ಬಂಟ್ವಾಳ: ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ➤ ತನಿಖೆಯಲ್ಲಿ ಬಯಲಾಯ್ತು ಆಘಾತಕಾರಿ ವಿಚಾರ ➤ ಅಕ್ಕನ ಗಂಡನಿಂದಲೂ ನಡೆಯಿತು ಬಲಾತ್ಕಾರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.06. ತಂದೆಯೇ ತನ್ನ 17 ವರ್ಷ ಪ್ರಾಯದ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಯುವತಿಯೋರ್ವಳನ್ನು ಆಕೆಯ ಅಕ್ಕನ ಗಂಡ ಅತ್ಯಾಚಾರ ಎಸಗಿದ ಬಗ್ಗೆ ಪೊಲೀಸ್ ದೂರು ದಾಖಲಾದ ಹಿನ್ನೆಲೆಯಲ್ಲಿ ಚೈಲ್ಡ್ ಹೆಲ್ಪ್ ಲೈನ್ ನವರು ಸಂತ್ರಸ್ತೆ ಯುವತಿಯನ್ನು ವಿಚಾರಣೆ ನಡೆಸಿದಾಗ ತನ್ನ ತಂದೆಯೂ ನಿರಂತರ ಅತ್ಯಾಚಾರ ಎಸಗುತ್ತಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಾಲ್ಕು ಮದುವೆಯಾಗಿರುವ ಆರೋಪಿ ದಾವೂದ್ ತನ್ನ […]

ಬಂಟ್ವಾಳ: ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ ➤ ತನಿಖೆಯಲ್ಲಿ ಬಯಲಾಯ್ತು ಆಘಾತಕಾರಿ ವಿಚಾರ ➤ ಅಕ್ಕನ ಗಂಡನಿಂದಲೂ ನಡೆಯಿತು ಬಲಾತ್ಕಾರ Read More »

ಕರಾವಳಿ

ಐತ್ತೂರು: ಭಾರೀ ಗಾಳಿ ಮಳೆಗೆ ದೂರಕ್ಕೆ ಹಾರಿದ ಮನೆಯ ಮೇಲ್ಛಾವಣಿ ➤ ವಿದ್ಯುತ್ ತಂತಿಯ ಮೇಲೆ ಮರಗಳು ಉರುಳಿದ್ದರಿಂದ‌ ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಎ.06. ಪರಿಸರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಹಲವು ಮನೆಗಳಿಗೆ, ಅಪಾರ ಕೃಷಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಪುಟ್ಟಣ್ಣ ಗೌಡ ಎಂಬವರ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಅಪಾರ ನಷ್ಟ ಅಂದಾಜಿಸಲಾಗಿದೆ. ಇನ್ನುಳಿದಂತೆ ಕಲ್ಲಾಜೆ ಪರಿಸರದಲ್ಲಿ ಹಲವಾರು ಮರಗಳು ಧರೆಗೆ ಉರುಳಿದ್ದರಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ವ್ಯತ್ಯಯ

ಐತ್ತೂರು: ಭಾರೀ ಗಾಳಿ ಮಳೆಗೆ ದೂರಕ್ಕೆ ಹಾರಿದ ಮನೆಯ ಮೇಲ್ಛಾವಣಿ ➤ ವಿದ್ಯುತ್ ತಂತಿಯ ಮೇಲೆ ಮರಗಳು ಉರುಳಿದ್ದರಿಂದ‌ ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಕಡಬ: ಕೇವಳದಲ್ಲಿ ಗಾಳಿ ಮಳೆಗೆ ಮುರಿದು ಬಿದ್ದ ಮರ ➤ ಮನೆ, ಆಟೋ ರಿಕ್ಷಾ ಬೈಕ್ ಜಖಂ

(ನ್ಯೂಸ್ ಕಡಬ) newskadaba.com ಕಡಬ, ಎ.06. ಇಲ್ಲಿನ ಕೇವಳ ಎಂಬಲ್ಲಿ ಮನೆಯೊಂದಕ್ಕೆ ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿ ಹಾಗೂ ಅಟೋ ರಿಕ್ಷಾ, ಬೈಕ್ ಜಖಂಗೊಂಡ ಘಟನೆ ಶುಕ್ರವಾರ ರಾತ್ರಿ ವೇಳೆ ನಡೆದಿದೆ. ಕೇವಳ ನಿವಾಸಿ ವಿಶ್ವನಾಥ ಗೌಡರ ಮನೆಯ ಸಮೀಪ ಇರುವ ಮಾವಿನ ಮರದ ಬೃಹತ್ ಗೆಲ್ಲು ಮುರಿದು ಬಿದ್ದು ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಅಲ್ಲದೆ ಮನೆಯ ವರಾಂಡದಲ್ಲಿ ನಿಲ್ಲಿಸಲಾಗಿದ್ದ ಅಟೋ ರಿಕ್ಷಾ ಹಾಗೂ ಬೈಕ್ ಸಂಪೂರ್ಣ ಜಖಂಗೊಂಡಿದೆ. ಈ ಸಂದರ್ಭದಲ್ಲಿ ಮನೆಯವರು ಮನೆಯೊಳಗೆ

ಕಡಬ: ಕೇವಳದಲ್ಲಿ ಗಾಳಿ ಮಳೆಗೆ ಮುರಿದು ಬಿದ್ದ ಮರ ➤ ಮನೆ, ಆಟೋ ರಿಕ್ಷಾ ಬೈಕ್ ಜಖಂ Read More »

ಕರಾವಳಿ

ಕೃಷಿ ಯಂತ್ರೋಪಕರಣಗಳ ರಿಪೇರಿ ಕೇಂದ್ರ ಕಿಸಾನ್ ಆಗ್ರೋ ಟೂಲ್ಸ್ ➤ ನೂತನ ತಂತ್ರಜ್ಞಾನದೊಂದಿಗೆ ಮರ್ಧಾಳದಲ್ಲಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಎ.06. ಕೃಷಿ ಕ್ಷೇತ್ರದಲ್ಲಿ ದಿನೇ ದಿನೇ ಕೂಲಿ ಕಾರ್ಮಿಕರ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಇದೀಗ ಕೃಷಿ ಸಂಬಂಧಿತ ಯಂತ್ರೋಪಕರಣಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ‘ಕಿಸಾನ್ ಆಗ್ರೋ ಟೂಲ್ಸ್’ ಕೃಷಿ ಯಂತ್ರೋಪಕರಣಗಳ ನೂತನ ಮಳಿಗೆಯು ಮರ್ಧಾಳದಲ್ಲಿ ಶುಭಾರಂಭಗೊಂಡಿದೆ. ಮರ್ಧಾಳದ ಮುಖ್ಯ ರಸ್ತೆಯ ಎಂ.ಎಚ್.ಕೆ. ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಆರಂಭಗೊಂಡಿರುವ ಕೃಷಿ ಯಂತ್ರೋಪಕರಣ ಮಳಿಗೆಯಲ್ಲಿ ಕೃಷಿ ಸಂಬಂಧಿತ ಕಳೆಕೊಚ್ಚುವ, ಮರ ಕತ್ತರಿಸುವ,ತೋಟಕ್ಕೆ ಮದ್ದು ಸಿಂಪಡಿಸುವ ಯಂತ್ರಗಳನ್ನು ಹಾಗೂ ಪವರ್ ಟೂಲ್ಸ್ ಗಳನ್ನು ನೂತನ

ಕೃಷಿ ಯಂತ್ರೋಪಕರಣಗಳ ರಿಪೇರಿ ಕೇಂದ್ರ ಕಿಸಾನ್ ಆಗ್ರೋ ಟೂಲ್ಸ್ ➤ ನೂತನ ತಂತ್ರಜ್ಞಾನದೊಂದಿಗೆ ಮರ್ಧಾಳದಲ್ಲಿ ಶುಭಾರಂಭ Read More »

ಕರಾವಳಿ

ಕಡಬ: ಗುಡುಗು ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆ ➤ ಕಲ್ಲಾಜೆಯಲ್ಲಿ ರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರಗಳು ➤ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಎ. 05. ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆ ಸುರಿದಿದ್ದು, ಮರ್ಧಾಳದಿಂದ ನೆಟ್ಟಣ ಮಧ್ಯದಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗೆ ಮುರಿದು ಬಿದ್ದುದರಿಂದ ರಸ್ತೆ ತಡೆ ಉಂಟಾಗಿದೆ. ಮರ್ಧಾಳ ಸನೀಪದ ಕಲ್ಲಾಜೆ ಮತ್ತು ನೆಟ್ಟಣ ನಡುವಿನ ಪ್ರದೇಶದಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗಡ್ಡವಾಗಿ ಉರುಳಿದ್ದು, ಉಪ್ಪಿನಂಗಡಿಯಿಂದ ಮತ್ತು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಪ್ರಯಾಣಿಕರು ಅರ್ಧ ದಾರಿಯಲ್ಲಿ ಉಳಿಯುವಂತಾಗಿದೆ. ಮರಗಳನ್ನು ತೆರವುಗೊಳಿಸುವಲ್ಲಿ ಸ್ಥಳೀಯರು ನಿರತರಾಗಿದ್ದಾರೆ.

ಕಡಬ: ಗುಡುಗು ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆ ➤ ಕಲ್ಲಾಜೆಯಲ್ಲಿ ರಸ್ತೆಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರಗಳು ➤ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಂದ್ Read More »

ಕರಾವಳಿ

ಬೆಳ್ತಂಗಡಿ: ಸಿಡಿಲು ಬಡಿಯುತ್ತಿದ್ದ ವೇಳೆ ವಿದ್ಯುತ್ ಫ್ಯೂಸ್ ತೆಗೆಯಲು ಹೋದ ಮಹಿಳೆ ➤ ವಿದ್ಯುತ್ ಆಘಾತಕ್ಕೊಳಗಾಗಿ ಪತಿ – ಪತ್ನಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಎ.05. ವಿದ್ಯುತ್ ಆಘಾತಕ್ಕೆ ಒಳಗಾಗಿ ಗಂಡ – ಹೆಂಡತಿ ಮನೆಯಲ್ಲೇ ಮೃತಪಟ್ಟ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ಗುರುವಾರ ಸಂಭವಿಸಿದೆ. ಮೃತ ದಂಪತಿಯನ್ನು ಕೊಕ್ರಾಡಿಯ ಸಂಜೀವ ಮೂಲ್ಯ (55) ಹಾಗು ಅವರ ಪತ್ನಿ ಸರೋಜಿನಿ ಮೂಲ್ಯ (50) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಜೋರಾಗಿ ಸಿಡಿಲು ಬಡಿಯುತ್ತಿದ್ದ ವೇಳೆ ತಮ್ಮ ಮನೆಯ ಸ್ವಿಚ್ ಬೋರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಸರಬರಾಜು ನಿಲ್ಲಿಸಲೆಂದು ಸರೋಜಿನಿಯವರು ಫ್ಯೂಸ್ ತೆಗೆಯಲು ಹೋಗಿದ್ದರು. ಈ

ಬೆಳ್ತಂಗಡಿ: ಸಿಡಿಲು ಬಡಿಯುತ್ತಿದ್ದ ವೇಳೆ ವಿದ್ಯುತ್ ಫ್ಯೂಸ್ ತೆಗೆಯಲು ಹೋದ ಮಹಿಳೆ ➤ ವಿದ್ಯುತ್ ಆಘಾತಕ್ಕೊಳಗಾಗಿ ಪತಿ – ಪತ್ನಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಈ ಬಾರಿ ದ.ಕ. ಲೋಕಸಭಾ ಚುನಾವಣೆಯಲ್ಲಿ ಮಿಥುನ್‌ ರೈಗೆ ಭರ್ಜರಿ ಗೆಲುವು ➤ ಕಾಂಗ್ರೆಸ್ – ಜೆಡಿಎಸ್ ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ

(ನ್ಯೂಸ್ ಕಡಬ) newskadaba.com ಕಡಬ, ಎ.04. ಇದೇ ತಿಂಗಳ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ದ.ಕ. ಲೋಕಸಭಾ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅತೀ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ತಾ.ಪಂ ಸದಸ್ಯ ಗಣೇಶ್ ಕೈಕುರೆಯವರು ಭವಿಷ್ಯ ನುಡಿದಿದ್ದಾರೆ. ಅವರು ಎ. 3ರಂದು ಕಡಬದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ತನ್ನ ಕುಟುಂಬವೇ ವೈದ್ಯಕೀಯ ಸೇವೆ ನೀಡುವ ಮೂಲಕ ಜನರಿಗೆ ಹತ್ತಿರವಾಗಿರುವ ದ.ಕ ಲೋಕಸಭಾ

ಈ ಬಾರಿ ದ.ಕ. ಲೋಕಸಭಾ ಚುನಾವಣೆಯಲ್ಲಿ ಮಿಥುನ್‌ ರೈಗೆ ಭರ್ಜರಿ ಗೆಲುವು ➤ ಕಾಂಗ್ರೆಸ್ – ಜೆಡಿಎಸ್ ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ Read More »

ಕರಾವಳಿ

ಆಟವಾಡುತ್ತಿದ್ದ ವೇಳೆ ನೀರಿನ ಟ್ಯಾಂಕ್ ಗೆ ಬಿದ್ದ ಮಕ್ಕಳು ➤ ಸಹೋದರಿಯರಿಬ್ಬರ ಸೇರಿದಂತೆ ಮೂವರು ಮಕ್ಕಳ ದುರ್ಮರಣ

(ನ್ಯೂಸ್ ಕಡಬ) newskadaba.com ಪುತ್ತೂರು, ಎ.03. ಆಟವಾಡಲೆಂದು ತೆರಳಿದ್ದ ಮೂವರು ಮಕ್ಕಳು ನೀರಿನ‌ ಟ್ಯಾಂಕಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಮೃತ ಮಕ್ಕಳನ್ನು ಬೆಟ್ಟಂಪಾಡಿಯ ಮಿತ್ತಡ್ಕ ಸರಕಾರಿ ಶಾಲೆಯ ವಿದ್ಯಾರ್ಥಿಗಳಾದ ಉಡ್ಡಂಗಳ ನಿವಾಸಿ ರಮೇಶ್ ಎಂಬವರ ಪುತ್ರಿಯರಾದ ವಿಶ್ಮಿತಾ(13), ಚೈತ್ರಾ (10) ಹಾಗೂ ರವಿ ಎಂಬವರ ಪುತ್ರ ಜಿತೇಶ್(13) ಎಂದು ಗುರುತಿಸಲಾಗಿದೆ. ಇವರು ನೀರಿನಲ್ಲಿ ಆಟವಾಡಲೆಂದು ಟಾಂಕಿಗೆ ಇಳಿದಿರಬಹುದೆಂದು ಶಂಕಿಸಲಾಗಿದ್ದು, ಟ್ಯಾಂಕ್ ನಿರ್ಮಾಣವಾಗಿ ಮೂರು ತಿಂಗಳಾಗಿದ್ದರೂ ಟ್ಯಾಂಕ್

ಆಟವಾಡುತ್ತಿದ್ದ ವೇಳೆ ನೀರಿನ ಟ್ಯಾಂಕ್ ಗೆ ಬಿದ್ದ ಮಕ್ಕಳು ➤ ಸಹೋದರಿಯರಿಬ್ಬರ ಸೇರಿದಂತೆ ಮೂವರು ಮಕ್ಕಳ ದುರ್ಮರಣ Read More »

ಕರಾವಳಿ

ಪುಣ್ಚತ್ತಾರು: ಗಾಳಿ ಮಳೆಗೆ ಮುರಿದಿದ್ದ ಮರದ ಕೊಂಬೆ ➤ ತೋಟದಲ್ಲಿ ನಡೆಯುವಾಗ ತಲೆಗೆ ಬಿದ್ದು ಕಡಬದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ.03. ಮಂಗಳವಾರದಂದು ಸಂಜೆ ಸುರಿದ ಮಳೆಗೆ ಮುರಿದು ಬಿದ್ದಿದ್ದ ಮರವೊಂದು ತಲೆಗೆ ಬಿದ್ದು ಕಡಬದ ವ್ಯಕ್ತಿಯೋರ್ವರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಬುಧವಾರದಂದು ಸಂಭವಿಸಿದೆ. ಮೃತ ವ್ಯಕ್ತಿಯನ್ನು ಕಡಬ ಗ್ರಾಮದ ಪಣೆಮಜಲು ನಿವಾಸಿ ದಿನೇಶ ಯಾನೆ ನಿತ್ಯಾನಂದ ಗೌಡ(35) ಎಂದು ಗುರುತಿಸಲಾಗಿದೆ. ಕಾಣಿಯೂರು ಸಮೀಪದ ಪುಣ್ಚತ್ತಾರಿನಲ್ಲಿ ಗ್ಯಾರೇಜು ಹೊಂದಿದ್ದ ಇವರು ತನ್ನ ಪತ್ನಿಯ ಮನೆಯಲ್ಲಿದ್ದರೆನ್ನಲಾಗಿದೆ. ಮಂಗಳವಾರದಂದು ಸುರಿದ ಭಾರೀ ಗಾಳಿ – ಮಳೆಗೆ ತೋಟದಲ್ಲಿ ಮುರಿದು ಬಿದ್ದಿದ್ದ ಮರದ

ಪುಣ್ಚತ್ತಾರು: ಗಾಳಿ ಮಳೆಗೆ ಮುರಿದಿದ್ದ ಮರದ ಕೊಂಬೆ ➤ ತೋಟದಲ್ಲಿ ನಡೆಯುವಾಗ ತಲೆಗೆ ಬಿದ್ದು ಕಡಬದ ವ್ಯಕ್ತಿ ಮೃತ್ಯು Read More »

ಕರಾವಳಿ

ಗೋಳಿತೊಟ್ಟು: ಲಾರಿ ಚಾಲಕನ ಕೈಕಾಲು ಕಟ್ಟಿ ಹಾಕಿ ದರೋಡೆ ಪ್ರಕರಣ ಭೇದಿಸಿದ ಪೊಲೀಸರು ➤ ಉಪ್ಪಿನಂಗಡಿ ಪೊಲೀಸರಲ್ಲಿ ಸತ್ಯ ಬಾಯ್ಬಿಟ್ಟ ಆರೋಪಿ ಲಾರಿ ಮಾಲೀಕ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.03. ಕಳೆದ ಮಾರ್ಚ್ 25 ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿ ಲಾರಿ ಚಾಲಕನ ಬಾಯಿಗೆ ಬಟ್ಟೆ ತುರುಕಿ ಕೈಕಟ್ಟಿ ಹಾಕಿ ದರೋಡೆ ನಡೆಸಿದ ಪ್ರಕರಣದಲ್ಲಿ ಉಪ್ಪಿನಂಗಡಿ ಪೊಲೀಸ್ ತನಿಖಾ ತಂಡ ಮಹತ್ವದ ಯಶಸ್ಸು ಸಾಧಿಸಿದ್ದು, ದರೋಡೆ ಪ್ರಕರಣದ ಸತ್ಯಾಂಶ ಬಯಲುಗೊಳಿಸಿದೆ. ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಸ್ವತಃ ಲಾರಿ ಮಾಲಕ ಹಾಗೂ ಚಾಲಕನಾಗಿದ್ದ ಮಂಡ್ಯ ಪಾಂಡವಪುರದ ನಿವಾಸಿ ಅಂಬರೀಶ್ ಸ್ವತಃ ತಾನೇ ಮಾಡಿದ ದರೋಡೆ ನಾಟಕ ಎನ್ನುವುದು ಪತ್ತೆಯಾಗಿದೆ.

ಗೋಳಿತೊಟ್ಟು: ಲಾರಿ ಚಾಲಕನ ಕೈಕಾಲು ಕಟ್ಟಿ ಹಾಕಿ ದರೋಡೆ ಪ್ರಕರಣ ಭೇದಿಸಿದ ಪೊಲೀಸರು ➤ ಉಪ್ಪಿನಂಗಡಿ ಪೊಲೀಸರಲ್ಲಿ ಸತ್ಯ ಬಾಯ್ಬಿಟ್ಟ ಆರೋಪಿ ಲಾರಿ ಮಾಲೀಕ Read More »

ಕರ್ನಾಟಕ
Scroll to Top