ಬೆಳ್ತಂಗಡಿ: ಕೊಕ್ಕಡ ಬಳಿ ಕಾರು-ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com, ಸೆ. 12. ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹಲವರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಕ್ಕಡ ಸಮೀಪ ಶನಿವಾರ ಸಂಭವಿಸಿದೆ. ಧರ್ಮಸ್ಥಳದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕಾರು ಹಾಗೂ ಸುಬ್ರಹ್ಮಣ್ಯದಿಂದ ಧರ್ಮಸ್ಥಳದತ್ತ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಈ ಅಪಘಾತ ಸಂಭವಿಸಿದೆ. ಕ್ಕಿಯ ರಭಸಕ್ಕೆ ಬಸ್ ಮತ್ತು ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಹಾಗೂ ಕಾರಿನಲ್ಲಿದ್ದ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ […]

ಬೆಳ್ತಂಗಡಿ: ಕೊಕ್ಕಡ ಬಳಿ ಕಾರು-ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ Read More »

ಕರಾವಳಿ

ಕಟಪಾಡಿ ಅಂಡರ್‌ಪಾಸ್ ಬಳಿ ಮೀನು ತುಂಬಿದ ಲಾರಿ ಪಲ್ಟಿ

(ನ್ಯೂಸ್‌ ಕಡಬ) newskadaba.com, ಸೆ. 12. ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಟಪಾಡಿ ಅಂಡರ್‌ಪಾಸ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಶನಿವಾರ ಮುಂಜಾನೆ ಮೀನು ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಯು ಉಡುಪಿಯಿಂದ ಮಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅಂಡರ್‌ಪಾಸ್ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸ್ಥಳದಲ್ಲಿ ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕಾಗಿ ಪರ್ಯಾಯ ರಸ್ತೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಚಾಲಕನು ಕಾಮಗಾರಿ ಪ್ರದೇಶದ ಬಳಿ ಅಳವಡಿಸಲಾಗಿದ್ದ ಎಚ್ಚರಿಕೆ ಹಾಗೂ ಸೂಚನಾ ಫಲಕಗಳನ್ನು ಗಮನಿಸದೇ, ಪರ್ಯಾಯ

ಕಟಪಾಡಿ ಅಂಡರ್‌ಪಾಸ್ ಬಳಿ ಮೀನು ತುಂಬಿದ ಲಾರಿ ಪಲ್ಟಿ Read More »

ಕರಾವಳಿ

ಯುಪಿಐ ಬಳಕೆದಾರರಿಗೆ ಆರ್‌ಬಿಐ ನಿಂದ ಸಿಹಿ ಸುದ್ದಿ

(ನ್ಯೂಸ್‌ ಕಡಬ) newskadaba.com, ಸೆ. 12. ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ ಬಳಕೆದಾರರಿಗಾಗಿ ಮುಂಬೈನಲ್ಲಿ ನಡೆದ Global Fintech Fest 2026 ರಲ್ಲಿ ಎರಡು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಆಫ್‌ಲೈನ್ ಪಾವತಿ ಹಾಗೂ ಸುಲಭ ಬೆಂಬಲ ಸೇವೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಮೊಬೈಲ್‌ನಲ್ಲಿ ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಸ್ಮಾರ್ಟ್‌ಫೋನ್ ಅನ್‌ಲಾಕ್ ಮಾಡಿ POS (Point of Sale) ಸ್ಕ್ಯಾನರ್ ಮೇಲೆ ಟ್ಯಾಪ್ ಮಾಡುವ ಮೂಲಕ ಸರಳವಾಗಿ ಪಾವತಿ ಮಾಡಬಹುದು.NPCI ಅಭಿವೃದ್ಧಿಪಡಿಸಿದ ಸಣ್ಣ ಭಾಷಾ ಮಾದರಿ ಆಧಾರಿತ ಸಹಾಯ

ಯುಪಿಐ ಬಳಕೆದಾರರಿಗೆ ಆರ್‌ಬಿಐ ನಿಂದ ಸಿಹಿ ಸುದ್ದಿ Read More »

ಕರಾವಳಿ

ಗಣೇಶ ವಿಗ್ರಹ ವಿಸರ್ಜನೆ ವೇಳೆ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿ ಡಿಸಿ ಆದೇಶ

(ನ್ಯೂಸ್‌ ಕಡಬ) newskadaba.com, ಸೆ. 12. ಗಣೇಶೋತ್ಸವ ಹಾಗೂ ವಿಗ್ರಹ ವಿಸರ್ಜನಾ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಕಾನೂನು ಪಾಲನೆಯ ದೃಷ್ಟಿಯಿಂದ ಸೆ.14, 16 ಮತ್ತು 18ರಂದು ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಸ್ವರೂಪ ಆದೇಶ ಹೊರಡಿಸಿದ್ದಾರೆ. ಸೆ.14ರಂದು ಬೆಳಗ್ಗೆ 6ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸೆ.16ರಂದು ಅಪರಾಹ್ನ 2:00 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಉಡುಪಿ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೆ.18ರಂದು

ಗಣೇಶ ವಿಗ್ರಹ ವಿಸರ್ಜನೆ ವೇಳೆ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿ ಡಿಸಿ ಆದೇಶ Read More »

ಕರಾವಳಿ

ಮಂಗಳೂರು ರೈಲ್ವೆ ಪ್ರದೇಶ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆ: ಅಕ್ಟೋಬರ್ 1ರಿಂದ ಅಧಿಕೃತ ಜಾರಿ

(ನ್ಯೂಸ್‌ ಕಡಬ) newskadaba.com, ಸೆ. 12. ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ) ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, 2026ರ ಅಕ್ಟೋಬರ್ 1ರಿಂದ ಇದು ಅಧಿಕೃತವಾಗಿ ಜಾರಿಗೆ ಬರಲಿದೆ. ಸುಗಮ ಆಡಳಿತಾತ್ಮಕ ವರ್ಗಾವಣೆಯ ಹಿನ್ನೆಲೆಯಲ್ಲಿ ಪಾಲಕ್ಕಾಡ್ ಹಾಗೂ ಮೈಸೂರು ವಿಭಾಗಗಳ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಮನ್ವಯ ಸಭೆ ಮಂಗಳೂರಿನಲ್ಲಿ ನಡೆಯಿತು.ರೈಲು ಕಾರ್ಯಾಚರಣೆಯ ನಿಯಂತ್ರಣ ವ್ಯವಸ್ಥೆ, ದಾಖಲೆಗಳು ಹಾಗೂ ಮೂಲಸೌಕರ್ಯ/ಆಸ್ತಿಗಳ ಹಸ್ತಾಂತರದ ಕುರಿತು

ಮಂಗಳೂರು ರೈಲ್ವೆ ಪ್ರದೇಶ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆ: ಅಕ್ಟೋಬರ್ 1ರಿಂದ ಅಧಿಕೃತ ಜಾರಿ Read More »

ಕರಾವಳಿ

ನಕಲಿ ಔಷಧ ಜಾಲ SIT ತನಿಖೆ: ಬೆಂಗಳೂರು ಸೇರಿ ದೇಶದ ಹಲವೆಡೆ ಆಸ್ಪತ್ರೆಗಳಿಗೆ ಫೇಕ್‌ ಮೆಡಿಸನ್ ಪೂರೈಸಿದ ಕಂಪನಿ ಮಾಲೀಕ ಅರೆಸ್ಟ್‌!

(ನ್ಯೂಸ್‌ ಕಡಬ) newskadaba.com, ಸೆ. 12. ನಕಲಿ ಔಷಧಗಳ ತಯಾರಿ ಹಾಗೂ ಮಾರಾಟ ಜಾಲದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು, ವರ್ಷಾನುಗಟ್ಟಲೇ ನಕಲಿ ಔಷಧ ಸರಬರಾಜು ಮಾಡಿದ್ದ ಸರಬರಾಜು ಕಂಪನಿಗಳ ಮೇಲೆ ಶುಕ್ರವಾರ(ಸೆ.11ರಂದು) ದಾಳಿ ನಡೆಸಿದ್ದಾರೆ. ಈ ಜಾಲದ ಪ್ರಧಾನ ಕಿಂಗ್‌ಪಿನ್‌ ಎನ್ನಲಾದ ವೀರೇಶ್‌ ಎಂಬುವನನ್ನು ವಶಕ್ಕೆ ಪಡೆದಿದೆ. ಮಿನರ್ವ ಸರ್ಕಲ್‌ನಲ್ಲಿರುವ ವೀರೇಶ್‌ ಮಾಲೀಕತ್ವದ ಕೃಪಾ ಫಾರ್ಮ ಹಾಗೂ ತೆಲಂಗಾಣ, ಹಿಮಾಚಲಪ್ರದೇಶ, ಹರಿಯಾಣ, ಮಹಾರಾಷ್ಟ್ರ, ತಮಿಳುನಾಡಿನಲ್ಲಿರುವ ವಿವಿಧ ಔಷಧ ಸರಬರಾಜು ಕಂಪನಿಗಳ ಮೇಲೆ ದಾಳಿ

ನಕಲಿ ಔಷಧ ಜಾಲ SIT ತನಿಖೆ: ಬೆಂಗಳೂರು ಸೇರಿ ದೇಶದ ಹಲವೆಡೆ ಆಸ್ಪತ್ರೆಗಳಿಗೆ ಫೇಕ್‌ ಮೆಡಿಸನ್ ಪೂರೈಸಿದ ಕಂಪನಿ ಮಾಲೀಕ ಅರೆಸ್ಟ್‌! Read More »

ಕರಾವಳಿ

ದಕ್ಷಿಣ ಕನ್ನಡ: ಇಂದಿನಿಂದ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ಪೂರ್ಣ ದಿನ ತರಗತಿ — ಶಿಕ್ಷಣ ಇಲಾಖೆ ಆದೇಶ

(ನ್ಯೂಸ್‌ ಕಡಬ) newskadaba.com, ಸೆ. 12. ಮಳೆಯಿಂದಾಗಿ ನಷ್ಟವಾದ ಶೈಕ್ಷಣಿಕ ದಿನಗಳನ್ನು ಸರಿದೂಗಿಸಲು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೆಪ್ಟೆಂಬರ್ 12ರಿಂದ ಪ್ರತಿ ಶನಿವಾರ ಪೂರ್ಣ ದಿನ ತರಗತಿ ನಡೆಸಲು ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಮುಂಗಾರಿನಲ್ಲಿ ನಿರಂತರ ಮಳೆಯಿಂದಾಗಿ ಜಿಲ್ಲಾಡಳಿತವು 10ಕ್ಕೂ ಹೆಚ್ಚು ದಿನ ರಜೆ ನೀಡಿದ್ದರಿಂದ ಪಠ್ಯಕ್ರಮ ಪೂರ್ಣಗೊಳಿಸುವುದು ವಿಳಂಬವಾಗಿತ್ತು.ಅರ್ಧ ದಿನದ ಬದಲಾಗಿ ಪೂರ್ಣ ದಿನದ ತರಗತಿಗಳ ಜೊತೆಗೆ, ಅಗತ್ಯಕ್ಕೆ ತಕ್ಕಂತೆ ವಿಶೇಷ ಪರಿಹಾರ ತರಗತಿಗಳನ್ನು ಆಯೋಜಿಸಲು ಶಾಲೆಗಳಿಗೆ ಸೂಚಿಸಲಾಗಿದೆ.

ದಕ್ಷಿಣ ಕನ್ನಡ: ಇಂದಿನಿಂದ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ಪೂರ್ಣ ದಿನ ತರಗತಿ — ಶಿಕ್ಷಣ ಇಲಾಖೆ ಆದೇಶ Read More »

ಕರಾವಳಿ

ಬೆಳ್ತಂಗಡಿ: ಹೆಬ್ಬಾವನ್ನು ನುಂಗಿದ್ದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ರಕ್ಷಣೆ

(ನ್ಯೂಸ್‌ ಕಡಬ) newskadaba.com, ಸೆ. 12. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಕಡಿಂಗ ನಿವಾಸಿ ಹಿತೇಶ್ ಎಂಬುವರ ತೋಟದಲ್ಲಿ ಸುಮಾರು 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ.ಕುಟುಂಬಸ್ಥರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಲಾಯಿಲದ ಉರಗ ರಕ್ಷಕ ‘ಸ್ನೇಕ್ ಅಶೋಕ್’, ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ರಕ್ಷಣೆಯ ಸಮಯದಲ್ಲಿ ಕಾಳಿಂಗ ಸರ್ಪವು ತಾನು ನುಂಗಿದ್ದ ಹೆಬ್ಬಾವನ್ನು ಹೊರಗೆ ಕಕ್ಕಿದೆ (ವಾಂತಿ ಮಾಡಿದೆ).ಯಾವುದೇ ಅಪಾಯವಾಗದಂತೆ ಕಾಳಿಂಗ ಸರ್ಪವನ್ನು ಹಿಡಿದ ಉರಗ ರಕ್ಷಕರು, ಬಳಿಕ

ಬೆಳ್ತಂಗಡಿ: ಹೆಬ್ಬಾವನ್ನು ನುಂಗಿದ್ದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ರಕ್ಷಣೆ Read More »

ಕರಾವಳಿ

ಇಂದಿನ ಚಿನ್ನದ ಬೆಲೆ

(ನ್ಯೂಸ್‌ ಕಡಬ) newskadaba.com, ಸೆ. 11.22ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹14,015 .8 ಗ್ರಾಂಕ್ಕೆ ₹1,12,120  .10 ಗ್ರಾಂ ಚಿನ್ನದ ಬೆಲೆ ₹1,40,150..100 ಗ್ರಾಂಗೆ ₹14,01,500.. 24ಕ್ಯಾರಟ್ ಚಿನ್ನದ 1 ಗ್ರಾಂ ₹15,289 ..8 ಗ್ರಾಂಗೆ  ₹1,22,312. 10 ಗ್ರಾಂ: ₹1,52,890, 100 ಗ್ರಾಂ: ₹15,28,900.

ಇಂದಿನ ಚಿನ್ನದ ಬೆಲೆ Read More »

ಕರಾವಳಿ

ಪನತ್ತಡಿ ಮೀಸಲು ಅರಣ್ಯದಲ್ಲಿ ಜಿಂಕೆ ಬೇಟೆ: ಓರ್ವ ವಶಕ್ಕೆ, ಇಬ್ಬರು ಪರಾರಿ

(ನ್ಯೂಸ್‌ ಕಡಬ) newskadaba.com, ಸೆ. 11. ಕಾಸರಗೋಡು: ಪನತ್ತಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಕರಿಕೆ ಸಿದ್ದಿಕ್ ಎಂ.ಎಚ್. (50). ಸುಮಾರು 40 ಕೆಜಿ ಜಿಂಕೆ ಮಾಂಸ, ದೇಶೀ ನಿರ್ಮಿತ ಬಂದೂಕು ಹಾಗೂ ಮದ್ದುಗುಂಡುಗಳು. ಕಾಞಂಗಾಡ್ ವಲಯ ಅರಣ್ಯಾಧಿಕಾರಿ ಕೆ. ರಾಹುಲ್ ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಪಣತ್ತಡಿ ವಲಯ ಅರಣ್ಯಾಧಿಕಾರಿ ಎಂ.ಪಿ. ರಾಜು

ಪನತ್ತಡಿ ಮೀಸಲು ಅರಣ್ಯದಲ್ಲಿ ಜಿಂಕೆ ಬೇಟೆ: ಓರ್ವ ವಶಕ್ಕೆ, ಇಬ್ಬರು ಪರಾರಿ Read More »

ಕರಾವಳಿ
Scroll to Top