ಪೆರಿಯಡ್ಕ: ಬೈಕಿಗೆ ಢಿಕ್ಕಿ ಹೊಡೆದು ಓಮ್ನಿ ಪಲ್ಟಿ ➤ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.27. ಓಮ್ನಿ ಕಾರು ಹಾಗೂ ಬೈಕ್ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೆರಿಯಡ್ಕ ಎಂಬಲ್ಲಿ ಬುಧವಾರದಂದು ಸಂಭವಿಸಿದೆ. ಗಾಯಗೊಂಡ ಸವಾರನನ್ನು ಕೊಯಿಲ ನಿವಾಸಿ ಜೀವನ್ ಎಂದು ಗುರುತಿಸಲಾಗಿದೆ. ಕೊಯಿಲದಿಂದ ಉಪ್ಪಿನಂಗಡಿ ಕಡೆ ತೆರಳುತ್ತಿದ್ದ ಬೈಕ್ ಗೆ ಪೆರಿಯಡ್ಕ ಸಮೀಪ ಓಮ್ನಿ ಕಾರು ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟಿದ್ದು, ಓಮ್ನಿ ಚಾಲಕ ಸತ್ಯನಾರಾಯಣ ಭಟ್ […]

ಪೆರಿಯಡ್ಕ: ಬೈಕಿಗೆ ಢಿಕ್ಕಿ ಹೊಡೆದು ಓಮ್ನಿ ಪಲ್ಟಿ ➤ ಸವಾರನಿಗೆ ಗಾಯ Read More »

ಕರಾವಳಿ

ಅಡ್ಯಾರ್: ಕೋಳಿ ಸಾಗಾಟದ ವಾಹನ ಬೈಕಿಗೆ ಢಿಕ್ಕಿ ➤ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಬಲಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.26. ಕೋಳಿ ಸಾಗಾಟದ ಟೆಂಪೊವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಅಡ್ಯಾರ್ ಕಣ್ಣೂರು ಸಮೀಪದ ವಳಚ್ಚಿಲ್ ಎಂಬಲ್ಲಿ ಮಂಗಳವಾರದಂದು ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿ ಬಾಗಲಕೋಟೆ ಮೂಲದ ತಿಪ್ಪಣ್ಣ (20) ಎಂದು ಗುರುತಿಸಲಾಗಿದೆ. ಫಾರಂ ಕೋಳಿಗಳನ್ನು ಸಾಗಿಸುತ್ತಿದ್ದ ಟೆಂಪೋ ತಿಪ್ಪಣ್ಣ ಸಂಚರಿಸುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಡ್ಯಾರ್: ಕೋಳಿ ಸಾಗಾಟದ ವಾಹನ ಬೈಕಿಗೆ ಢಿಕ್ಕಿ ➤ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಬಲಿ Read More »

ಕರಾವಳಿ

ಕೊಯಿಲ: ನೀರಿಗೆ ಬಿದ್ದು ಯುವತಿ ಮೃತ್ಯು ➤ ಮದುವೆ ನಿಶ್ಚಿತಾರ್ಥವಾಗಿ ಅತಿಥಿ ಸತ್ಕಾರಕ್ಕೆ ಬಂದಿದ್ದ ವೇಳೆ ಘಟನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.25. ನದಿ ತೀರಕ್ಕೆ ತೆರಳಿದ ಯುವತಿಯೋರ್ವಳು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಜೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ನಡೆದಿದೆ. ಮೃತ ಯುವತಿಯನ್ನು ಸಕಲೇಶಪುರ ತಾಲೂಕಿನ ಬಾಳೆಗೇರಿ ನಿವಾಸಿ ಕುಮಾರ – ಹೊನ್ನಮ್ಮ ದಂಪತಿಯ ಪುತ್ರಿ ದಿವ್ಯಾ(19) ಎಂದು ಗುರುತಿಸಲಾಗಿದೆ. ಈಕೆಗೆ ಮದುವೆ ನಿಶ್ಚಿತಾರ್ಥವಾಗಿದ್ದು, ಈ ಹಿನ್ನೆಲೆಯಲ್ಲಿ ಅತಿಥಿ ಸತ್ಕಾರಕ್ಕಾಗಿ ಕೊಯಿಲ ಗ್ರಾಮದ ವಳಕಡಮದಲ್ಲಿರುವ ತನ್ನ ದೊಡ್ಡಮ್ಮನ ಮನೆಗೆ ಆಗಮಿಸಿದ್ದಳು. ಸೋಮವಾರ ಸಂಜೆ ಮನೆ ಸಮೀಪದ ನದಿಯಲ್ಲಿ ಸ್ನಾನಕ್ಕೆಂದು

ಕೊಯಿಲ: ನೀರಿಗೆ ಬಿದ್ದು ಯುವತಿ ಮೃತ್ಯು ➤ ಮದುವೆ ನಿಶ್ಚಿತಾರ್ಥವಾಗಿ ಅತಿಥಿ ಸತ್ಕಾರಕ್ಕೆ ಬಂದಿದ್ದ ವೇಳೆ ಘಟನೆ Read More »

ಕರ್ನಾಟಕ

ಕೇರಳ ರಾಜ್ಯ ಲಾಟರಿಯಲ್ಲಿ ಬಂಪರ್ ಬಹುಮಾನ ಪಡೆದ ಸುಳ್ಯದ ವ್ಯಕ್ತಿ ➤ ನಾಲ್ಕು ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡ ಹೋಟೆಲ್‌ ಮಾಲಕ

(ನ್ಯೂಸ್ ಕಡಬ) newskadaba.com ಸುಳ್ಯ, ಮಾ.23. ಕೇರಳ ರಾಜ್ಯ ಲಾಟರಿ ಖರೀದಿಸಿದ ಸುಳ್ಯದ ವ್ಯಕ್ತಿಯೋರ್ವರು ಬಂಪರ್ ಡ್ರಾದಲ್ಲಿ 4 ಕೋಟಿ ರೂಪಾಯಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಸುಳ್ಯದ ನಿತೀಶ್ ಹೋಟೆಲ್ ಮಾಲಕ ಸುಧಾಮ ಮಣಿಯಾಣಿಯವರೇ ಈ ಅದೃಷ್ಟವಂತರಾಗಿದ್ದಾರೆ. ಸುಧಾಮ‌ ಮಣಿಯಾಣಿಯವರು ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದ ಕಣ್ಣನ್ ಲಾಟರಿ ಏಜೆನ್ಸಿಯ ಮೂಲಕ ನಾಲ್ಕು ಟಿಕೇಟುಗಳನ್ನು ಖರೀದಿಸಿದ್ದು, ಅದರಲ್ಲಿ ಒಂದು ಟಿಕೇಟಿಗೆ ಬಂಪರ್ ಬಹುಮಾನ ಒಳಿದು ಬಂದಿದೆ.

ಕೇರಳ ರಾಜ್ಯ ಲಾಟರಿಯಲ್ಲಿ ಬಂಪರ್ ಬಹುಮಾನ ಪಡೆದ ಸುಳ್ಯದ ವ್ಯಕ್ತಿ ➤ ನಾಲ್ಕು ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡ ಹೋಟೆಲ್‌ ಮಾಲಕ Read More »

ರಾಷ್ಟ್ರೀಯ ನ್ಯೂಸ್

ಉದನೆ: ಬೈಕ್ – ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.22. ಬೈಕ್ ಮತ್ತು ಕೆಎಸ್ಸಾರ್ಟಿಸಿ ಬಸ್ ನೆಉವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಎಂಬಲ್ಲಿ ಶುಕ್ರವಾರ ಸಂಜೆ‌ ಸಂಭವಿಸಿದೆ. ಮೃತ ಸವಾರನನ್ನು ಶಿರಾಡಿ ಗಡಿಯಲ್ಲಿ ಅಂಗಡಿ ನಡೆಸುತ್ತಿದ್ದ ನಿವಾಸಿ ಉಮೇಶ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿಯುಂಟಾಗಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ

ಉದನೆ: ಬೈಕ್ – ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಇಂದು ಮತ್ತು ನಾಳೆ ಕಡಬದಲ್ಲಿ ಮಾರುತಿ ಕಾರುಗಳ ‘ಮಾರ್ಚ್ ಮೆಗಾ ಕಾರ್ನಿವಲ್’ ➤ ಹೊಸ ಕಾರುಗಳ ಪ್ರದರ್ಶನ, ವಿನಿಮಯ ಮೇಳ, ಸಾಲ ಸೌಲಭ್ಯ ಮತ್ತು ಉಚಿತ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ. ಮಾ.22. ಮಾರುತಿ ಸುಜುಕಿ ಕಾರುಗಳ ಅಧಿಕೃತ ಮಾರಾಟಗಾರರಾದ ಮಾಂಡವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ರವರಿಂದ ಹೊಸ ಕಾರುಗಳ ಪ್ರದರ್ಶನ, ವಿನಿಮಯ ಮೇಳ, ಸಾಲ ಸೌಲಭ್ಯ ಮತ್ತು ಉಚಿತ ತಪಾಸಣಾ ಶಿಬಿರ ‘ಮಾರ್ಚ್ ಮೆಗಾ ಕಾರ್ನಿವಲ್’ ಮಾರ್ಚ್ 22 ಮತ್ತು 23 ರಂದು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಓಮ್ನಿ ಕಾರಿನಲ್ಲಿ 53100, ಸ್ವಿಫ್ಟ್ ಕಾರಿನಲ್ಲಿ 50100 ಹಾಗೂ ಸೆಲೆರಿಯೋ ಕಾರುಗಳ ಖರೀದಿಯಲ್ಲಿ 73100 ರೂ. ಗಳನ್ನು ಉಳಿಸಬಹುದಾಗಿದ್ದು,

ಇಂದು ಮತ್ತು ನಾಳೆ ಕಡಬದಲ್ಲಿ ಮಾರುತಿ ಕಾರುಗಳ ‘ಮಾರ್ಚ್ ಮೆಗಾ ಕಾರ್ನಿವಲ್’ ➤ ಹೊಸ ಕಾರುಗಳ ಪ್ರದರ್ಶನ, ವಿನಿಮಯ ಮೇಳ, ಸಾಲ ಸೌಲಭ್ಯ ಮತ್ತು ಉಚಿತ ತಪಾಸಣಾ ಶಿಬಿರ Read More »

ಕರಾವಳಿ

ಲೋಕಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ➤ ದಕ್ಷಿಣ ಕನ್ನಡದಿಂದ ನಳಿನ್ ಕುಮಾರ್ ಕಟೀಲ್, ಉಡುಪಿಯಿಂದ ಶೋಭಾ ಕರಂದ್ಲಾಜೆ ಕಣಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.21. ಲೋಕಸಭೆ ಚುನಾವಣೆಗೆ ಬಿಜೆಪಿಯು ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ರಾಜ್ಯದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಅಭ್ಯರ್ಥಿಯಾಗಿ ಮೂರನೇ ಬಾರಿಗೆ ನಳಿನ್ ಕುಮಾರ್ ಕಟೀಲ್, ಉಡುಪಿ – ಚಿಕ್ಕಮಗಳೂರು ಕ್ಷೇತ್ರಕ್ಕೆ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೇಟ್ ನೀಡಲಾಗಿದೆ. ಮೈಸೂರು-ಕೊಡಗು ಕ್ಷೇತ್ರಕ್ಕೆ ಪ್ರತಾಪ ಸಿಂಹ, ವಿಜಯಪುರಕ್ಕೆ ರಮೇಶ್ ಜಿಗಜಿಣಗಿ, ಉತ್ತರ ಕನ್ನಡದಲ್ಲಿ ಅನಂತಕುಮಾರ್ ಹೆಗಡೆ, ಬೆಂ.ಉತ್ತರ ಕ್ಷೇತ್ರದಲ್ಲಿ ಡಿ.ವಿ.ಸದಾನಂದಗೌಡ, ಚಿಕ್ಕಬಳ್ಳಾಪುರ ಬಿ.ಎನ್.ಬಚ್ಚೇಗೌಡ, ಬೆಂಗಳೂರು ಕೇಂದ್ರ ಪಿ.ಸಿ.ಮೋಹನ್,

ಲೋಕಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ➤ ದಕ್ಷಿಣ ಕನ್ನಡದಿಂದ ನಳಿನ್ ಕುಮಾರ್ ಕಟೀಲ್, ಉಡುಪಿಯಿಂದ ಶೋಭಾ ಕರಂದ್ಲಾಜೆ ಕಣಕ್ಕೆ Read More »

ರಾಷ್ಟ್ರೀಯ ನ್ಯೂಸ್

➤➤ ವಿಶೇಷ ಲೇಖನ – ಪರೀಕ್ಷೆ ಬಂದಿದೆ ಪರಿತಪಿಸದಿರಿ ✍?ⓂⓂ ಮಹ್ ರೂಫ್ ಆತೂರು

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ: “ಇನ್ನೇನು ಕೆಲವೇ ದಿನಗಳಲ್ಲಿ SSLC ವಾರ್ಷಿಕ ಪರೀಕ್ಷೆ ನಡೆಯಲಿದೆ” ಎಂಬ ಮಾತು ಇಂದಿಗೆ ಇತ್ಯರ್ಥವಾಗಲಿದೆ. ಹೌದು, ಅವರಿವರ ಮಾತಿನಲ್ಲಿ ಕೇಳಿ ಕೇಳಿ ಹೇಗೆ ಪರೀಕ್ಷೆಯನ್ನು ಎದುರಿಸುವುದಪ್ಪಾ ಅನ್ನುವಷ್ಟು ಆತಂಕ. ಪರೀಕ್ಷೆಯಲ್ಲಿ ಫೇಲಾದರೆ ಜೀವನಕ್ಕೆ ಇತಿಶ್ರೀ ಹಾಡಬೇಕೆಂಬ ಮನಸ್ಥಿತಿ. ಮಿಗಿಲಾಗಿ ಮನೆಯವರಿಂದ ಸಿಗುವ ಒತ್ತಡ ಬೇರೆ. ಹೌದು.. ಇದೆಲ್ಲವನ್ನು ನಿಟ್ಟುಸಿರಿನಿಂದ ಎದುರಿಸಲಿರುವ ವಿದ್ಯಾರ್ಥಿಯ ಭವಿಷ್ಯದ ನಿರೀಕ್ಷೆಯಾದರೂ ಫೇಲಾದರೆ ಬಾಳಿನ ಕೊನೆ ಎಂಬ ಯೋಚನೆ ಮೂರ್ಖತನ. ಪ್ರಪಂಚದಲ್ಲಿ ಹಲವಾರು ಮಜಲುಗಳಿವೆ. ಅದರಲ್ಲಿ ವಿದ್ಯೆಗೆ

➤➤ ವಿಶೇಷ ಲೇಖನ – ಪರೀಕ್ಷೆ ಬಂದಿದೆ ಪರಿತಪಿಸದಿರಿ ✍?ⓂⓂ ಮಹ್ ರೂಫ್ ಆತೂರು Read More »

ವಿಶೇಷ ಲೇಖನಗಳು

ರಾಜ್ಯಾದ್ಯಂತ ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ ➤ ತಮ್ಮ ಭವಿಷ್ಯ ಬರೆಯಲಿರುವ 8 ಲಕ್ಷ ವಿದ್ಯಾರ್ಥಿಗಳು

ಸಾಂದರ್ಭಿಕ ಚಿತ್ರ (ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.21. ರಾಜ್ಯಾದ್ಯಂತ ಇಂದಿನಿಂದ ಎಪ್ರಿಲ್ 04 ರವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಯಾವುದೇ ಅಹಿತರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇಂದಿನಿಂದ ನಡೆಯಲಿರುವ ಪರೀಕ್ಷೆಯಲ್ಲಿ 4,47,864 ಗಂಡು ಮಕ್ಕಳು, 3,93,802 ಹೆಣ್ಣು ಮಕ್ಕಳು ಸೇರಿದಂತೆ 8,41,666 ವಿದ್ಯಾರ್ಥಿಗಳು ಅದೃಷ್ಟ ಪರೀಕ್ಷೆಯನ್ನು ಎದುರಿಸಲಿದ್ದಾರೆ. 4651 ವಿಕಲಚೇತನ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 1451 ಅರ್ಹ ವಿಕಲಚೇತನರಿಗೆ ಭಾಷಾ ವಿನಾಯಿತಿ ಹಾಗೂ 480

ರಾಜ್ಯಾದ್ಯಂತ ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ ➤ ತಮ್ಮ ಭವಿಷ್ಯ ಬರೆಯಲಿರುವ 8 ಲಕ್ಷ ವಿದ್ಯಾರ್ಥಿಗಳು Read More »

ಕರ್ನಾಟಕ

ಶಾಂತಿಯುತ ಮತದಾನಕ್ಕೆ ಮುನ್ನೆಚ್ಚರಿಕಾ ಕ್ರಮ ➤ ದೀಪಕ್ ರಾವ್ ಹತ್ಯೆ ಆರೋಪಿ ಸೇರಿದಂತೆ 12 ಮಂದಿ ರೌಡಿಗಳ ಗಡೀಪಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.20. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ದೀಪಕ್ ರಾವ್ ಹತ್ಯೆ ಆರೋಪಿ ಸೇರಿದಂತೆ 12 ಮಂದಿ ರೌಡಿಗಳನ್ನು ಮಂಗಳೂರು ನಗರ ಪೊಲೀಸರು ಗಡಿಪಾರು ಮಾಡಿದ್ದಾರೆ. ಈ ಬಗ್ಗೆ ಆದೇಶ ಹೊರಡಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸಂದೀಪ್ ಪಟೀಲ್, ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣದ ಆರೋಪಿ ಸೇರಿದಂತೆ 12 ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಈಗಾಗಲೇ ಈ

ಶಾಂತಿಯುತ ಮತದಾನಕ್ಕೆ ಮುನ್ನೆಚ್ಚರಿಕಾ ಕ್ರಮ ➤ ದೀಪಕ್ ರಾವ್ ಹತ್ಯೆ ಆರೋಪಿ ಸೇರಿದಂತೆ 12 ಮಂದಿ ರೌಡಿಗಳ ಗಡೀಪಾರು Read More »

ಕರಾವಳಿ
Scroll to Top