ಗ್ರಾ.ಪಂ. ಪಿಡಿಓ ನೇಣುಬಿಗಿದು ಆತ್ಮಹತ್ಯೆ ► ಪಂಚಾಯತ್ ನ ಶೌಚಾಲಯದಲ್ಲಿ ಕೃತ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.13. ಗ್ರಾ.ಪಂ.ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನ ಬುಧವಾರದಂದು ನಡೆದಿದೆ.

ದ.ಕ.ಜಿಲ್ಲೆಯ ಮುನ್ನೂರು ಗ್ರಾಮ ಪಂಚಾಯತ್ ಪಿಡಿಓ ಕೃಷ್ಣ ಸ್ವಾಮಿ (47) ಆತ್ಮಹತ್ಯೆ ಮಾಡಿಕೊಂಡವರು. ಇವರು ಡೆತ್ ನೋಟ್ ಬರೆದಿಟ್ಟು ಪಂಚಾಯತ್ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll to Top