ಸವಣೂರು: ಈಡೇರದ ಮೂಲಭೂತ ಸೌಕರ್ಯಗಳು ➤ ಗ್ರಾಮಸ್ಥರಿಂದ ನೋಟಾ ಚಲಾವಣೆಗೆ ನಿರ್ಧಾರ

(ನ್ಯೂಸ್ ಕಡಬ) newskadaba.com ಸವಣೂರು, ಎ.15. ಪಾಲ್ತಾಡಿ 2 ನೇ ವಾರ್ಡ್ ವ್ಯಾಪ್ತಿಯ ಮತದಾರರು ಈ‌ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೋಟಾ‌ ಚಲಾವಣೆ ಮಾಡುವುದೆಂದು ಎ.13 ರಂದು ಸಂಜೆ ನಡೆದ ಮತದಾರರ ಸಭೆಯಲ್ಲಿ ನಿರ್ಧರಿಸಿದ್ದಾರೆ. ಪಾಲ್ತಾಡಿ ಗ್ರಾಮವನ್ನು ವಿರೋಧದ ನಡುವೆಯೂ ಕಡಬ ತಾಲೂಕಿಗೆ ಸೇರ್ಪಡೆ ಮಾಡಿದ್ದರೂ ಮೇಲ್ ಸ್ತರದ ಜನಪ್ರತಿನಿಧಿಗಳು ಯಾವುದೇ ಸ್ಪಂದನೆ ಮಾಡದಿರುವುದು ಮತ್ತು ಪಾಲ್ತಾಡಿ ಗ್ರಾಮದ ಮಾಡಾವು – ಉಪ್ಪೊಳಿಗೆ – ಪೆರ್ಲಂಪಾಡಿ ರಸ್ತೆಯನ್ನು, ಪಾಲ್ತಾಡಿ – ಬೊಳಿಯಾಲ – ನಳೀಲು ಮತ್ತು ಪಾಲ್ತಾಡಿ […]

ಸವಣೂರು: ಈಡೇರದ ಮೂಲಭೂತ ಸೌಕರ್ಯಗಳು ➤ ಗ್ರಾಮಸ್ಥರಿಂದ ನೋಟಾ ಚಲಾವಣೆಗೆ ನಿರ್ಧಾರ Read More »

ರಾಷ್ಟ್ರೀಯ ನ್ಯೂಸ್

ಕಡಬ ಜಿ.ಪಂ.ಸದಸ್ಯರ ಬೂತ್ ನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

(ನ್ಯೂಸ್ ಕಡಬ) newskadaba.com ಕಡಬ, ಎ.12. ಲೋಕಸಭಾ ಚುನಾವಣಾ ಕಾವು ಜೋರಾಗಿರುವಂತೆಯೇ ಪಕ್ಷಾಂತರ ಪರ್ವವೂ ಜೋರಾಗತೊಡಗಿದೆ. ವಿವಿಧ ಪಕ್ಷಗಳ ಮುಖಂಡರಲ್ಲದೆ ಕಾರ್ಯಕರ್ತರೂ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕಡಬ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ರವರ ಬೂತ್ ನ ಹಲವು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರದಂದು ಬಿಜೆಪಿಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷವು ಜನತೆಗೆ ಮೋಸ ಮಾಡುತ್ತಿದ್ದು, ದೇಶ ರಕ್ಷಣೆ ಮಾಡುವ ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ ಕಡಬ ಪರಿಸರದ ಮೂವತ್ತಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿಗೆ ಅಧಿಕೃತವಾಗಿ

ಕಡಬ ಜಿ.ಪಂ.ಸದಸ್ಯರ ಬೂತ್ ನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ Read More »

ಕರಾವಳಿ

ಮುಸ್ಲಿಂ ಮನೆಗಳಲ್ಲಿ ಬಿಜೆಪಿ ಪಕ್ಷದ ಮತ ಯಾಚನೆಯ ವೀಡಿಯೋ ಬಗ್ಗೆ ಈಗಾಗಲೇ ಕ್ಷಮೆ ಕೇಳಲಾಗಿದೆ ➤ ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವವರ ವಿರುದ್ಧ ಕಡಬ ಬಿಜೆಪಿಯಿಂದ ಕಾನೂನು ಕ್ರಮದ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ಎ.12. ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಕಾರ್ಯಕರ್ತರು ಕಡಬದ ಕೊರುಂದೂರು ಪರಿಸರದ ಕೆಲವು ಮುಸ್ಲಿಂ ಸಮುದಾಯದ ಮನೆಗಳಲ್ಲಿ ಮತ ಯಾಚಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಭೆ ಸೇರಿದ ಬಿಜೆಪಿ ಪ್ರಮುಖರು ಸಂಬಂಧಪಟ್ಟವರಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿ ಪ್ರಕರಣವನ್ನು ಮುಗಿಸಿದ್ದು, ಇನ್ಮುಂದೆ ಅದೇ ದೃಶ್ಯವನ್ನು ಪಸರಿಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಡಬದ ಬಿಜೆಪಿ ಧುರೀಣ ಸತೀಶ್

ಮುಸ್ಲಿಂ ಮನೆಗಳಲ್ಲಿ ಬಿಜೆಪಿ ಪಕ್ಷದ ಮತ ಯಾಚನೆಯ ವೀಡಿಯೋ ಬಗ್ಗೆ ಈಗಾಗಲೇ ಕ್ಷಮೆ ಕೇಳಲಾಗಿದೆ ➤ ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವವರ ವಿರುದ್ಧ ಕಡಬ ಬಿಜೆಪಿಯಿಂದ ಕಾನೂನು ಕ್ರಮದ ಎಚ್ಚರಿಕೆ Read More »

ಕರಾವಳಿ

ಕಡಬದ ಮುಸ್ಲಿಂ ಮನೆಗಳಲ್ಲಿ ಬಿಜೆಪಿ ಮತ ಯಾಚನೆಯ ವೀಡಿಯೋ ವೈರಲ್ ➤ ಬಿಜೆಪಿ ಪಕ್ಷದ ಮುಖಂಡರಿಂದ ಸಾರ್ವಜನಿಕ ಕ್ಷಮೆ ಯಾಚನೆ

(ನ್ಯೂಸ್ ಕಡಬ) newskadaba.com ಕಡಬ, ಎ.10. ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಕಾರ್ಯಕರ್ತರು ಕಡಬದ ಕೊರುಂದೂರು ಪರಿಸರದ ಕೆಲವು ಮುಸ್ಲಿಂ ಸಮುದಾಯದ ಮನೆಗಳಲ್ಲಿ ಮತ ಯಾಚಿಸುವುದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದರಿಂದ ಅದೀಗ ವೈರಲ್ ಆಗಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಡಬದ ಬಿಜೆಪಿ ಧುರೀಣ ಸತೀಶ್ ನಾಯಕ್, ಆದಂ ಕುಂಡೋಳಿ, ಪುತ್ತು ಮೇಸ್ತ್ರಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದು, ಕಡಬದ ಕೊರುಂದೂರು ಪರಿಸರದ ಮುಸ್ಲಿಂ ಸಮುದಾಯದ ಮನೆಗಳಿಗೆ

ಕಡಬದ ಮುಸ್ಲಿಂ ಮನೆಗಳಲ್ಲಿ ಬಿಜೆಪಿ ಮತ ಯಾಚನೆಯ ವೀಡಿಯೋ ವೈರಲ್ ➤ ಬಿಜೆಪಿ ಪಕ್ಷದ ಮುಖಂಡರಿಂದ ಸಾರ್ವಜನಿಕ ಕ್ಷಮೆ ಯಾಚನೆ Read More »

ಕರಾವಳಿ

ಸುಬ್ರಹ್ಮಣ್ಯ: ಕುಮಾರಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಎ.09. ಇಲ್ಲಿನ ಕುಮಾರಧಾರ ನದಿಯಲ್ಲಿ ಅಪರಿಚಿತ ಮಹಿಳೆಯರೋರ್ವರ ಮೃತದೇಹವೊಂದು ತೇಲುತ್ತಿದ್ದ ಸ್ಥಿತಿಯಲ್ಲಿ ಮಂಗಳವಾರದಂದು ಪತ್ತೆಯಾಗಿದ್ದು, ಸುಬ್ರಹ್ಮಣ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಂದು ಮಧ್ಯಾಹ್ನ ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಕಂಡು ಸಾರ್ವಜನಿಕರು ತಕ್ಷಣ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸುಬ್ರಹ್ಮಣ್ಯ ಪೊಲೀಸರು ನೀರಿನಲ್ಲಿ ತೇಲುತ್ತಿದ್ದ ಮೃತದೇಹವನ್ನು ಮೇಲಕ್ಕೆತ್ತಿದ್ದು, ಪತ್ತೆ ಕಾರ್ಯ ಮುಂದುವರಿಸಿದ್ದಾರೆ. ಮಹಿಳೆಗೆ ಸುಮಾರು 45 ವರ್ಷ ಪ್ರಾಯವಾಗಿರಬಹುದೆಂದು ಅಂದಾಜಿಸಲಾಗಿದ್ದು, ಕೊಲೆಯೋ ಆತ್ಮಹತ್ಯೆಯೋ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

ಸುಬ್ರಹ್ಮಣ್ಯ: ಕುಮಾರಧಾರಾ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ Read More »

ಕರಾವಳಿ

ಬಂಟ್ವಾಳ: ಕಾರು – ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಸಹೋದರಿಯರಿಬ್ಬರು ಮೃತ್ಯು, ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಎ.8. ಕಾರು ಮತ್ತು ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿಯಾಗಿ ರಿಕ್ಷಾದಲ್ಲಿದ್ದ ಸಹೋದರಿಯರಿಬ್ಬರು ಮೃತಪಟ್ಟ ದಾರುಣ ಘಟನೆ ಸೋಮವಾರದಂದು ಬಂಟ್ವಾಳ ಸಮೀಪದ ಸಜೀಪ ಎಂಬಲ್ಲಿ ಸಂಭವಿಸಿದೆ. ಮೃತ ಮಹಿಳೆಯರನ್ನು ಮಂಚಿ ನಿವಾಸಿಗಳಾದ ಝೊಹರಾ(55) ಹಾಗೂ ಝೈನಬಾ(45) ಎಂದು ಗುರುತಿಸಲಾಗಿದೆ. ಝೊಹರಾರಿಗೆ ಅಸೌಖ್ಯವಿದ್ದ ಹಿನ್ನೆಲೆಯಲ್ಲಿ ಸಹೋದರಿ ಝೈನಬಾರವರ ಜೊತೆ ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಸಜೀಪ ಸಮೀಪದ ಕಂಚಿಲ ಎಂಬಲ್ಲಿ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಾರೊಂದು ಅತೀ ವೇಗವಾಗಿ ಬಂದು

ಬಂಟ್ವಾಳ: ಕಾರು – ಆಟೋ ರಿಕ್ಷಾ ನಡುವೆ ಢಿಕ್ಕಿ ➤ ಸಹೋದರಿಯರಿಬ್ಬರು ಮೃತ್ಯು, ಇಬ್ಬರು ಗಂಭೀರ Read More »

ಕರಾವಳಿ

ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆಯವರಿಗೆ ಸುಳ್ಯಕ್ಕೆ ವರ್ಗಾವಣೆ ➤ ನೂತನ ಕಂದಾಯ ನಿರೀಕ್ಷಕರಾಗಿ ಅವಿನ್ ರಂಗತಮಲೆ

(ನ್ಯೂಸ್ ಕಡಬ) newskadaba.com ಕಡಬ, ಎ.08. ಕಡಬದಲ್ಲಿ ಕಂದಾಯ ನಿರೀಕ್ಷಕರಾಗಿದ್ದ ಕೊರಗಪ್ಪ ಹೆಗ್ಡೆಯವರನ್ನು ಸುಳ್ಯಕ್ಕೆ ವರ್ಗಾಯಿಸಲಾಗಿದ್ದು, ಕಡಬದ ನೂತನ ಕಂದಾಯ ನಿರೀಕ್ಷಕರಾಗಿ ಅವಿನ್ ರಂಗತ್ತಮಲೆಯವರನ್ನು ನೇಮಕಗೊಳಿಸಲಾಗಿದೆ. ಕಡಬ ಕಂದಾಯ ನಿರೀಕ್ಷಕರಾಗಿದ್ದ ಕೊರಗಪ್ಪ ಹೆಗ್ಡೆಯವರು ರಜೆಯಲ್ಲಿದ್ದು, ಅವರ ಸ್ಥಾನಕ್ಕೆ ಕಳೆದ ಮೂರು ವರ್ಷಗಳಿಂದ ಸುಳ್ಯದಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಿನ್ ರಂಗಮಲೆಯವರನ್ನು ವರ್ಗಾಯಿಸಲಾಗಿದೆ. ಕೊರಗಪ್ಪ ಹೆಗ್ಡೆಯವರು ಕರ್ತವ್ಯಕ್ಕೆ ಹಾಜರಾಗುವವರೆಗೆ ಪಂಜ ಹೋಬಳಿ ಕಂದಾಯ ನಿರೀಕ್ಷಕ ದೀಪಕ್‌ರವರು ಸುಳ್ಯದಲ್ಲಿ ಚಾರ್ಜ್ ನಲ್ಲಿರುತ್ತಾರೆ.

ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆಯವರಿಗೆ ಸುಳ್ಯಕ್ಕೆ ವರ್ಗಾವಣೆ ➤ ನೂತನ ಕಂದಾಯ ನಿರೀಕ್ಷಕರಾಗಿ ಅವಿನ್ ರಂಗತಮಲೆ Read More »

ಕರಾವಳಿ

ನಾಳೆ ಕಡಬದಲ್ಲಿ ಉಚಿತ ಮಧುಮೇಹ ಚಿಕಿತ್ಸಾ ಶಿಬಿರ ➤ ಜೇಸಿಐ ಕಡಬ ಕದಂಬ ಮತ್ತು ನಾಡೋಳಿ ಡಯಗ್ನಾಸ್ಟಿಕ್ ಸಹಯೋಗ

(ನ್ಯೂಸ್ ಕಡಬ) newskadaba.com ಕಡಬ, ಎ.06. ಜೇಸಿಐ ಕಡಬ ಕದಂಬ ಘಟಕ, ಅನುಯಾಶ್ ಆರೋಗ್ಯ ಸಂಸ್ಥೆ ಮತ್ತು ನಾಡೋಳಿ ಡಯಗ್ನಾಸ್ಟಿಕ್ ಸೆಂಟರ್ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ದಿನಾಚರಣೆಯ ಪ್ರಯುಕ್ತ ಏಪ್ರಿಲ್ 7 ಭಾನುವಾರದಂದು ಕಡಬದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಲಿದೆ. ಕಡಬದ ನಾಡೋಳಿ ಡಯಗ್ನಾಸ್ಟಿಕ್ ಬೆಳಗ್ಗೆ 08 ರಿಂದ 12ರ ವರೆಗೆ ಉಚಿತ ಶಿಬಿರ ನಡೆಯಲಿದೆ ಎಂದು ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ Jc. HGF. ರವಿಚಂದ್ರ ಪಡಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ ಕಡಬದಲ್ಲಿ ಉಚಿತ ಮಧುಮೇಹ ಚಿಕಿತ್ಸಾ ಶಿಬಿರ ➤ ಜೇಸಿಐ ಕಡಬ ಕದಂಬ ಮತ್ತು ನಾಡೋಳಿ ಡಯಗ್ನಾಸ್ಟಿಕ್ ಸಹಯೋಗ Read More »

ಕರಾವಳಿ

ನಾಳೆ ನೆಲ್ಯಾಡಿ ಜ್ಞಾನೋದಯ ಬೆಥನಿಯಲ್ಲಿ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ➤ ರಾಪಿಡ್ ಚೆಸ್ ಟೂರ್ನಮೆಂಟ್ – 2019

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಎ.06. ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ‘ರ್ಯಾಪಿಡ್ ಚೆಸ್ ಟೂರ್ನಮೆಂಟ್ – 2019’ ಉಬಾರ್ ಚೆಸ್ ಅಕಾಡೆಮಿಯ ಸಹಕಾರದೊಂದಿಗೆ ಎಪ್ರಿಲ್ 07 ಭಾನುವಾರದಂದು ನೆಲ್ಯಾಡಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿನಲ್ಲಿ ನಡೆಯಲಿದೆ. 7, 9, 11, 13 ಮತ್ತು 16 ವರ್ಷ ವಯೋಮಾನದ ವಿವಿಧ ಹಂತಗಳಲ್ಲಿ ಮತ್ತು ಮುಕ್ತವಾಗಿ ಪಂದ್ಯವನ್ನು ನಡೆಸಲಾಗುವುದು. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9008857064, 9620469172, 7996939154, 9731771990 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಾಂಶುಪಾಲರಾದ

ನಾಳೆ ನೆಲ್ಯಾಡಿ ಜ್ಞಾನೋದಯ ಬೆಥನಿಯಲ್ಲಿ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ➤ ರಾಪಿಡ್ ಚೆಸ್ ಟೂರ್ನಮೆಂಟ್ – 2019 Read More »

ಕ್ರೀಡಾ ನ್ಯೂಸ್

ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರ ಸಭೆ ➤ ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಸುಳ್ಯಕ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಎ.06. ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರವಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಹೇಳಿದರು. ಶನಿವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಪ್ರಿಲ್ 07 ರಂದು ಸಂಜೆ ಆಗಮಿಸಲಿರುವ ಸಿಎಂ ಕುಮಾರಸ್ವಾಮಿ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ. ಸಚಿವ ಯು.ಟಿ.ಖಾದರ್,

ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರ ಸಭೆ ➤ ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಸುಳ್ಯಕ್ಕೆ Read More »

ಕರ್ನಾಟಕ
Scroll to Top