ದಕ್ಷಿಣ ಕನ್ನಡ: ಇಂದಿನಿಂದ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ಪೂರ್ಣ ದಿನ ತರಗತಿ — ಶಿಕ್ಷಣ ಇಲಾಖೆ ಆದೇಶ

(ನ್ಯೂಸ್‌ ಕಡಬ) newskadaba.com, ಸೆ. 12. ಮಳೆಯಿಂದಾಗಿ ನಷ್ಟವಾದ ಶೈಕ್ಷಣಿಕ ದಿನಗಳನ್ನು ಸರಿದೂಗಿಸಲು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೆಪ್ಟೆಂಬರ್ 12ರಿಂದ ಪ್ರತಿ ಶನಿವಾರ ಪೂರ್ಣ ದಿನ ತರಗತಿ ನಡೆಸಲು ಶಿಕ್ಷಣ ಇಲಾಖೆ ಆದೇಶಿಸಿದೆ.

ಈ ಮುಂಗಾರಿನಲ್ಲಿ ನಿರಂತರ ಮಳೆಯಿಂದಾಗಿ ಜಿಲ್ಲಾಡಳಿತವು 10ಕ್ಕೂ ಹೆಚ್ಚು ದಿನ ರಜೆ ನೀಡಿದ್ದರಿಂದ ಪಠ್ಯಕ್ರಮ ಪೂರ್ಣಗೊಳಿಸುವುದು ವಿಳಂಬವಾಗಿತ್ತು.ಅರ್ಧ ದಿನದ ಬದಲಾಗಿ ಪೂರ್ಣ ದಿನದ ತರಗತಿಗಳ ಜೊತೆಗೆ, ಅಗತ್ಯಕ್ಕೆ ತಕ್ಕಂತೆ ವಿಶೇಷ ಪರಿಹಾರ ತರಗತಿಗಳನ್ನು ಆಯೋಜಿಸಲು ಶಾಲೆಗಳಿಗೆ ಸೂಚಿಸಲಾಗಿದೆ.

ಹೆಚ್ಚುವರಿ ತರಗತಿಗಳು, ಹಾಜರಾತಿ ಹಾಗೂ ವೇಳಾಪಟ್ಟಿಯ ಸಮರ್ಪಕ ದಾಖಲೆಗಳನ್ನು ನಿರ್ವಹಿಸುವುದು ಪ್ರತಿಯೊಂದು ಶಾಲಾ ಆಡಳಿತ ಮಂಡಳಿಗೆ ಕಡ್ಡಾಯಗೊಳಿಸಲಾಗಿದೆ.

Scroll to Top