
(ನ್ಯೂಸ್ ಕಡಬ) newskadaba.com, ಸೆ. 12. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಕಡಿಂಗ ನಿವಾಸಿ ಹಿತೇಶ್ ಎಂಬುವರ ತೋಟದಲ್ಲಿ ಸುಮಾರು 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ.ಕುಟುಂಬಸ್ಥರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಲಾಯಿಲದ ಉರಗ ರಕ್ಷಕ ‘ಸ್ನೇಕ್ ಅಶೋಕ್’, ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ರಕ್ಷಣೆಯ ಸಮಯದಲ್ಲಿ ಕಾಳಿಂಗ ಸರ್ಪವು ತಾನು ನುಂಗಿದ್ದ ಹೆಬ್ಬಾವನ್ನು ಹೊರಗೆ ಕಕ್ಕಿದೆ (ವಾಂತಿ ಮಾಡಿದೆ).ಯಾವುದೇ ಅಪಾಯವಾಗದಂತೆ ಕಾಳಿಂಗ ಸರ್ಪವನ್ನು ಹಿಡಿದ ಉರಗ ರಕ್ಷಕರು, ಬಳಿಕ ಅದನ್ನು ಸುರಕ್ಷಿತವಾಗಿ ದಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.




