಹೊಳೆಯ ಹೊಸಮಠ ಮುಳುಗು ಸೇತುವೆಯು ಮಂಗಳವಾರದಂದು ಮತ್ತೆ ಮುಳುಗಿದೆ. ಸೋಮವಾರದಂದು ಬೆಳಗ್ಗೆ ನೆರೆ ನೀರಿನಿಂದ ಮುಳುಗಡೆಗೊಂಡು ರಾತ್ರಿಯವರೆಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಸುಬ್ರಹ್ಮಣ್ಯ, ಕಡಬದಿಂದ ಉಪ್ಪಿನಂಗಡಿ ಪರಿಸರಕ್ಕೆ ತೆರಳುವವರು ಇಚ್ಲಂಪಾಡಿ -ನೆಲ್ಯಾಡಿ ಮೂಲಕ ಸುತ್ತು ಬಳಸಿ ಸಂಚರಿಸುವಂತಾಗಿದೆ. ಮುಳುಗಡೆಗೊಂಡ ಸೇತುವೆಯ ಪಕ್ಕದಲ್ಲಿ ನಿರ್ಮಾಣವಾದ ನೂತನ ಸೇತುವೆಯ ಸಂಪರ್ಕ

ಮತ್ತೆ ಮುಳುಗಿದ ಹೊಸ್ಮಠ ಸೇತುವೆ ► ಪ್ರಯಾಣಿಕರ ಪರದಾಟ Read More »

ಕರಾವಳಿ

ಧರ್ಮಸ್ಥಳ: ರಸ್ತೆಗೆ ಉರುಳಿದ ಕೆಎಸ್ಸಾರ್ಟಿಸಿ ಬಸ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.12. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ  ಕೆಎಸ್ಸಾರ್ಟಿಸಿ ಬಸ್ಸೊಂದು ರಸ್ತೆಗೆ ಉರುಳಿದ ಘಟನೆ ಧರ್ಮಸ್ಥಳದಲ್ಲಿ ಸೋಮವಾರ ನಡೆದಿದೆ. ಬೆಳಗಿನ ಜಾವ ಧರ್ಮಸ್ಥಳ- ಕಡೂರು ರಸ್ತೆಯಾಗಿ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಮಡ್ಯೋಳ ಚೆಡವು ಎಂಬಲ್ಲಿಗೆ ತಲುಪುತ್ತಿದ್ದಂತೆ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿರುವುದರಿಂದ ಬಸ್‌ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಮಗುಚಿ ಬಿದ್ದದೆ. ಘಟನೆಯಲ್ಲಿ ಪ್ರಯಾಣಿಕ ಕೃಷ್ಣಪ್ಪ ಪೂಜಾರಿ (38)ಎಂಬುವವರು ಗಂಭೀರ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಫತ್ರೆಗೆ ದಾಖಲಿಸಲಾಗಿದೆ. ಬಸ್‌ ಚಾಲಕ

ಧರ್ಮಸ್ಥಳ: ರಸ್ತೆಗೆ ಉರುಳಿದ ಕೆಎಸ್ಸಾರ್ಟಿಸಿ ಬಸ್ Read More »

ಕರಾವಳಿ
Scroll to Top