ನಾಗರ ಪಂಚಮಿ: ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಲು ಸೂಚನೆ

(ನ್ಯೂಸ್ ಕಡಬ) newskadaba.com ಆ. 15.  ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಪ್ರಸಕ್ತ ಸಾಲಿನಲ್ಲಿ ನಾಗರ ಪಂಚಮಿ ಹಬ್ಬವನ್ನು “ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಾಗರ ಪಂಚಮಿ ಹಬ್ಬ”ವನ್ನಾಗಿ ಆಚರಣೆ ಮಾಡುವ ಮೂಲಕ ಪರಿಸರವನ್ನು ರಕ್ಷಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ಹಬ್ಬದಲ್ಲಿ ನಿಷೇಧಿತ / ಏಕ ಬಳಕೆ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಕೈಬಿಟ್ಟು, ಬಟ್ಟೆ ಚೀಲಗಳು, ಬಾಳೆ ಎಲೆಗಳು, ಮತ್ತು ಸ್ಟೀಲ್ ಪಾತ್ರೆಗಳನ್ನು ಇತ್ಯಾದಿ ಪರ್ಯಾಯವಾಗಿ ಮರುಬಳಕೆಯಾಗುವ ವಸ್ತುಗಳನ್ನು ಬಳಸುವ […]

ನಾಗರ ಪಂಚಮಿ: ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಲು ಸೂಚನೆ Read More »

ಕರಾವಳಿ

ಗುಟ್ಕಾ, ಪಾನ್ ಮಸಾಲಾ ನಿಷೇಧ ಆದೇಶ ಹಿಂಪಡೆಯಲು ಸಿಎಂ ಸೂಚನೆ

(ನ್ಯೂಸ್‌ ಕಡಬ) newskadaba.com,  ಆ.14 : ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು 1 ವರ್ಷದ ಅವಧಿಗೆ ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಅಧಿಸೂಚನೆ ಹೊರಡಿಸಿದ್ದರು. ಈ ನಿರ್ಧಾರಕ್ಕೆ ಕಾಂಗ್ರೆಸ್ ಶಾಸಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ನಿಷೇಧದಿಂದ ಏಳೆಂಟು ಜಿಲ್ಲೆಗಳ ಅಡಿಕೆ ಬೆಳೆಗಾರರ ಮೇಲೆ ತೀವ್ರ ಸೌಲಭ್ಯ/ಆರ್ಥಿಕ ಪರಿಣಾಮ ಬೀರಲಿದೆ ಎಂದು ಹಿರಿಯ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಗುಟ್ಕಾ, ಪಾನ್ ಮಸಾಲಾ ನಿಷೇಧ ಆದೇಶ ಹಿಂಪಡೆಯಲು ಸಿಎಂ ಸೂಚನೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹಾಸ್ಟೆಲ್‌–ಪಿಜಿಗಳ ಕಳಪೆ ಆಹಾರಕ್ಕೆ ಬ್ರೇಕ್‌: ಯು.ಟಿ. ಖಾದರ್‌ ಖಡಕ್‌ ವಾರ್ನಿಂಗ್!

(ನ್ಯೂಸ್‌ ಕಡಬ) newskadaba.com,  ಆ.14 ಬೆಂಗಳೂರು: ಹೋಟೆಲ್‌ಗಳಲ್ಲಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದ ಬೆನ್ನಲ್ಲೇ, ಇದೀಗ ರಾಜ್ಯದ ಹಾಸ್ಟೆಲ್‌ಗಳು, ಪಿಜಿ ಹಾಗೂ ಕ್ಯಾಂಟೀನ್‌ಗಳ ಮೇಲೆಯೂ ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದೆ. ಕಳಪೆ ಹಾಗೂ ಅಶುಚಿತ್ವದ ಆಹಾರ ಪೂರೈಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಎಚ್ಚರಿಸಿದ್ದಾರೆ. ಸರ್ಕಾರಿ, ಖಾಸಗಿ ಹಾಗೂ ಸಹಕಾರಿ ಹಾಸ್ಟೆಲ್‌ಗಳು, ಪಿಜಿಗಳು ಮತ್ತು ಸಾರ್ವಜನಿಕ ಕ್ಯಾಂಟೀನ್‌ಗಳಲ್ಲಿ ಆಹಾರ ತಯಾರಿಕೆ ಹಾಗೂ ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ

ಹಾಸ್ಟೆಲ್‌–ಪಿಜಿಗಳ ಕಳಪೆ ಆಹಾರಕ್ಕೆ ಬ್ರೇಕ್‌: ಯು.ಟಿ. ಖಾದರ್‌ ಖಡಕ್‌ ವಾರ್ನಿಂಗ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಏರ್ ಇಂಡಿಯಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಪರೀಕ್ಷೆ ಕಡ್ಡಾಯ

(ನ್ಯೂಸ್‌ ಕಡಬ) newskadaba.com,  ಆ.14 : ಪ್ರಯಾಣಿಕರ ಸುರಕ್ಷತೆ ಮತ್ತು ವೈಮಾನಿಕ ಭದ್ರತೆಯ ಹಿತದೃಷ್ಟಿಯಿಂದ ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಮ್ಮ ಎಲ್ಲಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಸೇವನೆ (ಡ್ರಗ್ಸ್) ಪರೀಕ್ಷೆಯನ್ನು ಕಡ್ಡಾಯಗೊಳಿಸಿವೆ. ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ A320neo ವಿಮಾನ ಹಾರಾಟದ ಮಧ್ಯೆ ಇದ್ದಕ್ಕಿದ್ದಂತೆ 300 ಅಡಿ ಕೆಳಕ್ಕೆ ಕುಸಿದಿತ್ತು. ತನಿಖೆ ವೇಳೆ ವಿಮಾನದ ಮುಖ್ಯ ಕ್ಯಾಪ್ಟನ್ ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು.ಈ ಘಟನೆಯ ಬೆನ್ನಲ್ಲೇ ಆಡಳಿತ ಮಂಡಳಿಯು ಜಾಗೃತರಾಗಿದ್ದು, ಆಗಸ್ಟ್

ಏರ್ ಇಂಡಿಯಾ ಪೈಲಟ್‌ಗಳಿಗೆ ಮಾದಕ ದ್ರವ್ಯ ಪರೀಕ್ಷೆ ಕಡ್ಡಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಪೊಲೀಸ್ ಚಾಟಿ; ₹6 ಲಕ್ಷಕ್ಕೂ ಅಧಿಕ ದಂಡ ವಸೂಲಿ!

(ನ್ಯೂಸ್‌ ಕಡಬ) newskadaba.com,  ಆ.14 ಮಂಗಳೂರು: ನಗರದಲ್ಲಿ ಸುಗಮ ವಾಹನ ಸಂಚಾರ, ಪಾದಚಾರಿಗಳ ಸುರಕ್ಷತೆ ಹಾಗೂ ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಜೂನ್ 2026 ರಿಂದ ಇದುವರೆಗೆ ನೋ ಪಾರ್ಕಿಂಗ್, ಫುಟ್‌ಪಾತ್ ಪಾರ್ಕಿಂಗ್, ಡಬಲ್ ಪಾರ್ಕಿಂಗ್ ಸೇರಿದಂತೆ ಒಟ್ಟು 7,490 ಪ್ರಕರಣಗಳು ದಾಖಲಾಗಿದ್ದು, ₹3,07,600 ದಂಡ ವಸೂಲಿ ಮಾಡಲಾಗಿದೆ (ಇದರಲ್ಲಿ 1,080 ಫುಟ್‌ಪಾತ್ ಪಾರ್ಕಿಂಗ್ ಪ್ರಕರಣಗಳು ಸೇರಿವೆ). ನಂಬರ್ ಪ್ಲೇಟ್ ಕಾರ್ಯಾಚರಣೆ (ಆಗಸ್ಟ್ 04 –

ಮಂಗಳೂರು: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಪೊಲೀಸ್ ಚಾಟಿ; ₹6 ಲಕ್ಷಕ್ಕೂ ಅಧಿಕ ದಂಡ ವಸೂಲಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯ

(ನ್ಯೂಸ್‌ ಕಡಬ) newskadaba.com, ಆ.13 ಸಾಮಾನ್ಯ ವಿಷಯ, ಕಂಪ್ಯೂಟರ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-2).ಆನ್‌ಲೈನ್ ಮೂಲಕವೇ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಭರ್ತಿ ಮಾಡುವಾಗ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ.ಪರೀಕ್ಷೆಯು ‘ವಸ್ತುವಿಷಯ ಮಾದರಿ’ಯಲ್ಲಿದ್ದು, ಉತ್ತರಗಳನ್ನು OMR ಶೀಟ್‌ನಲ್ಲಿ ಗುರುತಿಸಬೇಕು. ಅರ್ಜಿ ಸಲ್ಲಿಕೆ ಆರಂಭ ವಾದ ದಿನಾಂಕ ಆಗಸ್ಟ್ 18 , ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 07 ,ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ ಅಕ್ಟೋಬರ್ 05 ಮತ್ತು 06..

ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಪ್ರೀತಿಸುವಂತೆ ಒತ್ತಾಯಿಸಿ ವಿದ್ಯಾರ್ಥಿನಿಗೆ ಕಿರುಕುಳ – ಯುವಕನ ವಿರುದ್ಧ ಪ್ರಕರಣ

(ನ್ಯೂಸ್‌ ಕಡಬ) newskadaba.com,  ಆ.13 :ಕಡಬ ತಾಲೂಕಿನ ಚಾರ್ವಾಕದಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಾಯಿಸಿ ನಿರಂತರವಾಗಿ ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಪದ್ಮನಾಭ ಎಂಬಾತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯನ್ನು ಹಿಂಬಾಲಿಸುವುದಲ್ಲದೆ, ಆಕೆಯ ಕುಟುಂಬಸ್ಥರಿಗೆ ಹಾಗೂ ಸಹಪಾಠಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಆಗಸ್ಟ್ 11ರಂದು ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ BNS 2023ರ ಕಲಂ 78(2) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು

ಕಡಬ: ಪ್ರೀತಿಸುವಂತೆ ಒತ್ತಾಯಿಸಿ ವಿದ್ಯಾರ್ಥಿನಿಗೆ ಕಿರುಕುಳ – ಯುವಕನ ವಿರುದ್ಧ ಪ್ರಕರಣ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಒಂದೇ ದಿನದ ಅಂತರದಲ್ಲಿ ಹಸೆಗೆರೆಯಬೇಕಿದ್ದ ಯುವ ಜೋಡಿ ಆತ್ಮಹತ್ಯೆಗೆ ಶರಣು! ಭಾವಿ ಪತ್ನಿಯ ಸಾವು ತಾಳಲಾರದೆ ಯುವಕನೂ ಆತ್ಮಹತ್ಯೆ

(ನ್ಯೂಸ್‌ ಕಡಬ) newskadaba.com,  ಆ.13 : ಮದುವೆಯ ಸಂಭ್ರಮಕ್ಕೆ ಸಿದ್ಧವಾಗಬೇಕಿದ್ದ ಯುವ ಜೋಡಿಯ ಬದುಕು ದುರಂತದಲ್ಲಿ ಅಂತ್ಯಗೊಂಡಿದೆ. ಎಸ್‌ಬಿಐ ಉದ್ಯೋಗಿಯಾಗಿದ್ದ ಯುವತಿ ಅನುಶ್ರೀ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಆಕೆಯ ಭಾವಿ ಪತಿ ಅಮಲ್ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅನುಶ್ರೀ ಹುಣಸೂರಿನ ಎಸ್‌ಬಿಐ ಶಾಖೆಯಲ್ಲಿ, ಅಮಲ್ ಎರ್ನಾಕುಳಂನ ಎಸ್‌ಬಿಐ ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮುಂದಿನ ವರ್ಷ ಡಿಸೆಂಬರ್ 26ರಂದು ಇವರ ವಿವಾಹ ನಿಗದಿಯಾಗಿತ್ತು.ಮಂಗಳವಾರ ಹುಣಸೂರಿನಲ್ಲಿದ್ದ ಅನುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸುದ್ದಿ ತಿಳಿದ

ಒಂದೇ ದಿನದ ಅಂತರದಲ್ಲಿ ಹಸೆಗೆರೆಯಬೇಕಿದ್ದ ಯುವ ಜೋಡಿ ಆತ್ಮಹತ್ಯೆಗೆ ಶರಣು! ಭಾವಿ ಪತ್ನಿಯ ಸಾವು ತಾಳಲಾರದೆ ಯುವಕನೂ ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಬೆಳ್ಳಿ ದರ ಸ್ಥಿರ!

(ನ್ಯೂಸ್‌ ಕಡಬ) newskadaba.com,  ಆ.13: 22 ಕ್ಯಾರಟ್ ಚಿನ್ನದಲ್ಲಿ 1 ಗ್ರಾಂ ಚಿನ್ನದ ದರದಲ್ಲಿ 25 ರೂ. ಏರಿಕೆಯಾಗಿ 14,220 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ 1,42,200 ರೂ. ಹಾಗೂ 100 ಗ್ರಾಂಗೆ 14,22,000 ರೂ. ತಲುಪಿದೆ. 24 ಕ್ಯಾರಟ್ ಚಿನ್ನದಲ್ಲಿ  1 ಗ್ರಾಂಗೆ 27 ರೂ. ಹೆಚ್ಚಳವಾಗಿದ್ದು, ಪ್ರಸ್ತುತ ಬೆಲೆ 15,513 ರೂ. ಆಗಿದೆ. 10 ಗ್ರಾಂ ಅಪರಂಜಿ ಚಿನ್ನದ ದರ 1,55,130 ರೂ. ಹಾಗೂ 100 ಗ್ರಾಂಗೆ 15,51,300 ರೂ. ನಿಗದಿಯಾಗಿದೆ.

ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಬೆಳ್ಳಿ ದರ ಸ್ಥಿರ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಗಸ್ಟ್ 13ರಿಂದ 15ರವರೆಗೆ- ಎಲ್ಲಾ ನಾಗರಿಕರು ರಾಷ್ಟ್ರದ್ವಜ ಹಾರಿಸಲು ಮೋದಿ ಕರೆ

(ನ್ಯೂಸ್‌ ಕಡಬ) newskadaba.com,  ಆ.13 ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕರೆಯಂತೆ 80ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರ ತನಕ ಎಲ್ಲಾ ನಾಗರಿಕರು ನಮ್ಮ ನಮ್ಮ ಮನೆಗಳಲ್ಲಿ, ವಾಣಿಜ್ಯ ಕಟ್ಟಡಗಳಲ್ಲಿ ರಾಷ್ಟ್ರದ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯದ ಸಂಭ್ರಮವನ್ನು ಹಂಚಿಕೊಳ್ಳಬೇಕಾಗಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ವಿನಂತಿಸಿಕೊಂಡಿದ್ದಾರೆ.   ಈ ದೇಶದ ಸ್ವಾತಂತ್ರ್ಯ ಕ್ಕೋಸ್ಕರ ಸಾವಿರಾರು ಜನ ಬಲಿದಾನ ಮಾಡಿದ್ದಾರೆ. ಗಳಿಸಿಕೊಂಡ ಸ್ವಾತಂತ್ರ್ಯ ವನ್ನು

ಆಗಸ್ಟ್ 13ರಿಂದ 15ರವರೆಗೆ- ಎಲ್ಲಾ ನಾಗರಿಕರು ರಾಷ್ಟ್ರದ್ವಜ ಹಾರಿಸಲು ಮೋದಿ ಕರೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top