ಕರ್ನಾಟಕ

ಉಡುಪಿ: 12ನೇ ಶತಮಾನದ ಭಗ್ನ ವಿಷ್ಣುಮೂರ್ತಿ ಶಿಲ್ಪ ಪತ್ತೆ

(ನ್ಯೂಸ್ ಕಡಬ) newskadaba.com ಶಿರ್ವ, ಫೆ. 04. ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದಿಂದ, ಜನವರಿ 24 ಮತ್ತು 31 ರ ಭಾನುವಾರಗಳಂದು ನಡೆಸಿದ ಪುರಾತತ್ವ ಅನ್ವೇಷಣೆಯಲ್ಲಿ ಸುಮಾರು 12 ನೇ ಶತಮಾನಕ್ಕೆ ಸೇರಿದ ಅತ್ಯಾಕರ್ಷಕ ಜನಾರ್ಧನ/ವಿಷ್ಣುಮೂರ್ತಿಯ ಶಿಲ್ಪ ಪತ್ತೆಯಾಗಿದೆಯೆಂದು ಪ್ರೊ. ಟಿ.ಮುರುಗೇಶಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.     ಉಡುಪಿ ಜಿಲ್ಲೆ, ಉಡುಪಿ ತಾಲೂಕಿನ ಬಡಗಬೆಟ್ಟು ಪಂಚಾಯಿತಿಯ ಹಿಂಭಾಗದಲ್ಲಿರುವ ಕಾಡಿನಲ್ಲಿ ಪಾಳು ಬಿದ್ದ ದೇಗುಲವಿದೆ, […]

ಉಡುಪಿ: 12ನೇ ಶತಮಾನದ ಭಗ್ನ ವಿಷ್ಣುಮೂರ್ತಿ ಶಿಲ್ಪ ಪತ್ತೆ Read More »

ಕರಾವಳಿ, ಕರ್ನಾಟಕ

ಕ್ಯಾನ್ಸರ್ ಚಿಕಿತ್ಸೆಗೆ ಸ್ಪಂದಿಸುತ್ತದೆ ➤ ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 04. ಹೆಚ್ಚಿನ ಎಲ್ಲಾ ಕ್ಯಾನ್ಸರ್ ತಡೆಗಟ್ಟಬಹುದಾದ ರೋಗವಾಗಿದ್ದು, ಮಾರಣಾಂತಿಕ ರೋಗಗಳ ಪಟ್ಟಿಯಲ್ಲಿ ಹೃದಯಘಾತದ ನಂತರ ಎರಡನೇ ಸ್ಥಾನಪಡೆದಿದೆ. ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಕ್ಯಾನ್ಸರ್ ರೋಗ ಬಂದವರೆಲ್ಲ ಸಾಯುವುದಿಲ್ಲ. ಹೆಚ್ಚಿನ  ಎಲ್ಲಾ ಕ್ಯಾನ್ಸರ್‍ ಗಳು ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತದೆ ಎಂದು ಡಾ|| ಮುರಲಿ ಮೋಹನ ಚೂಂತಾರು ಅಭಿಪ್ರಾಯ ಪಟ್ಟರು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ

ಕ್ಯಾನ್ಸರ್ ಚಿಕಿತ್ಸೆಗೆ ಸ್ಪಂದಿಸುತ್ತದೆ ➤ ಡಾ|| ಚೂಂತಾರು Read More »

ಕರಾವಳಿ, ಕರ್ನಾಟಕ

ಕಡಬ: ಫೆ. 22ರಿಂದ ಫೆ. 24ರ ವರೆಗೆ ಪರಪ್ಪು ಧರ್ಮ ನೇಮೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಫೆ. 04. ತಾಲೂಕಿನ ಕಡಬ ಗ್ರಾಮದ ಪರಪ್ಪು ಎಂಬಲ್ಲಿ ಹಚ್ಚ ಹಸುರಿನ ತನ್ಮದ್ಯದಲ್ಲಿ ಶ್ರೀ ಆದಿನಾಗಬ್ರಹ್ಮ ಹಾಗೂ ಗುರು ಅಣ್ಣಪ್ಪ ಪಂಜುರ್ಲಿ ಮತ್ತು ಕೊರಗಜ್ಜ ಸ್ವಾಮಿ ವಿರಾಜಮಾನರಾಗಿ ನೆಲೆಸಿದ್ದು, ಇದರ ಧರ್ಮ ನೇಮೋತ್ಸವವು ಫೆ. 22ರಿಂದ ಫೆ.24ರ ವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಪುಣ್ಯ ಕ್ಷೇತ್ರವು ಪುರಾತನವನ್ನು ಹೊಂದಿದ್ದು, ಅಷ್ಟೇ ಕಾರಣಿಕತೆಯನ್ನೂ ಹೊಂದಿದೆ. ಇಲ್ಲಿ ಭಕ್ತರ ಅನೇಕ ಇಷ್ಟಾರ್ಥಗಳು ನೆರವೇರಿದ ಸನ್ನಿವೇಶಗಳಿವೆ.

ಕಡಬ: ಫೆ. 22ರಿಂದ ಫೆ. 24ರ ವರೆಗೆ ಪರಪ್ಪು ಧರ್ಮ ನೇಮೋತ್ಸವ Read More »

ಕರಾವಳಿ, ಕರ್ನಾಟಕ

ಪುತ್ತೂರು: ದೇವಸ್ಯದ ಕಿರುಸೇತುವೆಯ ಅಗಲೀಕರಣ ಕಾಮಗಾರಿ ಹಿನ್ನೆಲೆ ➤ ಬದಲಿ ರಸ್ತೆ ಉಪಯೋಗಿಸುವಂತೆ ಲೋಕೋಪಯೋಗಿ ಇಲಾಖೆ ಸೂಚನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 04. ತಾಲೂಕಿನ ಆರ್ಯಾಪು ಗ್ರಾಮ ವ್ಯಾಪ್ತಿಯ ದೇವಸ್ಯ ಎಂಬಲ್ಲಿ ಕಿರಿದಾದ ಸೇತುವೆಯ ಅಗಲೀಕರಣದ ಹಿನ್ನೆಲೆ 11 ದಿನಗಳ ಕಾಲ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯ ದೇವಸ್ಯ ಎಂಬಲ್ಲಿ ಸೇತುವೆ ಅಗಲೀಕರಣ ಕಾಮಗಾರಿ ಹಿನ್ನೆಲೆ ಫೆಬ್ರವರಿ 5 ರಿಂದ 15 ರ ವರೆಗೆ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿ, ಲೋಕೋಪಯೋಗಿ ಇಲಾಖೆಯು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್‍ ಗೆ ಪತ್ರ ಬರೆದಿದ್ದು, ‘ಸೇತುವೆ ಅಗಲೀಕರಣ

ಪುತ್ತೂರು: ದೇವಸ್ಯದ ಕಿರುಸೇತುವೆಯ ಅಗಲೀಕರಣ ಕಾಮಗಾರಿ ಹಿನ್ನೆಲೆ ➤ ಬದಲಿ ರಸ್ತೆ ಉಪಯೋಗಿಸುವಂತೆ ಲೋಕೋಪಯೋಗಿ ಇಲಾಖೆ ಸೂಚನೆ Read More »

ಕರಾವಳಿ, ಕರ್ನಾಟಕ

ಬೆಂಗಳೂರು: ಶಾಸಕ ಎಸ್.ಅಂಗಾರ ಅವರ ನೂತನ ಕಛೇರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 04. ಬಂದರು, ಮೀನುಗಾರಿಕಾ ಸಚಿವರಾದ ಎಸ್.ಅಂಗಾರರಿಗೆ ಇಲ್ಲಿನ ವಿಧಾನಸೌಧದ ಕೊಠಡಿ ನಂಬರ್ 252 ಮತ್ತು 253 ‘ಎ’ ಆ ಕೊಠಡಿಗಳಲ್ಲಿ ನಿಗದಿಯಾಗಿದ್ದು, ಸಚಿವರ ಕಚೇರಿಯು ಇಂದು ಶುಭಾರಂಭಗೊಂಡಿತು. ಇದರ ವಾಸ್ತುಪೂಜೆಯನ್ನು ಸುಬ್ರಹ್ಮಣ್ಯ ಪುರೋಹಿತ ಶ್ರೀಕಾಂತ ಮಯ್ಯ ಹಾಗೂ ತಂಡದವರು ಫೆ.03ರ ರಾತ್ರಿ ಕಚೇರಿಯಲ್ಲಿ ನೆರವೇರಿಸಿದರು ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಹಿರಿಯ ನಾಯಕರಾದ ಎ.ವಿ.ತೀರ್ಥರಾಮ, ಕೃಷ್ಣ ಶೆಟ್ಟಿ

ಬೆಂಗಳೂರು: ಶಾಸಕ ಎಸ್.ಅಂಗಾರ ಅವರ ನೂತನ ಕಛೇರಿ ಶುಭಾರಂಭ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗುಡಿಸಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ➤ ಎರಡು ಮೇಕೆಯ ಜೊತೆಗೆ ಧವಸ-ಧಾನ್ಯಗಳು ಸುಟ್ಟು ಕರಕಲು

(ನ್ಯೂಸ್ ಕಡಬ) newskadaba.com ತುಮಕೂರು, ಫೆ. 04. ಯಾರೂ ಇಲ್ಲದ ಸಮಯದಲ್ಲಿ ಹಾಡಹಗಲೇ ಕಿಡಿಗೇಡಿಗಳು ಗುಡಿಸಲಿಗೆ ಬೆಂಕಿ ಹಚ್ಚಿದ ಪರಿಣಾಮ ಎರಡು ಮೇಕೆ ಮತ್ತು ದವಸಧಾನ್ಯಗಳು ಸುಟ್ಟು ಕರಕಲಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದಿದೆ. ಗುಡಿಸಲಿನಲ್ಲಿ ವಾಸಿಸುತ್ತಿದ್ದ ತಾಲೂಕಿನ ಹರಿಹರಾಪುರ ಗ್ರಾಮದ ತಿಮ್ಮಕ್ಕ ಹಾಗೂ ದೊಡ್ಡಹನುಮಂತರಾಯಪ್ಪ ದಂಪತಿ ಕೂಲಿ ಕೆಲಸಕ್ಕೆಂದು ತೆರಳಿದ ಸಂದರ್ಭ ಈ ದುರ್ಘಟನೆ ನಡೆದಿದ್ದು, ಎಲ್ಲವನ್ನೂ ಕಳೆದುಕೊಂಡಿರುವ ಅವರ ರೋಧನ ಮುಗಿಲು ಮುಟ್ಟಿದೆ. ಗುಡಿಸಲಿಗೆ ಬಂಕಿ ಕೊಟ್ಟ ಕಿರಾತಕರು ಮನೆ ಮುಂದೆಯೇ

ಗುಡಿಸಲಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ➤ ಎರಡು ಮೇಕೆಯ ಜೊತೆಗೆ ಧವಸ-ಧಾನ್ಯಗಳು ಸುಟ್ಟು ಕರಕಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಗುತ್ತಿಗೆ ಪ್ರಶ್ನಿಸಿ ಕೆಂದ್ರಕ್ಕೆ ರಾಜ್ಯ ಹೈಕೋರ್ಟ್ ನೋಟಿಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 04. ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಕೇಂದ್ರ ಸರ್ಕಾರವು ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ 3 ವಿಮಾನ ನಿಲ್ದಾಣಗಳನ್ನು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಗ್ರೂಪ್ಸ್‌ಗೆ ಗುತ್ತಿಗೆಗೆ ನೀಡಿದ್ದು, ಇದನ್ನು ಪ್ರಶ್ನಿಸಿ ಮತ್ತು 2019 ರಲ್ಲಿ ಸಂಸತ್ ಈ ಕುರಿತು ತೆಗೆದುಕೊಂಡ ನಿರ್ಧಾರವನ್ನು ರದ್ದುಗೊಳಿಸುವಂತೆ ಕೋರಿ ಮಂಗಳೂರಿನ ವಿಮಾನ ನಿಲ್ದಾಣ ಪ್ರಾಧಿಕಾರ ನೌಕರರ ಒಕ್ಕೂಟ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಗುತ್ತಿಗೆ ಪ್ರಶ್ನಿಸಿ ಕೆಂದ್ರಕ್ಕೆ ರಾಜ್ಯ ಹೈಕೋರ್ಟ್ ನೋಟಿಸ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಂಜ: ವರ್ಷಾವಧಿ ಜಾತ್ರೋತ್ಸವ ಹಸಿರು ಕಾಣಿಕೆ ಮೆರವಣಿಗೆಯ ಮೂಲಕ ಸಮಾಪ್ತಿ

(ನ್ಯೂಸ್ ಕಡಬ) newskadaba.com ಪಂಜ, ಫೆ. 04. ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಮಹೋತ್ಸವ ಆರಂಭಗೊಂಡು ಫೆ. 03 ರಂದು ಹಸಿರು ಕಾಣಿಕೆ ಮೆರವಣಿಗೆಯು ಕಟ್ಟೆಯಿಂದ ಆರಂಭಗೊಂಡು ದೇವಳಕ್ಕೆ ಸಮರ್ಪಣೆ ಗೊಂಡಿತು. ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ತಿಮ್ಮಪ್ಪಗೌಡ ಪುತ್ಯ ಅವರು ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ರೈ ಅಗೋಳಿ ಬೈಲುಗುತ್ತು, ದೇವಳದ ಮಾಜಿ ಆಡಳಿತಾಧಿಕಾರಿಗಳು ಡಾ. ದೇವಿಪ್ರಸಾದ್ ಕಾನತ್ತೂರ್, ತಾಲೂಕು

ಪಂಜ: ವರ್ಷಾವಧಿ ಜಾತ್ರೋತ್ಸವ ಹಸಿರು ಕಾಣಿಕೆ ಮೆರವಣಿಗೆಯ ಮೂಲಕ ಸಮಾಪ್ತಿ Read More »

ಕರಾವಳಿ, ಕರ್ನಾಟಕ

ಕಾಪು: ಮಂದಿರದ ಕಾಣಿಕೆ ಹುಂಡಿಯಿಂದ ಕಳವು

(ನ್ಯೂಸ್ ಕಡಬ) newskadaba.com ಕಾಪು, ಫೆ. 04. ಮೂಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬಳಿಯಿರುವ ನಾರಾಯಣಗುರು ಮಂದಿರಕ್ಕೆ ನುಗ್ಗಿದ ಕಳ್ಳರು ಕಾಣಿಕೆಹುಂಡಿಯನ್ನು ದೋಚಿದ ಘಟನೆ ನಡೆದಿದೆ. ಎಂದಿನಂತೆ ಪೂಜೆಗಾಗಿ ಅರ್ಚಕರು ಇಂದು ಬೆಳಗ್ಗಿನ‌ ಜಾವ ಮಂದಿರಕ್ಕೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಮಂದಿರದ ಬಾಗಿಲಿನ ಚಿಲಕ ಮುರಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ ನಗದನ್ನು ಕಳವು ಮಾಡಿದ್ದಾರೆ. ಅಲ್ಲದೆ ಕಪಾಟಿನ ಬೀಗ ಮುರಿದಿದ್ದಾರೆ. ಈ ಕುರಿತು ಕಾಪು ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.

ಕಾಪು: ಮಂದಿರದ ಕಾಣಿಕೆ ಹುಂಡಿಯಿಂದ ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳ ದಾಳಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ. 04. ಇಲ್ಲಿನ ಪೆರ್ನೆ ಸಮೀಪ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಜಾಗಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಕ್ರಮ ಮರಳುಗಾರಿಕೆಯನ್ನು ಪತ್ತೆ ಹಚ್ಚಲಾಗಿದೆ. ಪೆರ್ನೆ ಗ್ರಾಮದ ಕಳೆಂಜ ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮ ಮರಳು ಸಂಗ್ರಹದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹದೇಶ್ವರ ಮತ್ತು ಅಧಿಕಾರಿಗಳ ತಂಡ ದಾಳಿ ನಡೆಸುವ ಅಕ್ರಮವಾಗಿ ದೋಣಿಯ ಮೂಲಕ

ಉಪ್ಪಿನಂಗಡಿ: ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳ ದಾಳಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top