ಕೃಷಿ ಯಂತ್ರೋಪಕರಣಗಳ ರಿಪೇರಿ ಕೇಂದ್ರ ಕಿಸಾನ್ ಆಗ್ರೋ ಟೂಲ್ಸ್ ➤ ನೂತನ ತಂತ್ರಜ್ಞಾನದೊಂದಿಗೆ ಮರ್ಧಾಳದಲ್ಲಿ ಶುಭಾರಂಭ



(ನ್ಯೂಸ್ ಕಡಬ) newskadaba.com ಕಡಬ, ಎ.06. ಕೃಷಿ ಕ್ಷೇತ್ರದಲ್ಲಿ ದಿನೇ ದಿನೇ ಕೂಲಿ ಕಾರ್ಮಿಕರ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಇದೀಗ ಕೃಷಿ ಸಂಬಂಧಿತ ಯಂತ್ರೋಪಕರಣಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ‘ಕಿಸಾನ್ ಆಗ್ರೋ ಟೂಲ್ಸ್’ ಕೃಷಿ ಯಂತ್ರೋಪಕರಣಗಳ ನೂತನ ಮಳಿಗೆಯು ಮರ್ಧಾಳದಲ್ಲಿ ಶುಭಾರಂಭಗೊಂಡಿದೆ.







ಮರ್ಧಾಳದ ಮುಖ್ಯ ರಸ್ತೆಯ ಎಂ.ಎಚ್.ಕೆ. ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಆರಂಭಗೊಂಡಿರುವ ಕೃಷಿ ಯಂತ್ರೋಪಕರಣ ಮಳಿಗೆಯಲ್ಲಿ ಕೃಷಿ ಸಂಬಂಧಿತ ಕಳೆಕೊಚ್ಚುವ, ಮರ ಕತ್ತರಿಸುವ,ತೋಟಕ್ಕೆ ಮದ್ದು ಸಿಂಪಡಿಸುವ ಯಂತ್ರಗಳನ್ನು ಹಾಗೂ ಪವರ್ ಟೂಲ್ಸ್ ಗಳನ್ನು ನೂತನ ತಂತ್ರಜ್ಞಾನದೊಂದಿಗೆ ರಿಪೇರಿ ಮಾಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ 9611092008 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.






error: Content is protected !!
Scroll to Top