ವಿಶ್ವಸಂಸ್ಥೆಯಲ್ಲಿ ಹೊಸ ‘ಈಕ್ವಲ್ ಅರ್ಥ್’ ಭೂಪಟ ಅಂಗೀಕಾರ: ಭಾರತ ಬೆಂಬಲ, ಅಮೆರಿಕ ವಿರೋಧ



(ನ್ಯೂಸ್‌ ಕಡಬ) newskadaba.com, ಸೆ.05. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ‘ಈಕ್ವಲ್ ಅರ್ಥ್ ಪ್ರೊಜೆಕ್ಷನ್’ ಎಂಬ ನೂತನ ಭೂಪಟವನ್ನು ಅಳವಡಿಸಿಕೊಳ್ಳಲು ನಿರ್ಣಯ ಅಂಗೀಕರಿಸಿದೆ.ನಿರ್ಣಯದ ಪರವಾಗಿ ಭಾರತ ಸೇರಿದಂತೆ 164 ದೇಶಗಳು ಮತ ಚಲಾಯಿಸಿದರೆ, ಅಮೆರಿಕ ಮಾತ್ರ ವಿರುದ್ಧವಾಗಿ ಮತ ಹಾಕಿತು. 6 ದೇಶಗಳು ಮತದಾನದಿಂದ ದೂರ ಉಳಿದವು.







1569ರ ‘ಮೆರ್ಕೆಟರ್ ಪ್ರೊಜೆಕ್ಷನ್’ ಭೂಮಿಯ ನಿಜವಾದ ವಿಸ್ತೀರ್ಣಕ್ಕಿಂತ ಉತ್ತರ ಅಮೆರಿಕ ಹಾಗೂ ಯುರೋಪ್ ಖಂಡಗಳನ್ನು ದೊಡ್ಡದಾಗಿ ತೋರಿಸುತ್ತಿತ್ತು.ಹಳೆಯ ನಕ್ಷೆಯಲ್ಲಿ ಗ್ರೀನ್‌ಲ್ಯಾಂಡ್ ಮತ್ತು ಆಫ್ರಿಕಾ ಒಂದೇ ಗಾತ್ರದಲ್ಲಿ ಕಾಣಿಸುತ್ತಿದ್ದವು. ಆದರೆ ನೈಜವಾಗಿ ಆಫ್ರಿಕಾ ಗ್ರೀನ್‌ಲ್ಯಾಂಡ್‌ಗಿಂತ 14 ಪಟ್ಟು ದೊಡ್ಡದಾಗಿದೆ.






ಖಂಡಗಳ ನೈಜ ಗಾತ್ರ ಮತ್ತು ವಿಸ್ತೀರ್ಣವನ್ನು ನಿಖರವಾಗಿ ಬಿಂಬಿಸಲು ಈ ಬದಲಾವಣೆ ಅಗತ್ಯ ಎಂದು ಭಾರತ ಬೆಂಬಲಿಸಿದೆ.ವಿಶ್ವದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿರುವಾಗ 16ನೇ ಶತಮಾನದ ನಕ್ಷೆಯ ಬಗ್ಗೆ ಚರ್ಚಿಸುವುದು ಅನಗತ್ಯ ಎಂದು ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ.ಫ್ರಾನ್ಸ್ ತಕ್ಷಣವೇ ಹಳೆಯ ನಕ್ಷೆಯ ಬಳಕೆಯನ್ನು ಕೈಬಿಡಲು ನಿರ್ಧರಿಸಿದೆ.

error: Content is protected !!
Scroll to Top