ಮಳೆಗೆ ನೆಲಕ್ಕುರುಳಿದ ಆತೂರು ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಪೆಂಡಾಲ್ ➤ ಚೆಲ್ಲಾಪಿಲ್ಲಿಯಾದ ಸಂತೆ ಮಳಿಗೆಗಳು

(ನ್ಯೂಸ್ ಕಡಬ) newskadaba.com ಕಡಬ, ಎ.03. ಮಂಗಳವಾರ ಸಂಜೆ ವೇಳೆಗೆ ಕರಾವಳಿಯ ಅಲ್ಲಲ್ಲಿ ಸುರಿದ ಭಾರೀ ಗಾಳಿ ಮಳೆಗೆ ವಿವಿಧೆಡೆ ಕೃಷಿ ಸೇರಿದಂತೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ. ಕಡಬ ತಾಲೂಕಿನ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಳದ ಜಾತ್ರೋತ್ಸವದ ಶಾಮಿಯಾನವು ಧರಾಶಾಯಿಯಾಗಿದ್ದು, ಈ ವೇಳೆ ಅಲ್ಲಿದ್ದವರು ದೇವಸ್ಥಾನದ ಒಳಗಡೆಗೆ ತೆರಳಿದ್ದರಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ವೇಳೆ ಬೀಸಿದ ಭಾರೀ ಗಾಳಿಗೆ ಜಾತ್ರೋತ್ಸವದಲ್ಲಿನ ಸಂತೆ ಮಳಿಗೆಗಳು ಚೆಲ್ಲಾಪಿಲ್ಲಿಯಾಗಿದ್ದು, ಅದನ್ನು […]

ಮಳೆಗೆ ನೆಲಕ್ಕುರುಳಿದ ಆತೂರು ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಪೆಂಡಾಲ್ ➤ ಚೆಲ್ಲಾಪಿಲ್ಲಿಯಾದ ಸಂತೆ ಮಳಿಗೆಗಳು Read More »

ಕರಾವಳಿ

ಕಡಬ: ಗುಡುಗು – ಮಿಂಚು ಮಿಶ್ರಿತ ಭಾರೀ ಗಾಳಿ ಮಳೆ ➤ ಸಾವಿರಾರು ಅಡಿಕೆ ಮರಗಳು, ತೆಂಗು, ರಬ್ಬರ್ ಧರೆಗುರುಳಿ ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ಎ.02. ಹಠಾತ್ ಸುರಿದ ಸಿಡಿಲು ಮಿಶ್ರಿತ ಭಾರೀ ಗಾಳಿ ಮಳೆಗೆ ಹಲವು ಮರಗಳು ರಸ್ತೆಗುರುಳಿದ್ದು, ಅಪಾರ ಕೃಷಿ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಮಂಗಳವಾರ ಸಂಜೆ ಕಡಬದಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತಾದರೂ ಸಂಜೆ‌ ವೇಳೆಗೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆ ಸುರಿದಿದೆ. ಪರಿಣಾಮ ಕಟ್ಟಡಗಳ ಮೇಲ್ಛಾವಣಿಯ ಸಿಮೆಂಟ್ ಶೀಟುಗಳು, ಅಂಗಡಿಯ ನಾಮಫಲಕಗಳು ಸೇರಿದಂತೆ ಹಲವು ಸ್ವತ್ತುಗಳು ನಾಶವಾಗಿವೆ. ಮರ್ಧಾಳದ ಚಾಕೋಟೆಕೆರೆ,

ಕಡಬ: ಗುಡುಗು – ಮಿಂಚು ಮಿಶ್ರಿತ ಭಾರೀ ಗಾಳಿ ಮಳೆ ➤ ಸಾವಿರಾರು ಅಡಿಕೆ ಮರಗಳು, ತೆಂಗು, ರಬ್ಬರ್ ಧರೆಗುರುಳಿ ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಎ.02. ಇಲ್ಲಿನ ತಿಮರಡ್ಡ ನಿವಾಸಿ ಹಸೈನಾರ್ ಎಂಬವರ ಪುತ್ರ ಅನ್ಸಾರ್ ಎಂಬವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆಂದು ಕಡಬ ಠಾಣೆಗೆ ದೂರು ನೀಡಲಾಗಿದೆ. ಅನ್ಸಾರ್ ಅವರು ಮಾ.21ರಂದು ಸುಳ್ಯದ ಉಬರಡ್ಕಕ್ಕೆ ಮರದ ಕೆಲಸಕ್ಕೆ ಹೋದವರು ಸಂಜೆ ವೇಳೆ ಕಡಬಕ್ಕೆ ಬಂದಿದ್ದರು. ಆದರೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಹಸೈನಾರ್ ಅವರು ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ Read More »

ಕರಾವಳಿ

ಕುಂತೂರು: ಸೈಂಟ್ ಮೇರೀಸ್ ಚರ್ಚಿನ ಧರ್ಮಗುರು ವರ್ಗಾವಣೆ ➤ ನೂತನ ಧರ್ಮಗುರುಗಳಾಗಿ ಕಡಬದ ಫಾ| ಪಿ.ಕೆ.ಅಬ್ರಹಾಂ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಎ.02. ಇಲ್ಲಿನ ಕುಂತೂರು ಸೈಂಟ್ ಮೇರಿಸ್ ಜಾಕೊಬೈಟ್ ಸಿರಿಯನ್ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ| ಫಾ| ಪಿ.ಕೆ. ಅಬ್ರಾಹಂ ಸೋಮವಾರದಂದು ಅಧಿಕಾರ ವಹಿಸಿಕೊಂಡರು. ಪ್ರಸ್ತುತ ಕಡಬ ನಿವಾಸಿಯಾಗಿರುವ ಇವರು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಚೀಮೇನಿ ಚರ್ಚ್‌ನಿಂದ ಕುಂತೂರಿಗೆ ವರ್ಗಾವಣೆಗೊಂಡಿದ್ದು, ಇವರು ಈ ಮೊದಲು ಜೆಪ್ಪು, ನೆಲ್ಯಾಡಿ, ಶಿರಾಡಿ, ಶಿಬಾಜೆ, ಅಡ್ಡಹೊಳೆ, ಬೆಳುವಾಯಿ, ಇಚ್ಲಂಪಾಡಿ, ರೆಂಜಿಲಾಡಿ, ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಧರ್ಮಗುರುಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಸ್ಥಳೀಯವಾಗಿ ವಿವಿಧ ಧಾರ್ಮಿಕ ಮತ್ತು

ಕುಂತೂರು: ಸೈಂಟ್ ಮೇರೀಸ್ ಚರ್ಚಿನ ಧರ್ಮಗುರು ವರ್ಗಾವಣೆ ➤ ನೂತನ ಧರ್ಮಗುರುಗಳಾಗಿ ಕಡಬದ ಫಾ| ಪಿ.ಕೆ.ಅಬ್ರಹಾಂ ನೇಮಕ Read More »

ಕರಾವಳಿ

ಕಳೆದ 25 ವರ್ಷಗಳಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡದ ಆರೋಪ ➤ ಕೋಡಿಂಬಾಳದಲ್ಲಿ ರಾರಾಜಿಸುತ್ತಿದೆ ಚುನಾವಣಾ ಬಹಿಷ್ಕಾರದ ಬ್ಯಾನರ್

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಲೋಕಸಭಾ ಚುನಾವಣೆಯ ಕಾವು ಏರುತ್ತಿದ್ದಂತೆಯೇ ಕಡಬದ ಕೋಡಿಂಬಾಳ ಗ್ರಾಮದ ಮಡ್ಯಡ್ಕ ಜನತಾ ಕಾಲನಿಯ ನಿವಾಸಿಗಳು ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ರಾಜಕೀಯ ಪಕ್ಷಗಳ ಪ್ರಮುಖರಿಗೆ ಸಂದೇಶ ರವಾನಿಸಿದ್ದಾರೆ. ಕಾಲನಿಯಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಿಸಬೇಕು, ವಿದ್ಯುತ್ ಕಂಬ ಅಳವಡಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಹಾಗೂ ಕಾಲನಿಯ ನಿವಾಸಿಗಳ ಬಾಕಿ ಇರುವ ಕುಡಿಯುವ ನೀರಿನ ಬಿಲ್‍ನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು

ಕಳೆದ 25 ವರ್ಷಗಳಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡದ ಆರೋಪ ➤ ಕೋಡಿಂಬಾಳದಲ್ಲಿ ರಾರಾಜಿಸುತ್ತಿದೆ ಚುನಾವಣಾ ಬಹಿಷ್ಕಾರದ ಬ್ಯಾನರ್ Read More »

ರಾಷ್ಟ್ರೀಯ ನ್ಯೂಸ್

ಬೆಳಂದೂರು ಬಿಜೆಪಿ ವತಿಯಿಂದ ಆಲಂಕಾರು ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ➤ ಕೃಷಿ ಉಳಿಸುವುದಕ್ಕಾಗಿ ರಕ್ತ ಕೊಟ್ಟಾದರೂ ವಿದ್ಯುತ್ ಪಡೆಯುತ್ತೇವೆ – ದಯಾನಂದ ಗೌಡ ಆಲಡ್ಕ

(ನ್ಯೂಸ್ ಕಡಬ) newskadaba.com ಕಡಬ, ಮಾ.31. ಇಲ್ಲಿನ ಆಲಂಕಾರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 110ಕೆವಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಕೆಪಿಟಿಸಿಎಲ್ ಮೀನಾಮೇಷಾ ಎಣಿಸುತ್ತಿದ್ದು, ಕಳೆದ ಹಲವು ದಿನಗಳಿಂದ ಆಲಂಕಾರು, ಕುಂತೂರು, ಪೆರಾಬೆ ಗ್ರಾಮಗಳ ವ್ಯಾಪ್ತಿಯಲ್ಲಿ ಬಹಳಷ್ಟು ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಗುಣಮಟ್ಟದ ವಿದ್ಯುತ್ ನೀಡದೆ ಇರುವುದರಿಂದಾಗಿ ರೈತಾಪಿ ಜನತೆಗೆ ತಮ್ಮ ಕೃಷಿಯನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ರೈತ ಬೆಳೆದ ಕೃಷಿಯನ್ನು ಉಳಿಸುವುದಕ್ಕಾಗಿ ರಕ್ತವನ್ನು ಕೊಟ್ಟಾದರು ವಿದ್ಯುತ್ತನ್ನು ಪಡೆದೇ ಪಡೆಯುತ್ತೇವೆ ಎಂದು ಮಾಜಿ ತಾ. ಪಂಚಾಯತ್ ಸದಸ್ಯ ದಯಾನಂದ ಗೌಡ

ಬೆಳಂದೂರು ಬಿಜೆಪಿ ವತಿಯಿಂದ ಆಲಂಕಾರು ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ➤ ಕೃಷಿ ಉಳಿಸುವುದಕ್ಕಾಗಿ ರಕ್ತ ಕೊಟ್ಟಾದರೂ ವಿದ್ಯುತ್ ಪಡೆಯುತ್ತೇವೆ – ದಯಾನಂದ ಗೌಡ ಆಲಡ್ಕ Read More »

ಕರಾವಳಿ

ಭರವಸೆಯಾಗಿಯೇ ಉಳಿದ ರಸ್ತೆ ಡಾಮರೀಕರಣದ ಭರವಸೆ ➤ ನೂಜಿಬಾಳ್ತಿಲ 2 ನೇ ವಾರ್ಡ್ ಗ್ರಾಮಸ್ಥರಿಂದ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ➤ ಕಳೆದ ವಿಧಾನಸಭಾ ಚುನಾವಣೆ ಬಹಿಷ್ಕರಿಸಿ ಶ್ರಮದಾನ ಮಾಡಿದ್ದ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಕಡಬ, ಮಾ.31. ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು, ಒರುಂಬಾಲು, ಲಾವತ್ತಡ್ಕ ಸಂಪರ್ಕ ರಸ್ತೆ ಅಭಿವೃದ್ದಿಯಾಗಬೇಕೆಂಬ ಬಹುಕಾಲದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಈ ಭಾಗದ ಜನತೆ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ದರಿಸಿದ್ದಾರೆ. ಗ್ರಾಮದ ಎರಡನೇ ವಾರ್ಡ್ ವ್ಯಾಪ್ತಿಯಲ್ಲಿರುವ ಈ ರಸ್ತೆಯನ್ನು ಡಾಮರಿಕರಣಗೊಳಿಸಬೇಕೆಂದು ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಗ್ರಾಮ ಸಭೆಗಳಲ್ಲಿ ಮನವಿ ಮಾಡುತ್ತ ಬರಲಾಗುತ್ತಿದೆ. ಆದರೆ ಭರವಸೆ ಮಾತ್ರ ದೊರೆತರೂ ಅಭಿವೃದ್ದಿ ಮರೀಚಿಕೆಯಾಗಿದೆ. ಹಾಗಾಗಿ ಈ ಬಾರಿ ಮತದಾನ ಬಹಿಷ್ಕರಿಸುವ ದಿಟ್ಟ ನಿರ್ಧಾರಕ್ಕೆ ಬರಲಾಗಿದೆ

ಭರವಸೆಯಾಗಿಯೇ ಉಳಿದ ರಸ್ತೆ ಡಾಮರೀಕರಣದ ಭರವಸೆ ➤ ನೂಜಿಬಾಳ್ತಿಲ 2 ನೇ ವಾರ್ಡ್ ಗ್ರಾಮಸ್ಥರಿಂದ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ ➤ ಕಳೆದ ವಿಧಾನಸಭಾ ಚುನಾವಣೆ ಬಹಿಷ್ಕರಿಸಿ ಶ್ರಮದಾನ ಮಾಡಿದ್ದ ಗ್ರಾಮಸ್ಥರು Read More »

ರಾಷ್ಟ್ರೀಯ ನ್ಯೂಸ್

ಎಪ್ರಿಲ್ 01 ರಿಂದ ‘ವಿಜಯ ಬ್ಯಾಂಕ್” ನೆನಪು ಮಾತ್ರ ➤ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನದ ಬಗ್ಗೆ ಅಧಿಕೃತ ಸಂದೇಶ ರವಾನೆ ➤ ವಿಜಯ ಬ್ಯಾಂಕ್ ಗ್ರಾಹಕರು ಮುಂದೇನು ಮಾಡಬೇಕೆಂದು ಗೊತ್ತೇ..?

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ.30. ಕರಾವಳಿಯ ಬ್ಯಾಂಕ್ ಗಳಲ್ಲಿ ಒಂದಾದ ವಿಜಯ ಬ್ಯಾಂಕ್ ಇನ್ಮುಂದೆ ನೆನಪು ಮಾತ್ರ. ಎಪ್ರಿಲ್ ಒಂದರಿಂದ ಬ್ಯಾಂಕ್ ಆಫ್ ಬರೋಡಾದ ಜೊತೆ ವಿಜಯಾ ಬ್ಯಾಂಕ್‍ ಹಾಗೂ ದೇನಾ ಬ್ಯಾಂಕುಗಳು ವಿಲೀನಗೊಳ್ಳಲಿದ್ದು, ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಲಿದೆ. ಪ್ರಸ್ತುತ 45.85 ಲಕ್ಷ ಕೋಟಿ ಮೌಲ್ಯದ ವ್ಯವಹಾರಗಳೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊದಲ ಸ್ಥಾನದಲ್ಲಿದ್ದು, 15.8 ಲಕ್ಷ ಕೋಟಿ ವ್ಯವಹಾರಗಳೊಂದಿಗೆ ಎಚ್‍ಡಿಎಫ್‍ಸಿ ಎರಡನೇ ಸ್ಥಾನದಲ್ಲಿದ್ದರೆ, ದೇನಾ ಮತ್ತು ವಿಜಯಾ ಬ್ಯಾಂಕ್‍ಗಳ ವಿಲೀನದಿಂದಾಗಿ

ಎಪ್ರಿಲ್ 01 ರಿಂದ ‘ವಿಜಯ ಬ್ಯಾಂಕ್” ನೆನಪು ಮಾತ್ರ ➤ ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನದ ಬಗ್ಗೆ ಅಧಿಕೃತ ಸಂದೇಶ ರವಾನೆ ➤ ವಿಜಯ ಬ್ಯಾಂಕ್ ಗ್ರಾಹಕರು ಮುಂದೇನು ಮಾಡಬೇಕೆಂದು ಗೊತ್ತೇ..? Read More »

ರಾಷ್ಟ್ರೀಯ ನ್ಯೂಸ್

ಕಡಬದಲ್ಲಿ ಪದೇ ಪದೇ ಕೈಕೊಡುತ್ತಿರುವ ವಿದ್ಯುತ್ ➤ ಶೀಘ್ರ ಸರಿಪಡಿಸುವಂತೆ ಬಿಜೆಪಿ ನೇತೃತ್ವದ ನಿಯೋಗದಿಂದ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಕಳೆದ ಕೆಲವು ಸಮಯದಿಂದ ನಿರಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖರು ಹಾಗೂ ಕಾರ್ಯಕರ್ತರು ಕಡಬ ಮೆಸ್ಕಾಂ ಉಪ ವಿಭಾಗದ ಕಚೇರಿಗೆ ತೆರಳಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು. ಬಿಜೆಪಿ ಮುಖಂಡ ಸೀತಾರಾಮ ಗೌಡ ಪೊಸವಳಿಕೆಯವರ ನೇತೃತ್ವದಲ್ಲಿ ತೆರಳಿದ ಕಾರ್ಯಕರ್ತರು, ಕಡಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ವಿದ್ಯುತ್ ಸಮಸ್ಯೆಯಿಂದಾಗಿ ಕಡಬ ಪರಿಸರದಲ್ಲಿನ ಅಡಿಕೆ ತೋಟಗಳು ಹಾಗೂ ಇತರ ಕೃಷಿಗಳು ನೀರಿಲ್ಲದೇ

ಕಡಬದಲ್ಲಿ ಪದೇ ಪದೇ ಕೈಕೊಡುತ್ತಿರುವ ವಿದ್ಯುತ್ ➤ ಶೀಘ್ರ ಸರಿಪಡಿಸುವಂತೆ ಬಿಜೆಪಿ ನೇತೃತ್ವದ ನಿಯೋಗದಿಂದ ಆಗ್ರಹ Read More »

ಕರಾವಳಿ

ನಳಿನ್ ಕಟೀಲ್‌ ಜಿಲ್ಲೆಗೆ ಏನೂ ಮಾಡಿಲ್ಲ… ಇವರ ವೈಫಲ್ಯವೇ ಕಾಂಗ್ರೇಸ್ ಗೆಲುವಿಗೆ ಶ್ರೀರಕ್ಷೆ ➤ ಕಡಬದಲ್ಲಿ ಮಾಜಿ ಸಚಿವ ರಮಾನಾಥ ರೈ ಹೇಳಿಕೆ

ಸಾಂದರ್ಭಿಕ ಚಿತ್ರ ಕಡಬ, ಮಾ.27. ಕಳೆದ ಹತ್ತು ವರ್ಷಗಳಿಂದ ಸಂಸದರಾಗಿದ್ದ ನಳೀನ್ ಕುಮಾರ್ ಕಟೀಲ್ ಅವರು ಜಿಲ್ಲೆಯ ಅಭಿವೃದ್ದಿಗೆ ನೀಡಿದ ಕೊಡುಗೆ ಏನೇನೂ ಇಲ್ಲ. ಇವರ ವೈಫಲ್ಯವೇ ಈ ಬಾರಿ ದ.ಕ. ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲುವಿಗೆ ಕಾರಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ರಮಾನಾಥ ರೈ ಹೇಳಿದರು. ಬುಧವಾರದಂದು ಕಡಬ ಕಾಂಗ್ರೇಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಜಿಲ್ಲೆಯಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನಗಳನ್ನು ಮೋಸಮಾಡಿ ಕೋಮು ಭಾವನೆಗಳನ್ನು ಕೆರಳಿಸಿ ಮತಗಳಾಗಿ

ನಳಿನ್ ಕಟೀಲ್‌ ಜಿಲ್ಲೆಗೆ ಏನೂ ಮಾಡಿಲ್ಲ… ಇವರ ವೈಫಲ್ಯವೇ ಕಾಂಗ್ರೇಸ್ ಗೆಲುವಿಗೆ ಶ್ರೀರಕ್ಷೆ ➤ ಕಡಬದಲ್ಲಿ ಮಾಜಿ ಸಚಿವ ರಮಾನಾಥ ರೈ ಹೇಳಿಕೆ Read More »

ಕರಾವಳಿ
Scroll to Top