ಧರ್ಮಸ್ಥಳ: ರಸ್ತೆಗೆ ಉರುಳಿದ ಕೆಎಸ್ಸಾರ್ಟಿಸಿ ಬಸ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.12. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ  ಕೆಎಸ್ಸಾರ್ಟಿಸಿ ಬಸ್ಸೊಂದು ರಸ್ತೆಗೆ ಉರುಳಿದ ಘಟನೆ ಧರ್ಮಸ್ಥಳದಲ್ಲಿ ಸೋಮವಾರ ನಡೆದಿದೆ.
ಬೆಳಗಿನ ಜಾವ ಧರ್ಮಸ್ಥಳ- ಕಡೂರು ರಸ್ತೆಯಾಗಿ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಮಡ್ಯೋಳ ಚೆಡವು ಎಂಬಲ್ಲಿಗೆ ತಲುಪುತ್ತಿದ್ದಂತೆ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿರುವುದರಿಂದ ಬಸ್‌ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಮಗುಚಿ ಬಿದ್ದದೆ.

ಘಟನೆಯಲ್ಲಿ ಪ್ರಯಾಣಿಕ ಕೃಷ್ಣಪ್ಪ ಪೂಜಾರಿ (38)ಎಂಬುವವರು ಗಂಭೀರ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಫತ್ರೆಗೆ ದಾಖಲಿಸಲಾಗಿದೆ.
ಬಸ್‌ ಚಾಲಕ , ನಿರ್ವಾಹಕ ಸೆೇರಿದಂತೆ ಹಲವರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಸಂಚಾರ ಠಾಣಾ ಪೋಲಿಸರು ಪ್ರಕರಣ ದಾಖಲಿಸಿ ಕೊಂಡ್ಡಿದ್ದರೆ.

Scroll to Top